ತುಮಕೂರು

ಸಂಘ ರಚನೆ

Published On :

ಪಾವಗಡ: ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಮಳೆ ಇಲ್ಲದೆ ಬರಕ್ಕೆ ತುತ್ತಾಗಿದೆ. ಇಲ್ಲಿನ ಜನತೆ ತತ್ತರಿಸಿದ್ದು ತಾ. ರೈತರ ಶ್ರೆಯೋಭಿವೃದ್ಧಿಗಾಗಿ ನೋಂದಾಯಿತ ತೋಡು ಬಾವಿ ಹಾಗೂ ಕೊಳವೆ ಬಾವಿ ಬಳಕೆದಾರರ ಸಂಘ ರಚಿಸಿರುವುದಾಗಿ ಹಿರಿಯ ಮುಖಂಡ ಡಿ.ವಿ.ಗೋಪಾಲ್ ತಿಳಿಸಿದ್ದಾರೆ.
ಪದಾಧಿಕಾರಿಗಳು: ಅಧ್ಯಕ್ಷರಾಗಿ ದವಡಬೆಟ್ಟ ಡಿ.ವಿ.ಗೋಪಾಲ್, ಉಪಾಧ್ಯಕ್ಷರಾಗಿ ರಾಜಶೇಖರ್, ಕಾರ್ಯದರ್ಶಿ ಜಿ.ಎ.ನಾಗರಾಜ್, ಖಜಾಂಚಿಯಾಗಿ ಶ್ರೀನಿವಾಸ್ ಆಯ್ಕೆಯಾಗಿದ್ದು, ಈರ ನಾರಾಯಣಪ್ಪ, ಮಲ್ಲಿಕಾರ್ಜುನ, ಸತ್ಯಪ್ರಸಾದ್, ತಿಪ್ಪೇಸ್ವಾಮಿ ಸೇರಿದಂತೆ 15 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಡಿ.ವಿ.ಗೋಪಾಲ್, ತಾ. ಕಾಂಗ್ರೆಸ್ನ ಹಿರಿಯ ಮುಖಂಡ ಜಿ.ಎಸ್.ಧರ್ಮಪಾಲ್, ಮಾಜಿ ಜಿಪಂ ಅಧ್ಯಕ್ಷ ಜಂಪಯ್ಯ, ಹಿರಿಯ ಮುಖಂಡ ಚಿಕ್ಕನಾಗಪ್ಪ ಸಮ್ಮುಖದಲ್ಲಿ ಸಭೆಗಳನ್ನು ನಡೆಸಿ ಇಲ್ಲಿನ ರೈತಾಪಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ವಿದ್ಯುತ್ ಅಭಾವ ಹಿನ್ನೆಲೆಯಲ್ಲಿ ರೈತರು ಬೆಳೆದ ಅಲ್ಪಸ್ವಲ್ಪ ಬೆಳೆಗಳೂ ನಾಶವಾಗುತ್ತಿದ್ದು ರೈತರಿಗೆ ಅನುಕೂಲವಾಗಬೇಕಾದರೆ ಹಗಲು ಕನಿಷ್ಠ 6 ಗಂಟೆ ಮತ್ತು ರಾತ್ರಿ 4 ಗಂಟೆ ಸೇರಿದಂತೆ ಉಳಿಕೆ ಸಮಯದಲ್ಲಿ ಸಿಂಗಲ್ಫೇಸ್ ವಿದ್ಯುತ್ ಸರಬರಾಜು ಮಾಡಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಬೆಸ್ಕಾಂ ಗಮನಕ್ಕೆ ತಂದಿದ್ದು,  ಯಾವುದೇ ಕ್ರಮ ಕೈಗೊಂಡಿಲ್ಲ. ತಾಲೂಕಿನಲ್ಲಿ ಸಮರ್ಪಕ ವಿದ್ಯುತ್ ಸರಬರಾಜಿಗೆ ಮನವರಿಕೆ ಮಾಡಲು ಬೆಂಗಳೂರಿಗೆ ನಿಯೋಗ ತೆರಳಿ ಸಿಎಂ ಹಾಗೂ ವಿದ್ಯುತ್ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ತಾಲೂಕಿನಲ್ಲಿ 16 ಸಾವಿರ ಪಂಪ್ಸೆಟ್ ಬಳಕೆದಾರರಿದ್ದು, ಪ್ರತಿ ರೈತರು 150 ಸದಸ್ಯತ್ವ ಶುಲ್ಕ ಕಟ್ಟಿ ಸಂಘದಲ್ಲಿ ನೋಂದಾಯಿಸಲು ಮನವಿ ಮಾಡಿದ್ದಾರೆ.
ನಾಳೆ ಕೈ ಸಭೆ
ತುಮಕೂರು:  ಜಿಲ್ಲಾ ಕಾಂಗ್ರೆಸ್ ವತಿಯಿಂದ ಜ.25ರಂದು ಬೆಳಗ್ಗೆ 11 ಗಂಟೆಗೆ ಬಾರ್ಲೈನ್ ರಸ್ತೆಯಲ್ಲಿರುವ ಪೊಲೀಸ್ ಚಿಲುಮೆ ಸಮುದಾಯ ಭವನದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಜಕಣಾಚಾರ್  ತಿಳಿಸಿದ್ದಾರೆ. ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಹಿಸಲಿದ್ದಾರೆ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಶಾಸಕ ಕೆ.ಎನ್.ರಾಜಣ್ಣ, ಡಾ. ರಫೀಕ್ ಅಹಮದ್, ಕೆ.ಷಡಕ್ಷರಿ ಉಪಸ್ಥಿತರಿರುವರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.