'ವೈಚಾರಿಕತೆಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ'
ತುಮಕೂರು: ಇಂದಿನ ವಿದ್ಯಾರ್ಥಿ-ಯುವಜನರು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಚಿಂತಕ ಪ್ರೊ. ಜಿ.ಎಂ. ಶ್ರೀನಿವಾಸಯ್ಯ ಕರೆ ನೀಡಿದರು
ಅವರು ನಗರದ ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಫ್.ಐ, ಡಿ.ವೈ.ಎಫ್.ಐ ಸಂಘಟನೆಗಳು ಹಮ್ಮಿಕೊಂಡಿದ್ದು ರಾಷ್ಟ್ರಕವಿ ಕುವೆಂಪು ಅವರ ಜನ್ಮಾದಿನಾಚರಣೆಯ ಅಂಗವಾಗಿ ವಿಚಾರಕ್ರಾಂತಿಗೆ ಕುವೆಂಪು ಕರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ದೇಶ ಮೂಢನಂಬಿಕೆಯಿಂದ ಹಿಂದೆ ಸರಿದಿದ್ದು ವೈಜ್ಞಾನಿಕತೆಯಿಂದ ದೇಶ ಸಾಕಷ್ಟು ಪ್ರಗತಿ ಸಾಧಿಸಬೇಕಾಗಿದೆ ಜಾತಿಯತೆ, ಕೋಮುವಾದ ಈ ದೇಶದ ಮಹಾನ್ ಶತ್ರುಗಳು ಇವುಗಳಿಂದ ದೇಶದ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎಂದರು.
ದೇವರು, ಧರ್ಮದ ಹೆಸರಿನಲ್ಲಿ ದೇಶವನ್ನು ಹಿಂದುಳಿಯುವಂತೆ ಮಾಡಿದೆ ಎಂದ ಅವರು ಇಂದಿನ ವಿದ್ಯಾರ್ಥಿ-ಯುವಜನರು ಕುವೆಂಪುರವರ ಸಾಹಿತ್ಯಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು ಎಂದು ಕರೆನೀಡಿದರು.
ಪತ್ರಕರ್ತ ಕೆ.ಜಿ. ಮರಿಯಪ್ಪ ಮಾತನಾಡಿ ಕುವೆಂಪು ಅವರು ಒಂದು ಜಾತಿಗೆ ಸೀಮಿತರಾದವರಲ್ಲ. ಅವರು ಜಾತ್ಯತೀತ ವ್ಯಕ್ತಿಯಾಗಿ ದೇಶದಲ್ಲಿ ಮಾನವಿಯ ಮೌಲ್ಯಗಳನ್ನು ಬಿತ್ತುವ ಮೂಲಕ ವಿಶ್ವಮಾನವ ಸಮದೇಶವನ್ನು ನೀಡಿದ ಕವಿ ಕುವೆಂಪು ಅವರ ಸಾಹಿತ್ಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದರು.
ಪತ್ರಕರ್ತ ಎನ್.ಡಿ. ರಂಗರಾಜು ಮಾತನಾಡಿ ಕೇವಲ ಒಂದು ಜಾತಿಗೆ ಸೀಮಿತವಾಗದ ಕುವೆಂಪುರವರು ತಮ್ಮ ಹಲವಾರು ಸಾಹಿತ್ಯಗಳಲ್ಲಿ ಶೋಷಣೆಯ ವಿರುದ್ಧ ಧ್ವನಿಎತ್ತಿದ ಮಹಾನ್ ಕವಿ ಅವುಗಳಲ್ಲಿ ಶೋಷಣೆಗೆ ಒಳಗಾದ ಜನರಿಗೆ ಹೋರಾಟದ ಶಕ್ತಿಯನ್ನು ತುಂಬಿದ ನಾಟಕಗಳು ಎಂದರೆ ಶೂದ್ರತಪಸ್ವಿ ಮತ್ತು ಜಲಗಾರ ಇವುಗಳನ್ನು ವಿದ್ಯಾರ್ಥಿಗಳು ಓದಬೇಕು ಎಂದರು.
ಮೌಢ್ಯತೆಗೆ ಉತ್ತರ: ಸೈಯದ್ ಮುಜೀಬ್ ಮಾತನಾಡಿ ಸಮಾನತೆಯನ್ನು ಸಾರಿದ ರಾಷ್ಟ್ರ ಕವಿಗಳನ್ನು ಇಂದು ಒಂದು ಜಾತಿಗೆ ಸೀಮಿತಗೊಳಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ ಅದರಿಂದ ಅಚೆಗೆ ಅವರ ಮೌಲ್ಯಗಳನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಾಗಿದೆ. ಯಾವಕಾಲದ ಶಾಸ್ತ್ರ ಏನು ಹೇಳಿದರೆನು ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿಹುದೇನು ಎಂಬ ಅವರ ಕವನದ ಸಾಲುಗಳು ಮೌಢ್ಯತೆಯನ್ನು ಬಿತ್ತುವ ಜನರಿಗೆ ಉತ್ತರವಾಗಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಬಿ. ಮರುಳಯ್ಯ ಮಾತನಾಡಿ ಕುವೆಂಪುರವರ ಸಾಹಿತ್ಯದ ಎಲ್ಲಾ ಪುಸ್ತಕಗಳು ಲಭ್ಯವಿದ್ದು ಅದನ್ನು ವಿದ್ಯಾರ್ಥಿಗಳು ಓದುವ ಮೂಲಕ ಅವರ ವಿಚಾರಗಳನ್ನು ತಿಳಿದು ವೈಜ್ಞಾನಿಕ ದೃಷ್ಟಿಯಲ್ಲಿ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಇದರಿಂದ ಸಮಾಜದಲ್ಲಿ ಉತ್ತಮ ವಾತಾವರಣ ರೂಪುಗೊಂಡತಾಗುತ್ತದೆ ಎಂದರು. ಎಸ್.ಎಫ್.ಐ ರಾಜ್ಯ ಸಮಿತಿ ಸದಸ್ಯೆ ದಿವ್ಯ, ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಆದಿಮೂರ್ತಿ, ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ಶಿವಣ್ಣ ಉಪಸ್ಥಿತರಿದ್ದರು. ಲೇಖಕಿಯರ ಸಂಘದ ಅಧ್ಯಕ್ಷರು ಉಪನ್ಯಾಸಕರು ಆದ ಸುಗುಣಾದೇವಿ ಸ್ವಾಗತಿಸಿ ಉಪನ್ಯಾಸಕ ರಾಜ್ಕುಮಾರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

