ತುಮಕೂರು

'ಸೃಜನಶೀಲತೆಯಿಂದ ನಾಟಕ ನಿರಂತರ'

Published On :

ತುಮಕೂರು: ನಾಟಕ ಕಲೆ ಇಂದಿಗೂ ತನ್ನ ಹೊಸತನದೊಂದಿಗೆ ನಮ್ಮೆದರು ಪ್ರದರ್ಶನಗೊಳ್ಳುತ್ತಿರುವುದು ಅದರ ಸೃಜನಶೀಲಗುಣದಿದಾಗಿ. ಆಧುನಿಕತೆ ಎಷ್ಟೇ ಪ್ರಭಾವ ಬೀರಿದರೂ ಈ ಸೊಗಡ ಕಂಪನ್ನು ನಾಡಿನ ಜನಮನದಿಂದ ದೂರ ಮಾಡಲು ಸಾಧ್ಯವಿಲ್ಲ ಎಂದು ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆ ನಿವೃತ್ತ ಅಧಿಕಾರಿ ಹನುಮಂತಪ್ಪ ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ಹಾಗೂ ಕುಸುಮ ಕಲಾ ಸಂಘ ಮೆಳೇಕಲ್ಲಹಳ್ಳಿ ಆಶ್ರಯದಲ್ಲಿ ಗುಬ್ಬಿ ತಾಲೂಕಿನ ಕೊಮ್ಮನಹಳ್ಳಿಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಗ್ರಾಮಗಳಲ್ಲಿ ನಾಟಕಗಳು, ಜಾನಪದ ಕೋಲಾಟಗಳು, ತಿಂಗಳ ಮಾಮನ ಪೂಜೆ, ಮದುವೆ ಸಮಾರಂಭಗಳಲ್ಲಿ ಕೋಲೆಬಸವನ ಕುಣಿತ ಮುಂತಾದ ಕಾರ್ಯಕ್ರಮಗಳ ಜೊತೆಯಲ್ಲಿ ಕಥೆ ಓದುವುದು, ಮೊಮ್ಮಕ್ಕಳಿಗೆ ಅಜ್ಜಿ-ಅಜ್ಜನಿಂದ ಕಥೆ ಹೇಳುವ ಮೂಲಕ ಮನರಂಜನೆಯನ್ನು ಪಡೆಯುತ್ತಿದ್ದ ನಾವುಗಳು ಇಂದು ಆಧುನಿಕತೆಯ ಪ್ರಭಾವದಿಂದ ನಾಜೂಕಿನ ಬದುಕಿನೊಂದಿಗೆ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರು. ಕಡಬ ಗ್ರಾಪಂ ಅಧ್ಯಕ್ಷೆ ಕಮಲಮ್ಮ ಹಾಗೂ ಸದಸ್ಯ ವೆಂಕಟರಂಗಯ್ಯ, ರಂಗಕರ್ಮಿ ರಮೇಶ್ ಮೆಳೇಕಲ್ಲಹಳ್ಳಿ ಜಯಕುಮಾರ್ ಉಪಸ್ಥಿತರಿದ್ದರು. ಶರತ್ ಪ್ರಾರ್ಥಿಸಿದರು. ದರ್ಶನ್ ನಿರೂಪಿಸಿದರು. ವೆಂಕಟೇಶ ಸ್ವಾಗತಿಸಿದರು. ನವೀನ ಕುಮಾರ್ ವಂದಿಸಿದರು. ನಂತರ ಕುಸುಮ ಕಲಾವಿದರಿಂದ ಹಿಂಗೈತಪ್ಲೋಕ ಹಾಗೂ ಅಂಗುಲಿಮಾಲ ನಾಟಕ ಪ್ರದರ್ಶನಗೊಂಡವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.