ತುಮಕೂರು

ಮಧುಗಿರಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

Published On :

ಮಧುಗಿರಿ: ಇಂದಿನ ಯುವ ಜನಾಂಗ ಪವಿತ್ರ ಮತದಾನದ ಹಕ್ಕು ಮತ್ತು ಮಹತ್ವ ತಿಳಿದು,ಹಿರಿಯ ಜೀವಗಳಿಗೂ ಅರಿವು ಮೂಡಿಸಬೇಕು ಎಂದು ಕಂದಾಯ ತನಿಖಾಧಿಕಾರಿ ಕೆ.ಬಿ.ತಿಪ್ಪೇಸ್ವಾಮಿ ಕರೆಯಿತ್ತರು.  ತಾಲೂಕಿನ ದೊಡ್ಡೇರಿ ನಾಡ ಕಚೇರಿಯಲ್ಲಿ ಏರ್ಪಟಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿ, ಯುವ ಮತದಾರರು ಆಸೆ- ಅಮಿಷಗಳಿಗೆ ಬಲಿಯಾಗದೇ ಮತ್ತು ತಮ್ಮ ಪವಿತ್ರವಾದ ಮತ ಮಾರಿಕೊಳ್ಳುವ ಗೋಜಿಗೆ ಹೋಗದೇ ಸಮಾಜದ ಅಬಿವೃದ್ಧಿಗೆ, ದೇಶದ ಏಳಿಗೆಗೆ ಉತ್ತಮ ಪ್ರಜೆ ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ಉಳಿಸಿ ಬೆಳಸುವ ಮಹತ್ತರ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಉಪ ತಹಸೀಲ್ದಾರ್ ರಂಗಸ್ವಾಮಿ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಿ ಪ್ರಜಾಪ್ರಭುತ್ವದ ಯಶಸ್ವಿಗೆ ಶ್ರಮಿಸಬೇಕು ಎಂದರು.

ರಸ್ತೆ ಸುರಕ್ಷತಾ ಸಪ್ತಾಹ ಜಾಥಾ                                                                     
ಮಧುಗಿರಿ: ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚು ತಪ್ಪದೇ ಕಡ್ಡಾಯವಾಗಿ ಪಾಲಿಸುವ ನಿಟ್ಟಿನಲ್ಲಿ ಆಗಬಹುದಾದ ಅಪಘಾತಗಳನ್ನು ತಪ್ಪಿಸಿ ಪ್ರಾಣಾಪಾಯದಿಂದ ಪಾರಗಬಹುದು ಎಂದು ಮಧುಗಿರಿ ಸಬ್ ಇನ್ಸಫೆಕ್ಟರ್ ಎಂ.ಅಂಬರೀಶಶ್ತಿಳಿಸಿದರು. ಮಧುಗಿರಿ ಪೋಲಿಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ- 2014 ಪ್ರಯುಕ್ತ  ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ ಪತ್ರ ಹಂಚುವ ಮೊಲಕ  ವಿದ್ಯಾರ್ಥಿಗಳು ಪಟ್ಟಣದ  ಪ್ರಮುಖ ಬೀದಿಗಳಲ್ಲಿ ಜನ ಜಾಗೃತಿ  ಜಾಥ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ವಾಹನ ಸವಾರರು ರಸ್ತೆಯಲ್ಲಿ ಓಡಿಸುವಾಗ ಎಚ್ಚರಿಕೆಯಿಂದ ಒಡಿಸಬೇಕು.ಅತಿಯಾದ ವೇಗದ ಚಾಲನೆ ಅಪಘಾತಕ್ಕೆ ಆಹ್ವಾನ ಎಚ್ಚರಿಕೆ ಇದ್ದಲ್ಲಿ ಸಾವು ಗಲ್ಲಬಹುದು ಎಂದರು. ಜಾಥಾ ಕಾರ್ಯಕ್ರಮದಲ್ಲಿ ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು, ವಿವಿಧ  ನಾಮ ಫಲಕಗಳನ್ನು ಹಿಡಿದು ರಸ್ತೆ ಸುರಕ್ಷತಾ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.