ತುಮಕೂರು

'ನಿಖರ ದಾಖಲೆ ನೀಡಿದರೆ ಎಪಿಎಂಸಿಯಿಂದ ಸೌಲಭ್ಯ'

Published On :

ಪಾವಗಡ:  ನಿಖರ ದಾಖಲೆ ನೀಡಿದರೆ ಎಪಿಎಂಸಿಯಿಂದ ರೈತರಿಗೆ ಸೌಲಭ್ಯ ಹಾಗೂ ಪರಿಹಾರ ಕಲ್ಪಿಸುವುದಾಗಿ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ನಾಗರಾಜ್ ತಿಳಿಸಿದರು.
ಎಪಿಎಂಸಿ ಆವರಣದಲ್ಲಿ ಏರ್ಪಡಿಸಿದ್ದ ವಿವಿಧ ಯೋಜನೆಯಡಿ ರೈತ ಫಲಾನುಭವಿಗಳಿಗೆ ರೈತ ನಿಧಿ ಯೋಜನೆಯಲ್ಲಿ ಸುಮಾರು ಲಕ್ಷ ರು.ಗಳ ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡಿದರು. ಇಲಾಖೆಯಿಂದ ರೈತರಿಗೆ ವಿವಿಧ ರೀತಿಯ ಸೌಲಭ್ಯಗಳಿದ್ದು ನಿಗದಿತ ಅವಧಿಯಲ್ಲಿ ಸೂಕ್ತ ದಾಖಲೆ ನೀಡಿದರೆ ಪರಿಹಾರ ನೀಡಲು ಸಾಧ್ಯ. ಹಾಗೂ ಇಲಾಖೆಯಿಂದ ಅಧ್ಯಕ್ಷರು ಸೇರಿದಂತೆ ಚುನಾಯಿತ ನಿರ್ದೇಶಕರ ಸಲಹೆ ಸೂಚನೆಗಳ ಮೇರೆಗೆ ವಿವಿಧ ರೀತಿಯ ಕಾರ್ಯಕ್ರಮಗಳು ಹಮ್ಮಿಕೊಂಡು ಕಾರ್ಯೋನ್ಮುಖರಾಗಿರುವುದಾಗಿ ಅವರು ತಿಳಿಸಿದರು.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಸರ್ಕಾರ ಆಸಕ್ತಿ ವಹಿಸಿಬೇಕಿದೆ.ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿ ಹಾಗೂ ಇಲಾಖೆಗಳ ಗಮನಕ್ಕೆ ತರಲಾಗಿದೆ ಎಂದರು.
ಆಕಸ್ಮಿಕ ಹಾವು ಕಡಿದು ಸಾವನ್ನಪ್ಪಿದ ರೈತನ ಕುಟುಂಬಕ್ಕೆ ಇಲಾಖೆಯಿಂದ ಪರಿಹಾರ ಧನ ಕಲ್ಪಿಸುತ್ತಿದ್ದು ವಿವಿಧ ರೀತಿಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ರೈತರಿಗೆ ಅವರು ಸಲಹೆ ನೀಡಿದರು.
ಎಂಪಿಎಂಸಿ ನಿರ್ದೇಶಕ ಹಾಗೂ ತಾ. ಜೆಡಿಎಸ್ ಮುಖಂಡ ಅಂಜಪ್ಪ ಮಾತನಾಡಿ ಸಮಿತಿ ಅಧ್ಯಕ್ಷರು ಸದಸ್ಯರ ಸಲಹೆ ಮೇರೆಗೆ ಎಪಿಎಂಸಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಇಲಾಖೆಯ ಕಾರ್ಯದರ್ಶಿ ಕಾರಣಾಂತರದಿಂದ ರಜೆ ಮೇಲೆ ತೆರಳಿದ್ದು ಕಾರ್ಯದರ್ಶಿ ಸೇರಿದಂತೆ ಪ್ರಭಾರ ಅಧಿಕಾರಿ ನಾಗರಾಜ್ ಹಾಗೂ ಅಧಿಕಾರಿಗಳು ರೈತರ ಬಗ್ಗೆ ಆಸಕ್ತಿ ವಹಿಸಿದ್ದಾರೆಂದು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಹಾವು ಕಚ್ಚಿ ಸಾವನ್ನಪ್ಪಿದ ನಿರ್ದೇಶಕಿ ಸಾವಿತ್ರಮ್ಮ ಕ್ಷೇತ್ರ ವ್ಯಾಪ್ತಿಯ ಆರ್.ಹೊಸಕೋಟೆ ಗ್ರಾಮದ ಅಕ್ಕಮ್ಮ ಎಂಬುವರ ಹೆಸರಿನಲ್ಲಿ ಪತಿ ನಾಗಪ್ಪ ಎಂಬುವರಿಗೆ ಹಾಗೂ ಕೆರೆಯಿಂದ ತಮ್ಮ ಜಮೀನಿಗೆ ಮಣ್ಣು ಹೊಡೆಯುತ್ತಿದ್ದ ಸಂದರ್ಭದಲ್ಲಿ ಮಣ್ಣು ಕುಸಿದು ಸಾವನ್ನಪ್ಪಿದ ರೈತ ತಾ. ಕಡಮಲಕುಂಟೆ ಹನುಮಂತಪ್ಪ ಎಂಬುವರ ಹೆಸರಿನಲ್ಲಿ ಪತ್ನಿ ಓಬಳಮ್ಮ ಎಂಬುವರ ಕುಟುಂಬಕ್ಕೆ ತಲ 50 ಸಾವಿರ ರು. ಗಳಂತೆ ಒಟ್ಟು 1 ಲಕ್ಷ ರು. ಪರಿಹಾರ ಕಲ್ಪಿಸಿದರು. ಎಪಿಎಂಸಿ ಅಧ್ಯಕ್ಷ ರಾಮಕೃಷ್ಣನಾಯ್ಕ್ ಹಾಗೂ ನಿರ್ದೇಶಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.