ತುಮಕೂರು

ಡಬ್ಬಿಂಗ್ ಖಂಡಿಸಿ ಮಧುಗಿರಿ ತಾ. ಕಸಾಪ ಪ್ರತಿಭಟನೆ

Published On :

ಮಧುಗಿರಿ: ಡಬ್ಬಿಂಗ್ ವಿರೋಧಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಭಟನೆ ನಡೆಸಿ, ಡಬ್ಬಿಂಗ್ ಜಾರಿಗೆ ಬಂದರೆ ಕನ್ನಡ ಚಿತ್ರರಂಗಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿತು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.ನಂತರ ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿ, ಪರ ಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವುದರಿಂದ ಕನ್ನಡ ಚಲನಚಿತ್ರ ಹಾಗೂ ಕಿರುತೆರೆ ಸಾವಿರಾರು ಕಲಾವಿದರು,
ತಂತ್ರಜ್ಞರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಇಡೀ ಚಿತ್ರ ರಂಗದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕನ್ನಡ ಭಾಷೆ, ಸಂಸ್ಕೃತಿ,  ಕನ್ನಡ ಚಿತ್ರೋದ್ಯಮದ ಉಳಿವಿಗಾಗಿ ಡಬ್ಬಿಂಗ್ ಎಂಬ ಪೆಡಂಭೂತವನ್ನು ಕನ್ನಡ ನಾಡಿಗೆ ಕಾಲಿಡಲು ಬಿಡಬಾರದು ಎಂದು ಆಗ್ರಹಿಸಿದರು. ಹಿರಿಯ ಸಾಹಿತಿ ಪ್ರೊ.ಮ.ಲ.ನ. ಮೂರ್ತಿ ಮಾತನಾಡಿ, ಡಬ್ಬಿಂಗ್ ಚಿತ್ರ ನಿರ್ಮಾಣ ತಡೆಗೆ ಸರ್ಕಾರ ಮುಂದಾಗಬೇಕು. ಕನ್ನಡ ಭಾಷೆಗೆ ಧಕ್ಕೆ ತರುವ ಯಾವುದೇ ಪರಭಾಷೆ ಚಿತ್ರಗಳ ಡಬ್ಬಿಂಗ್ಗೆ ಅವಕಾಶ ನೀಡಬಾರದು, ಸರ್ಕಾರ ತಕ್ಷಣವೇ ಡಬ್ಬಿಂಗ್ ಸಂಸ್ಕೃತಿ ಆದೇಶ ಕೈ ಬಿಡಬೇಕು ಎಂದರು. ಪುರಸಭೆ ಸದಸ್ಯ ಗೋಪಿನಾಥ್,ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ಪಿಸಿಕೆರೆಡ್ಡಿ, ತಾ.ಕಸಾಪ  ಪದಾಧಿಕಾರಿಗಳಾದ ಎನ್. ಮಹಾಲಿಂಗೇಶ್, ಸಿ.ಕೃಷ್ಣಪ್ಪ, ಪ.ವಿ.ಸುಬ್ರಹ್ಮಣ್ಯ, ನರಸಿಂಹಮೂರ್ತಿ,ರಂಗರಾಜು, ಕರಿಯಣ್ಣ, ಕಬಡ್ಡಿ ನಾರಾಯಣ್, ಸುರೇಶ್, ಸತ್ಯನಾರಾಯಣ್, ಮಲ್ಲಿಕಾರ್ಜುನಪ್ಪ, ಸಯದ್ ಕರೀಂ, ಉಪನ್ಯಾಸಕ ರಂಗಪ್ಪ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.