'ಇಂದಿನ ಶಿಕ್ಷಣದಲ್ಲಿ ಮೌಲ್ಯಗಳ ಕೊರತೆ'
ಕ.ಪ್ರ.ವಾರ್ತೆ , ಚೇಳೂರು , ಜ.13
ಇಂದಿನ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಬೆಟ್ಟದಹಳ್ಳಿಯ ಗವಿಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಮಲ್ಲಿಕಾರ್ಜುನಸ್ವಾಮಿ ಸಂಯುಕ್ತ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೊತ್ಸವ ಹಾಗೂ ಪೋಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಸಾಮಾಜಿಕ ಅರಿವು, ಧಾರ್ಮಿಕ ಪ್ರಜ್ಞೆ, ದೇಶಾಭಿಮಾನ, ಧೈರ್ಯ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಪೋಷಕರು ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಇಂದಿನ ಸ್ಥಿತಿ-ಗತಿಗಳಿಗನುಗುಣವಾಗಿ ಮಕ್ಕಳನ್ನು ಬೆಳೆಸಬೇಕಾಗಿದೆ ಎಂದರು.
ಚೇಳೂರು ಗ್ರಾ.ಪಂ. ಅಧ್ಯಕ್ಷೆ ದೊಡ್ಡಮ್ಮ ಮಾತನಾಡಿ ಮಕ್ಕಳ ಮನಸ್ಸು ಹೂವಿನಂತ ಮನಸ್ಸು ಆ ಮಕ್ಕಳನ್ನು ಎಳೆ ವಯಸ್ಸಿನಲ್ಲಿಯೇ ತಿದ್ದಬೇಕು. ಶಿಕ್ಷಕರು ಆ ಮಕ್ಕಳಿಗೆ ಉತ್ತಮವಾದ ಸಂಗೀತ ಹಾಡುಗಳನ್ನು ಅಭ್ಯಾಸ ಮಾಡಬೇಕು ಅದರ ಜೊತೆಗೆ ಶಾಲೆಯ ಪಠ್ಯ ಪುಸ್ತಕಗಳನ್ನು ಅಭ್ಯಾಸ ಮಾಡಿಸಬೇಕು ಎಂದರು.
ತಾ.ಪಂ. ಸದಸ್ಯೆ ಜಯಮ್ಮ, ಪೋಷಕ ಸಮಿತಿ ಅಧ್ಯಕ್ಷ ಕೆಂಪಸಿದ್ದಯ್ಯ, ಮಹಾಲಿಂಗಯ್ಯ, ಶಿವಣ್ಣ, ಸಿ.ಆರ್. ರಂಗಪ್ಪ, ಗ್ರಾ.ಪಂ. ಸದಸ್ಯರಾದ ಶಿವಕುಮಾರ್, ಸಿ.ಎನ್ ನಾಗರಾಜು, ಕಾಂತರಾಜು ಸಿ.ಕೆ , ಎಸ್.ಎಮ್ ಶಿವಕುಮಾರ್, ಹೇಮಂತ್ ಕುಮಾರ್, ಪದ್ಮ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪರಮೇಶ್, ಸಿ.ಎನ್ ಬಸವರಾಜು, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.
ಚನ್ನಬಸವಯ್ಯ, ಸಿ.ಎಸ್. ಶಿವಕುಮಾರ್ ನಿರೂಪಿಸಿದರು. ಬಿಂದುಶ್ರೀ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಗಂಗಾಧರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

