ತುಮಕೂರು

ರಾಷ್ಟ್ರೀಯ ಭಾವೈಕ್ಯತೆ ಕಾಪಾಡಿ: ಕಾಮಾಕ್ಷಮ್ಮ

Published On :

ಚಿಕ್ಕನಾಯಕನಹಳ್ಳಿ: ಮತ್ತೆ ಮತ್ತೆ ಮರುಕಳಿಸುತ್ತಿರುವ ಭಯೋತ್ಪದನೆಯಿಂದಾಗಿ ದೇಶದ ಆಂತರಿಕ ಭದ್ರತೆ ಮತ್ತು ಏಕತೆಗೆ ಧಕ್ಕೆಯುಂಟಾಗಿದೆ ಎಂದು ತಹಸೀಲ್ದಾರ್ ಕಾಮಾಕ್ಷಮ್ಮ ಆತಂಕ ವ್ಯಕ್ತಪಡಿಸಿದರು.
 ಅವರು ಪಟ್ಟಣದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ
ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಭಾರತ ಸ್ವಾತಂತ್ರ್ಯಗೊಂಡನಂತರ  ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು ಒಗ್ಗೂಡಿಸಲು ಸರ್ದಾರ್ ವಲ್ಲಭ ಭಾಯಿ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯನಂತವರನ್ನೊಳಗೊಂಡ ಸಮಿತಿ ಹಾಗೂ ರಾಷ್ಟ್ರೀಯ ನಾಯಕರ ಸಂಘಟಿತ ಹೋರಾಟದ ಪ್ರಯತ್ನದಿಂದಾಗಿ 1950 ರ ಜನವರಿ 26ರಂದು ಇಡೀ ರಾಷ್ಟ್ರಕ್ಕೆ ಅನ್ವಯಿಸುವಂತೆ ಸಂವಿಧಾನ ರಚನೆಯಾದ ನೆನಪಿಗೆ ಈ ಹಬ್ಬ.  ಆಚರಿಸಲಾಗುತ್ತಿದೆ. ಈ ಏಕರೂಪ ಸಂವಿಧಾನ ಹಾಗೂ ಆಡಳಿತ  ವ್ಯವಸ್ಥೆ ಹೊಂದಿ ವರ್ಷಗಳೇ ಕಳೆದರೂ ದೇಶ ರಾಷ್ಟ್ರೀಯ ಭಾವೈಕ್ಯತೆಗೆ, ಸಮಗ್ರತೆಗೆ, ಸವಾಲಾಗಿ ಕೋಮುವಾದ, ಜಾತೀಯತೆ, ಪ್ರಾದೇಶಿಕತೆ, ಭಾಷಾಂಧತೆ, ಭಯೋತ್ಪಾದನೆ ಮುಂತಾದವು  ರಾಷ್ಟ್ರವನ್ನು ಹುರಿದು ಮುಕ್ಕುತ್ತಿವೆ.ಇಂತಹ ದುಷ್ಟಶಕ್ತಿಗಳ್ನನು ಹೊಡೆದೋಡಿಸುವಲ್ಲಿ ಭಾರತೀಯರು ಒಂದಾಗಿ ಹೋರಾಡಬೇಕಿದೆ ಎಂದರು.
 ಶಾಸಕ ಸಿ.ಬಿ.ಸುರೇಶ್‌ಬಾಬು, ಪುರಸಭೆ ಅಧ್ಯಕ್ಷೆ ಗೀತಾ, ತಾಪಂ ಸದಸ್ಯೆ ಹೇಮಾವತಿ, ಮಾಜಿ ಶಾಸಕ ಬಿ.ಲಕ್ಕಪ್ಪ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ್ ಮುಂತಾದವರಿದ್ದರು. ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.