ತುಮಕೂರು

ಸಡಗರದ ಸಂಕ್ರಾಂತಿ ಹಬ್ಬಕ್ಕೆ ಸಿದ್ಧತೆ

Published On :

ಕ.ಪ್ರ.ವಾರ್ತೆ ,  ತುಮಕೂರು/ ಚೇಳೂರು ,  ಜ.14
ಮತ್ತೊಂದು ಸಂಕ್ರಾಂತಿ ಹಬ್ಬದ ಆಚರಣೆಗೆ ತುಮಕೂರು ಸಜ್ಜಾಗಿದೆ.
ಸಾಲು ಸಾಲು ರಜದ ಬೆನ್ನಲ್ಲೇ ಬಂದಿರುವ ಸಂಕ್ರಾಂತಿಗೆ ಜೋರು ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಹಬ್ಬದ ತಯಾರಿಯಲ್ಲಿ ತೊಡಗಿರುವ ಜನ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಎಡತಾಕುತ್ತಿದ್ದಾರೆ.
ಈಗಾಗಲೇ ಹೂವುಗಳು, ಕಬ್ಬುಗಳು, ಸಕ್ಕರೆ ಅಚ್ಚು, ಎಳ್ಳು, ತರಕಾರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜನ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಮುಗಿ ಬೀಳುತ್ತಿದ್ದಾರೆ.
ತುಮಕೂರಿನ ಮಂಡಿಪೇಟೆಯಲ್ಲಿರುವ ಸಿದ್ಧಿವಿನಾಯಕ ಮಾರುಕಟ್ಟೆಯಲ್ಲಿ ಅಕ್ಷರಶಃ ಜನ ಜಾತ್ರೆ. ತುಮಕೂರು, ಅಕ್ಕಪಕ್ಕದ ಹಳ್ಳಿಗಳಿಂದ ಜನ ಮಾರುಕಟ್ಟೆಗೆ ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಇನ್ನು ಕೆಲವು ಬಡಾವಣೆಗಳಲ್ಲಿ ಸಣ್ಣ ಮಾರುಕಟ್ಟೆಯೇ ಆರಂಭವಾಗಿದೆ. ಸೋಮೇಶ್ವರಪುರಂ, ಎಸ್‌ಐಟಿ, ಗೋಕುಲ, ಬಟವಾಡಿ ಮುಂತಾದ ಕಡೆಗಳಲ್ಲಿ ಸಣ್ಣ ಮಾರುಕಟ್ಟೆ ತಲೆ ಎತ್ತಿದ್ದು ಹೂವು, ತರಕಾರಿ ಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ.
ಎಲ್ಲಾ ವೆರೈಟಿ ಹೂವುಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೆ.  ಇದು ಮಾರುಕಟ್ಟೆ ಕಥೆಯಾದರೆ ಬಟ್ಟೆ ಮತ್ತಿತರ ವಸ್ತುಗಳನ್ನು ಖರೀದಿಸಲು ಜನ ಈಗ ಎಂ.ಜಿ. ರಸ್ತೆ, ಬಿ.ಎಚ್. ರಸ್ತೆಗೆ ಎಡತಾಕುತ್ತಿದ್ದಾರೆ.
ಒಟ್ಟಾರೆಯಾಗಿ ತುಮಕೂರಿನಲ್ಲಿ ಹಬ್ಬದ ಸಂಭ್ರ ಹೆಚ್ಚಿದೆ.
ಚೇಳೂರಿನಲ್ಲೂ ಸಂಭ್ರಮ: ಸಂಕ್ರಾಂತಿ ಹಬ್ಬ ಕೇವಲ ತುಮಕೂರಿಗಷ್ಟೆ ಸಡಗರ ಮೂಡಿಸಿಲ್ಲ. ಗ್ರಾಮೀಣ ಭಾಗಕ್ಕೂ ಇದರ ಸಂಭ್ರಮ ಹರಡಿದೆ.  ಸಂಕ್ರಾಂತಿಯ ಸಂಭ್ರಮ ವ್ಯಾಪಾರಸ್ಥರು ಹಬ್ಬಕ್ಕೆ ಬೇಕಾದ ಕಬ್ಬು ಗೆಣಸು ಕಡ್ಲೆಕಾಯಿ ಅವರೆಕಾಯಿ, ಎಳ್ಳು ಬೆಲ್ಲಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಲು ಸಾಲಾಗಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
ನಾಗರಿಕತೆ ಬೆಳೆದಂತೆ ಜನರಲ್ಲಿ ಆಚರಣೆಗಳು ಸಹ ಬೆಳೆಯುತ್ತಿವೆ. ಕಳೆದ ಹತ್ತು ವರ್ಷಗಳ ಹಿಂದೆ ಈ ಆಚರಣೆಗಳು ನಮ್ಮ ಜನರಲ್ಲಿ ಇರಲಿಲ್ಲ. ನಗರ ಪ್ರದೇಶದಲ್ಲಿ ಮಾತ್ರ ಸೀಮಿತವಾಗಿದ್ದವು. ಆದರೆ ಈಗ ಗ್ರಾಮೀಣ ಭಾಗಕ್ಕೂ ಲಗ್ಗೆ ಇಟ್ಟಿವೆ ಎನ್ನುತ್ತಾರೆ ಹಿರಿಯ ನಂಜಯ್ಯ.
ಕಾಲ ಬದಲಾದಂತೆ ಜನರಲ್ಲಿ ನಾಗರೀಕತೆಯ ಅರಿವು ಬೆಳೆದು ನಮ್ಮ ದೇಶದ ಬೆಳೆದು ಬಂದ ಸಂಸ್ಕೃತಿಯ ಆಚರಣೆಗಳು ಎಲ್ಲರ ಮನೆ ತಲುಪಿವೆ ಈಗ ಸಂಕ್ರಾಂತಿಯ ಸಡಗರ ಮನೆಮಾತಾಗಿದ್ದು ಪ್ರತಿಯೊಬ್ಬರು ಸಂಕ್ರಾಂತಿಯ ದಿನದಂದು ಸಂಭ್ರಮದಿಂದ ಮಾರುಕಟ್ಟೆಯಲ್ಲಿ ಗೆಣಸು ಕಬ್ಬು ಕಡ್ಲೆಕಾಯಿ ಅವರೆಯಕಾಯಿ ಎಳ್ಳು ಬೆಲ್ಲ ಖರೀದಿಸುತ್ತಿದ್ದಾರೆ. ವ್ಯಾಪಾರಸ್ಥರು ಸಹ ಜನರಿಗೆ ಸಂಕ್ರಾಂತಿಯ ಸಾಮಗ್ರಿಗಳನ್ನು ಒದಗಿಸಲು ನಾಮುಂದು ನಾಮುಂದು ಎಂದು ಆಕರ್ಷಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.