ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ ಶುದ್ಧಹಸ್ತ
ಪಾವಗಡ: ತಾಲೂಕಿನ ಬೂದಿಬೆಟ್ಟ ನ್ಯಾಯಬೆಲೆ ಅಂಗಡಿ ವಿರುದ್ಧ ಯಾವುದೇ ದೂರುಗಳಿಲ್ಲವೆಂದು ಬೂದಿಬೆಟ್ಟ ಗ್ರಾಪಂನ ನೂರಾರು ಪಡಿತರದಾರರು ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.
ಸ್ಥಳೀಯ ಕೆಲ ಮುಖಂಡರು ಬೂದಿಬೆಟ್ಟ ನ್ಯಾಯ ಬೆಲೆ ಅಂಗಡಿ ವಿರುದ್ಧ ಇತ್ತೀಚಿಗೆ ಸಂಬಂಧಪಟ್ಟ ತಾ. ಕಚೇರಿ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.
ದೂರು ನೀಡಿದ ವಿಚಾರ ಬಹಿರಂಗವಾಗುತ್ತಿದ್ದಂತೆ ನ್ಯಾಯಬೆಲೆ ಅಂಗಡಿ ಬಳಿ ಜಮಾಯಿಸಿದ ಗ್ರಾಪಂ ವ್ಯಾಪ್ತಿಯ ನೂರಾರು ಪಡಿತರದಾರರು, ಸೀಮೆಎಣ್ಣೆ ಹಂಚಿಕೆ, ಪಡಿತರ ಆಹಾರ ಧಾನ್ಯಗಳ ವಿತರಣೆ ಸೇರಿದಂತೆ ನ್ಯಾಯಬೆಲೆ ಅಂಗಡಿ ವಿರುದ್ಧ ಯಾವುದೇ ದೂರುಗಳಿಲ್ಲ. ಇದೆಲ್ಲ ಕೆಲ ಸ್ಥಳೀಯ ಕೆಲವರು ಕಾರ್ಯದರ್ಶಿ ವಿರುದ್ಧ ನಡೆಸಿದ ಪಿತೂರಿ ಎಂದು ಆರೋಪಿಸಿ ನ್ಯಾಯಬೆಲೆ ಅಂಗಡಿ ಪರವಾಗಿ ಸಹಿ ಸಂಗ್ರಹಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ತಾ.ಜೆಡಿಎಸ್ ಹಿರಿಯ ಮುಖಂಡ ಪ್ರಸಾದ್ರೆಡ್ಡಿ ಮಾತನಾಡಿ, ಪಡಿತರ ಸಮರ್ಪಕ ಹಂಚಿಕೆ ಸೇರಿದಂತೆ ವ್ಯತ್ಯಾಸವಿಲ್ಲದೆ ನ್ಯಾಯಬೆಲೆ ಅಂಗಡಿಯನ್ನು ನ್ಯಾಯಬದ್ಧವಾಗಿ ಮುನ್ನಡೆಸಿಕೊಂಡು ಹೋದರೂ ಕೆಲವರು ವಿನಾ ಕಾರಣ ಸಮಸ್ಯೆ ಸೃಷ್ಟಿಸಿ ನ್ಯಾಯ ಬೆಲೆ ಅಂಗಡಿ ಮತ್ತು ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವುದು ವಿಪರ್ಯಾಸ ಎಂದರು.
ಈ ಬಗ್ಗೆ ಬೂದಿಬೆಟ್ಟ, ಯರಮ್ಮನಹಳ್ಳಿ, ಎತ್ತಿನಹಳ್ಳಿ, ಸಾರವಾಟಪುರ, ರಾಚಮಾರನಹಳ್ಳಿ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಎಲ್ಲ ಪಡಿತರದಾರರು ಪಡಿತರ ಹಾಗೂ ಸೀಮೆಎಣ್ಣೆ ಸಮರ್ಪಕ ಹಂಚಿಕೆ ಕುರಿತು ತೃಪ್ತಿ ವ್ಯಕ್ತಪಡಿಸಿದ ಬಗ್ಗೆ ಸಹಿ ಸಂಗ್ರಹಿಸಲಾಗಿದೆ.
ಸಹಿ ಸಂಗ್ರಹ ಸಮೇತ ನ್ಯಾಯಬೆಲೆ ಅಂಗಡಿ ಪರವಾಗಿ ತನಿಖೆಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು ತನಿಖೆ ಮಾಡಲಿ. ಸತ್ಯ ಸಾಬೀತಾದರೆ ಕ್ರಮ ಜರುಗಿಸಲಿ ಎಂದರು.
ಹಿರಿಯ ಮುಖಂಡರಾದ ಗೋವಿಂದಬಾಬು, ರಾಜಶೇಖರಪ್ಪ, ಅಂಜಯ್ಯ ಸೇರಿದಂತೆ ಅನೇಕ ಮಂದಿ ಪಡಿತರ ಕಾರ್ಡುದಾರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

