ಸಕಾರಾತ್ಮಕ ಚಿಂತನೆಯಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ
ಕ.ಪ್ರ.ವಾರ್ತೆ , ಪಾವಗಡ , ಜ.10
ಸಕಾರಾತ್ಮಕ ಚಿಂತನೆಗಳಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಿಸಲು ಸಾಧ್ಯವೆಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಭಾರತೀಯ ವೈದ್ಯಕೀಯ ಸಂಘ, ಪಾವಗಡ ತಾ.ಶಾಖೆ ವತಿಯಿಂದ ನಡೆದ ಐಎಂಎ ಸಂಘದ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ವೈದ್ಯಕೀಯ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡಿದವರನ್ನು ಪ್ರೋತ್ಸಾಹಿಸಬೇಕು. ಹಾಗೆಯೇ ಅವರನ್ನು ಬೆನ್ನುತಟ್ಟುವ ಕೆಲಸ ಮಾಡಿದರೆ ಆತ ಇನ್ನೂ ಉತ್ತಮ ಕೆಲಸ ಮಾಡಲು ಸಾಧ್ಯ. ಅಂತಹ ಒಂದು ಮನಸ್ಥಿತಿ ಎಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದರು.
ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಸೇರಿ ಸಮಾಜ ಸೇವೆ ಮಾಡಿದರೆ ಅಭಿವೃದ್ಧಿ ಸಾಧ್ಯ. ಪೊಲೀಸರು ಕ್ರಿಯಾಶೀಲರಾಗಿ ಕೆಲಸ ಮಾಡಿದರೆ ಜನ ಜೀವನ ಸುಗಮವಾಗಿರುತ್ತದೆ. 1970ರಲ್ಲಿ ಪಾವಗಡದಲ್ಲಿ ಆಶ್ರಮ ಸ್ಥಾಪಿಸುವ ಸಂದರ್ಭದಲ್ಲಿ ವೈದ್ಯರಾದ ಡಾ. ವೆಂಕಟರಾಮಯ್ಯ, ಡಾ. ಚಕ್ಕರರೆಡ್ಡಿ, ಡಾ. ಹನುಮಂತರಾಯಪ್ಪ, ಡಾ. ಸುಧಾಕರರೆಡ್ಡಿ ಇತರರು ನೀಡಿದ ಸಹಕಾರದಿಂದಲೇ ಇಂದು ಆಶ್ರಮದಲ್ಲಿ ಉತ್ತಮ ಆಸ್ಪತ್ರೆ ತೆರೆಯಲು ಸಾಧ್ಯವಾಯಿತೆಂದು ಸ್ಮರಿಸಿದರು. ಐಎಂಎ ತಾ. ಕಾರ್ಯದರ್ಶಿ ಡಾ. ಜಿ.ವೆಂಕಟರಾಮಯ್ಯ ಮಾತನಾಡಿ, ನಕಲಿ ವೈದ್ಯರ ಹಾವಳಿ ತಡೆಯುವಲ್ಲಿ ಪೊಲೀಸರ ಪ್ರಾಮಾಣಿಕತೆ ಸೇರಿದಂತೆ ಐಎಂಎ ಕಟ್ಟಡಕ್ಕೆ ಉಚಿತ ನಿವೇಶನ ನೀಡಿದ ಡಾ.ಚಕ್ಕರರೆಡ್ಡಿ, ಕಟ್ಟಡ ನಿರ್ಮಾಣಕ್ಕೆ ಉಚಿತ 7ಲಕ್ಷ ರು. ಹಣ ದಾನವಾಗಿ ನೀಡಿದ ಐಎಂಎ ತಾ.ಅಧ್ಯಕ್ಷ ಡಾ.ವಿ.ಕೆ. ಚೌದರಿ ಇತರರನ್ನು ಅವರನ್ನು ಸ್ಮರಿಸಿದರು.
ಸನ್ಮಾನ: ಜಪಾನಂದ ಸ್ವಾಮೀಜಿ ಸೇರಿದಂತೆ ಐಎಂಎ ಸಂಘದ ರಾಷ್ಟ್ರೀಯ ಮಾಜಿ ಅಧ್ಯಕ್ಷ ಡಾ. ಜಿ.ಕೆ.ರಾಮಚಂದ್ರ, ರಾಜ್ಯಾಧ್ಯಕ್ಷ ಯೋಗಾನಂದರೆಡ್ಡಿ, ರಾಜ್ಯ ಕೆಜೆಎಂಒಎನ ಅಧ್ಯಕ್ಷ ವೀರಭದ್ರಪ್ಪ, ಎನ್. ವೀರಣ್ಣ, ಸರ್ಕಾರಿ ಆಸ್ಪತ್ರೆಯ ಡಿಎಚ್ಒ ಚನ್ನಮಲ್ಲಪ,್ಪ ತಾ.ಆರೋಗ್ಯಧಿಕಾರಿ ಡಾ. ಚನ್ನಕೇಶವ ಮುಂತಾವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.
ಸೊಗಡು ವೆಂಕಟೇಶ್, ತಹಸೀಲ್ದಾರ್ ಎಂ. ಪಾಷ, ಸಿಪಿಐಗಳಾದ ಭಾನುಪ್ರಕಾಶ್, ಎಂ.ಎಂ.ಪಾಷ ಡಾ,ಚಕ್ಕರರೆಡ್ಡಿ, ಡಾ. ರವಿಶಂಕರ್ ಡಾ.ಆರ್.ವಿ.ಶೆಟ್ಟಿ, ಡಾ, ಪ್ರೇಮಯೋಗಿ , ಡಾ.ಹನುಮಂತರಾಯಪ್ಪ, ಡಾ.ನಾರಾಯಣಪ್ಪ ಮಕ್ಕಳ ತಜ್ಞ ಡಾ. ಕಿರಣ್ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಸ್ವಾಗತ ಹಾಗೂ ನಿರೂಪಣೆಯನ್ನು ಶಿಕ್ಷಕ ಚಟ್ಟಾ ನರಸಿಂಹಮೂರ್ತಿ ನೆರವೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

