ಹಣ ದುರಪಯೋಗ ಆರೋಪ: ಖಜಾಂಚಿ ಮನೆ ಮುಂದೆ ಧರಣಿ
ತುರುವೇಕೆರೆ: ಸ್ಥಳೀಯ ಮೈಕ್ರೋ ಫೈನಾನ್ಸ್ನಲ್ಲಿ ತೊಡಗಿಸಿದ್ದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಗ್ರಾಹಕರು ಸಂಸ್ಥೆಯ ಖಜಾಂಚಿ ಮನೆ ಮುಂದೆ ಧರಣಿ ನಡೆಸಿದರು. ತುರುವೇಕೆರೆಯ ಹೊರಪೇಟೆಯಲ್ಲಿ ಎಲ್ಐಸಿ ಅಂಗ ಸಂಸ್ಥೆ ಸಮನ್ವಯ ಮೈಕ್ರೋ ಫೈನಾನ್ಸ್ ನಡೆಸಲಾಗುತ್ತಿತ್ತು. ಕಳೆದ ಒಂದೆರಡು ವರ್ಷದಿಂದ ಸಾರ್ವಜನಿಕರು ಕಟ್ಟಿದ್ದ ಹಣವನ್ನು ಸಂಸ್ಥೆಯ ಸಿಬ್ಬಂದಿ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಹಕರು ಎಲ್ಐಸಿ ಕಚೇರಿ ಮುಂಭಾಗ ಧರಣಿ ಮಾಡಿದ್ದರು. ಆದರೂ ಸಮಸ್ಯೆ ಬಗೆಹರಿದಿರಲಿಲ್ಲ. ಬುಧವಾರ ಅರಳೀಕೆರೆಯ ಸಂಸ್ಥೆಯ ಖಜಾಂಚಿ ಮೋಹನ್ ಎಂಬುವರ ಮನೆ ಮುಂದೆ ಧರಣಿ ಕುಳಿತ ಗ್ರಾಹಕರು ಹಣ ಮರು ಪಾವತಿ ಮಾಡುವಂತೆ ಆಗ್ರಹಿಸಿದರು.
ಹೆಚ್ಚು ಸರಕು ಸಾಗಿಸುತ್ತಿದ್ದ
ಲಾರಿ ಒಪ್ಪಿಸಿದ ಸದಸ್ಯರು
ತುಮಕೂರು: ನಿಗದಿತ ಪ್ರಮಾಣಕ್ಕಿಂತ ಅತಿಹೆಚ್ಚು ಸರಕನ್ನು ಸಾಗಿಸುತ್ತಿದ್ದ ಲಾರಿಯನ್ನು ತುಮಕೂರು ನಗರ ಮತ್ತು ತಾಲೂಕುಗಳ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ತಡೆದು, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿ, ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ. ಮೋಟಾರ್ ವಾಹನ ಕಾಯ್ದೆಯಂತೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸಕ್ಕರೆ ಮೂಟೆಗಳನ್ನು ತುಂಬಿದ್ದ ಲಾರಿಯನ್ನು ನಿಲ್ಲಿಸಿ, ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಆವರಣಕ್ಕೆ ತಂದು ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತು ಪದಾಧಿಕಾರಿಗಳು ಒತ್ತಾಯಿಸಿದರು. ನೀವು ಲಾರಿಯನ್ನು ತಪಾಸಣೆ ಮಾಡುವಂತಿಲ್ಲ. ಅದಕ್ಕೆ ನಾವಿದ್ದೇವೆ ಎಂದು ಕೆಲವು ಅಧಿಕಾರಿಗಳು ಉತ್ತರ ನೀಡಿದರು. ನಂತರ ಪದಾಧಿಕಾರಿಗಳು ಆಕ್ಷೇಪಿಸಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡಿರುವ ಸಾರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಸಿಟಿ ಬಸ್ ಸಂಪರ್ಕಕ್ಕೆ ಮನವಿ
ತುಮಕೂರು: ಕುಪ್ಪೂರು ಗ್ರಾಮಕ್ಕೆ ನಗರ ಸಾರಿಗೆ ಬಸ್ ಸಂಪರ್ಕ ಕಲ್ಪಿಸುವಂತೆ ತುಮಕೂರು ಕೆಎಸ್ಆರ್ಟಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಮನವಿ ಮಾಡಿದೆ. ಕುಪ್ಪೂರು ಗ್ರಾಮವು ತುಮಕೂರು ನಗರಕ್ಕೆ ಸುಮಾರು 8 ಕಿ.ಮೀ ದೂರವಿದೆ. ಈ ಗ್ರಾಮಕ್ಕೆ ಹೋಗಬೇಕಾದರೆ ಶಿರಾಗೇಟ್, ಲಿಂಗಾಪುರ, ಡಿ.ಎಂ.ಪಾಳ್ಯ, ಪಿ.ಎನ್.ಆರ್.ಪಾಳ್ಯ, ಕಂಠೀರಾಯರಪಾಳ್ಯ, ಕುಪ್ಪೂರು ಗ್ರಾಮ ಸಿಗುತ್ತದೆ. ಈ ಭಾಗದಲ್ಲಿ ಹಲವಾರು ಕೂಲಿ ಕಾರ್ಮಿಕರು ಕಟ್ಟಡ ಕಾರ್ಮಿಕರು, ಕಾರ್ಖಾನೆ ಕಾರ್ಮಿಕರು, ವಿದ್ಯಾರ್ಥಿಗಳು, ವಯಸ್ಸಾದ ವೃದ್ಧರು, ನಿತ್ಯ ನೂರಾರು ಜನ ನಗರಕ್ಕೆ ಮತ್ತು ಕೂಲಿ ಮತ್ತು ಕಾರ್ಖಾನೆ ಕೆಲಸಕ್ಕೆ ಬಂದು ಹೋಗುತ್ತಾರೆ. ಆದ್ದರಂದಿ ಸಿಟಿ ಬಸ್ ಸಂಪರ್ಕ ಕಲ್ಪಿಸಿದರೆ ಬಡ ಕಾರ್ಮಿಕರಿಗೆ ಬಡವರಿಗೂ ವಿದ್ಯಾರ್ಥಿಗಳಿಗೂ, ಅನುಕೂಲವಾಗುವುದು. ಅಕ್ಕಪಕ್ಕದ ಗ್ರಾಮಗಳಾದ ನರಸಾಪುರ, ಹೊನ್ನೇನಹಳ್ಳಿ, ಮರಳೇನಹಳ್ಳಿ, ಗ್ರಾಮಗಳಿಗೂ ಇದರಿಂದ ತುಂಬಾ ಅನುಕೂಲವಾಗುತ್ತದೆ ಎಂದು ಸಂಘದ ಗಿರೀಶ್, ಕೃಷ್ಣಪ್ಪ, ರವಿ, ಗೋಪಾಲ್, ನಾಗರತ್ನಮ್ಮ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

