ತುಮಕೂರು

ಪುರಸಭೆ ಮುಖ್ಯಾಧಿಕಾರಿ ಅನುಚಿತ ವರ್ತನೆ; ದೂರು

Published On :

ಕುಣಿಗಲ್: ಸಾರ್ವಜನಿಕ ಪ್ರದೇಶದ ಒತ್ತುವರಿ ತೆರವುಗೊಳಿಸುವಂತೆ ಕೇಳಲು ಹೋದ ವಿಕಲಾಂಗ ಗಂಗಾಧರ್ ಹಾಗೂ ಇತರೊಂದಿಗೆ ಪುರಸಭೆ ಮುಖ್ಯಾಧಿಕಾರಿ ಅನುಚಿತವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಲ್ಲಿಪಾಳ್ಯ ಕಾಲೋನಿ ನಿವಾಸಿಗಳು, ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಪಟ್ಟಣದ 22ನೇ ವಾರ್ಡ್ನ ಮಲ್ಲಿಪಾಳ್ಯ ಕಾಲೋನಿ ಪ್ರದೇಶದಲ್ಲಿ ಪ.ಜಾತಿ ,ಪ,ವರ್ಗ ಸೇರಿದಂತೆ ಎಲ್ಲ ವರ್ಗದ ಜನತೆ ವಾಸವಾಗಿದ್ದು, ಸದರಿ ಪ್ರದೇಶದಲ್ಲಿ ದೇವಾಲಯಕ್ಕೆಂದು ಮೀಸಲಾಗಿರುವ ಜಾಗದ ಪಕ್ಕವೇ 25್ಢ40 ಅಡಿ ಪ್ರದೇಶವಿದ್ದು, ಸದರಿ ಜಾಗವನ್ನು ಗ್ರಂಥಾಲಯ ನಿರ್ಮಾಣಕ್ಕೆಂದು ಮೀಸಲಿಡಲಾಗಿತ್ತು. ಇತ್ತೀಚೆಗೆ ಗ್ರಂಥಾಲಯ ಇಲಾಖೆಯಿಂದ ಕಟ್ಟಡ ನಿರ್ಮಿಸಲು 10 ಲಕ್ಷ ಬಿಡುಗಡೆಯಾಗಿದೆ. ಸದರಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಗುಡಿಸಲು ಹಾಕಿಕೊಂಡಿದ್ದರು. ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಪ್ರದೇಶ ಒತ್ತುವರಿಯಾಗಿರುವ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸುವಂತೆ ಪ್ರದೇಶದ ಗಂಗಾಧರ್ ಇತರರು ಮುಖ್ಯಾಧಿಕಾರಿಗಳ ಬಳಿ ಬುಧವಾರ ತೆರಳಿದ್ದರು. ಆಗ ಮುಖ್ಯಾಧಿಕಾರಿಗಳು, ವಿಕಲಾಂಗ ಗಂಗಾಧರ್ ಸೇರಿದಂತೆ ನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಸರ್ಕಾರಿ ಪ್ರದೇಶವಾದರೂ ಚಿಂತೆ ಇಲ್ಲ, ಹಾಲಿ ಇರುವವರಿಗೆ ಖಾತೆ ಮಾಡಿಕೊಡುತ್ತೇನೆ. ಇಲ್ಲಿಗೆ ತಮ್ಮದೇ ಕಾನೂನು ನಡೆಯುತ್ತದೆ. ಅಲ್ಲಿರುವವರು ಗ್ರಂಥಾಲಯದಲ್ಲಿ ಓದಿ ಸಾಧಿಸಬೇಕಾದ್ದು ಏನಿಲ್ಲವೆಂದು ನಾಗರಿಕರನ್ನು ವಾಪಸ್ ಕಳಿಸಿದ್ದಾರೆ. ಇದರಿಂದ ಬೇಸತ್ತ ನಾಗರಿಕರು, ತಹಶೀಲ್ದಾರ್ ಪುಟ್ಟನರಸಯ್ಯ ಅವರಿಗೆ ಪುರಸಭೆ ಮುಖ್ಯಾಧಿಕಾರಿ ಬಗ್ಗೆ ದೂರು ನೀಡಿದರು.
ಮನವಿ ಸ್ವೀಕರಿಸಿದ ಪುಟ್ಟನರಸಯ್ಯ ಘಟನೆ ಬಗ್ಗೆ ವಿಶಾದ ವ್ಯಕ್ತಪಡಿಸಿ, ಸದರಿ ಮುಖ್ಯಾಧಿಕಾರಿಗಳನ್ನು ಕಚೇರಿಗೆ ಬರುವಂತೆ ಸೂಚಿಸಿದರು. ಅಧಿಕಾರಿ ಆಗಮಿಸದ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ವರದಿಯನ್ನು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ರಾಜಣ್ಣ, ದಲಿತ ಮುಖಂಡ ಶಿವಶಂಕರ್, ಶ್ರೀನಿವಾಸ, ನರಸಿಂಹಮೂರ್ತಿ, ಗಂಗಮ್ಮ, ಲಕ್ಷ್ಮಮ್ಮ ಜಗದೀಶ ಇತರರು ಇದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.