ತುಮಕೂರು

ಎನ್‌ಒಸಿ ವಿಳಂಬ: ಬೀಗ ಜಡಿದು ಪ್ರತಿಭಟನೆ

Published On :

ತುಮಕೂರು: ಸಾಲದ ಮೇಲಿನ ಬಡ್ಡಿಯನ್ನು ತೀರಿಸಿದ್ದರೂ ಟ್ರ್ಯಾಕ್ಟರ್ ಸಾಲದ ಎನ್‌ಒಸಿ ನೀಡಲು ಕಳೆದ ಒಂಭತ್ತು ತಿಂಗಳಿನಿಂದ ಅಮಾಯಕ ರೈತನನ್ನು ಮ್ಯಾಗ್ನಮ್ ಕಂಪನಿ ಸತಾಯಿಸುತ್ತಿದೆ ಎಂದು ಆರೋಪಿಸಿ ಕಂಪನಿಯ ಶಾಖಾ ಕಚೇರಿಗೆ ಬೀಗ ಜಡಿದು ಅಖಿಲ ಕರ್ನಾಟಕ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ವಿ. ಪ್ರತಾಪ ಮತ್ತು ನಗರಾಧ್ಯಕ್ಷ ಹನುಮಂತಪುರ ಬಾಬು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೊಲ್ಕತಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಮ್ಯಾಗ್ಮ ಪಿನ್ ಕಾರ್ಪೋರೇಷನ್, ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಗ್ರಾಮದ ನಿವಾಸಿ ಮಂಜುನಾಥ್ ರೈತ ವ್ಯವಸಾಯಕ್ಕಾಗಿ ಟ್ರ್ಯಾಕ್ಟರ್ ಸಾಲದ ರೂಪದಲ್ಲಿ ಖರೀದಿಸಿದ್ದು, ಕಂಪನಿ ಬೇರೊಬ್ಬರ ಹೆಸರಿನಲ್ಲಿದ್ದು, ಟ್ರ್ಯಾಕ್ಟರ್ ಅನ್ನು ಮಂಜುನಾಥನಿಗೆ ನೀಡಿ ಬಡ್ಡಿ, ಚಕ್ರಬಡ್ಡಿ ಎಂದು ವಿಧಿಸಿ ಲಕ್ಷಾಂತರ ರುಪಾಯಿ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕಂಪನಿಯವರು ವಿಧಿಸಿದ ಎಲ್ಲಾ ರೀತಿಯ ಷರತ್ತುಗಳನ್ನು ಪೂರೈಸಿ ಟ್ರಾಕ್ಟರ್ ಮೇಲಿನ ಸಾಲ, ಬಡ್ಡಿ ಎಲ್ಲವನ್ನು ತೀರಿಸಿ 9 ತಿಂಗಳು ಕಳೆದರೂ ಸಾಲ ತೀರಿದೆ ಎಂದು ಎನ್‌ಒಸಿ ನೀಡಲು ಕಂಪನಿಯ ಸಿಬ್ಬಂದಿ ಸತಾಯಿಸುತ್ತಿದ್ದು, ಈ ಬಗ್ಗೆ ಹಲವು ಬಾರಿ ಕಂಪನಿ ಜತೆ ಪತ್ರ ವ್ಯವಹಾರ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಆಟೋ ಚಾಲಕರ ಜಂಟಿ ಕ್ರಿಯಾಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ನಗರದ ಎಂ.ಜಿ.ರಸ್ತೆಯ ಪದ್ಮಾಂಬ ಕಾಂಪ್ಲೆಕ್ಸ್‌ಲ್ಲಿರುವ ಕಂಪನಿಯ ಶಾಖಾ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. 9 ತಿಂಗಳಿನಿಂದ ಮಂಜುನಾಥನಿಗೆ ಎನ್‌ಒಸಿ ನೀಡದ ಕಂಪನಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ವಿ. ಪ್ರತಾಪ್ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಮಂಜುನಾಥ್, ಶೆಟ್ಟಿಕೆರೆ ಗ್ರಾಮದ ಮುಖಂಡರಾದ ಕೆಂಚಣ್ಣ, ವಾಲ್ಮೀಕಿ ಸೇನೆಯ ರಾಜ್ಯ ಮುಖಂಡ ಕಡೂರು ನಂದೀಶ್, ಸ್ಥಳೀಯ ಮುಖಂಡ ಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಪಿ.ಎಸ್.ಐ ನಧಾಫ್ ರೈತರ ಮನವಿಯನ್ನು ಆಲಿಸಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ರೈತ ಮಂಜುನಾಥ್‌ನಿಗೆ ನೀಡಬೇಕಾಗಿರುವ ಸಾಲದ ತಿರುವಳಿ ಪತ್ರವನ್ನು ಸಂಜೆಯ ಒಳಗೆ ನೀಡುವುದಾಗಿ ಮ್ಯಾಗ್ಮ ಕಂಪನಿಯ ತುಮಕೂರು ಶಾಖೆಯ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ ಎಂದು ವಿ.ಪ್ರತಾಪ್ ತಿಳಿಸಿದ್ದಾರೆ.

ಅನುಮಾನಾಸ್ಪದ ಸಾವು: ತನಿಖೆಗೆ ಆಗ್ರಹ


ಪಾವಗಡ: ವಕೀಲ ಜಿ. ನಾರಾಯಣರೆಡ್ಡಿ ಅವರ ಪತ್ನಿ ಮಲ್ಲಕ್ಕ ಅವರನ್ನು ಕೊಲೆ ಮಾಡಿದ್ದು, ತನಿಖೆ ನಡೆಸುವಂತೆ ಮೃತರ ಪುತ್ರ ಶಿವಾನಂದರೆಡ್ಡಿ ತಿರುಮಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜು.1ರ ಸಂಜೆ ವಕೀಲ ದಿ.ಜಿ. ನಾರಾಯಣರೆಡ್ಡಿ ಎಂಬುವರ ಪತ್ನಿ ಮಲ್ಲಕ್ಕ ಎಂಬುವರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದರು. ಮನೆಗೆ ಕನ್ನ ಹಾಕಿ ಯಾವುದೋ ಉದ್ದೇಶದಿಂದ ಕೊಲೆ ನಡೆದಿರಬಹುದು ಎಂದು ಆಕೆಯ ಪುತ್ರ ಶಿವಾನಂದರೆಡ್ಡಿ ಆರೋಪಿಸಿ ದೂರು ಸಲ್ಲಿಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಿರುಮಣಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಗುತ್ತಿಗೆದಾರ ಸದಾಶಿವರೆಡ್ಡಿ, ನಾಗಭೂಷಣರೆಡ್ಡಿ ತೆರಳಿ ಕುಟುಂಬಕ್ಕೆ ಸಂತ್ವಾನ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.