ಚೀನಾ ಹಿಂದಿಕ್ಕಲಿರುವ ಭಾರತ: ದಯಾನಂದಸ್ವಾಮಿ
ತುಮಕೂರು: ಮ್ಯಾನುಫ್ಯಾಕ್ಚರಿಂಗ್ ತಂತ್ರಜ್ಞಾನದಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ಸಿದ್ದಾರ್ಥ ಸಂಸ್ಥೆಯ ಎಂಬಿಎ ವಿಭಾಗದ ಪ್ರಾಂಶುಪಾಲ ಡಾ. ದಯಾನಂದಸ್ವಾಮಿಯವರು ಅಭಿಪ್ರಾಯಪಟ್ಟರು.
ಅವರು ಆರ್ಯಭಾರತಿ ಪಾಲಿಟೆಕ್ನಿಕ್ನಲ್ಲಿ ನಾಲ್ಕು ದಿನಗಳ ವಿಶಿಷ್ಟ ಪುನಶ್ಚೇತನ ಕಾರ್ಯಾಗಾರ ರೂಪಾಂತರದ ಮುಕ್ತಾಯ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿನವರೆಗೂ ಮ್ಯಾನುಫ್ಯಾಕ್ಚರಿಂಗ್ (ತಯಾರಿಕೆ) ತಂತ್ರಜ್ಞಾನದಲ್ಲಿ ಚೀನಾ ದೇಶವು ಮುಂಚೂಣಿಯಲ್ಲಿದ್ದು, ಅತ್ಯಂತ ಅಗ್ಗದ ಯಂತ್ರೋಪಕರಣವನ್ನು ಜಗತ್ತಿನಾದ್ಯಂತ ಹಿಂದುಳಿದ ಹಾಗು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ರಫ್ತು ಮಾಡುತ್ತಿತ್ತು. ಆದರೆ ಕಾಲಕ್ರಮೇಣ ಈ ಅಗ್ಗದ ವಸ್ತುಗಳು ಕಳಪೆ ಮಟ್ಟದ್ದಾಗಿದ್ದುದರಿಂದ ಅವುಗಳ ಮಾರಾಟದಲ್ಲಿ ದಿಢೀರ್ ಕುಸಿದಿದೆ. ಹಾಗಾಗಿ, ಮುಂದಿನ ಮೂರು ವರ್ಷಗಳಲ್ಲಿ ಭಾರತ ದೇಶಕ್ಕೆ ತಯಾರಿಕಾ ತಂತ್ರಜ್ಞಾನದಲ್ಲಿ ವಿಫುಲ ಅವಕಾಶವಿದೆ ಎಂದರು.
ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮಾನವ ಸಂಪನ್ಮೂಲವನ್ನು ಹೊಂದಿರುವ ಭಾರತ ಮುಂದಿನ ದಿನಗಳಲ್ಲಿ ತಂತ್ರಜ್ಞಾನದಲ್ಲಿ ಚೀನಾವನ್ನು ಹಿಂದಿಕ್ಕಲಿದೆ. ಬೆಲೆ ಹಾಗೂ ಗುಣಮಟ್ಟದಲ್ಲಿ ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಲು ಮ್ಯಾನುಫ್ಯಾಕ್ಚರಿಂಗ್ ತಂತ್ರಜ್ಞಾನದಲ್ಲಿ ವಿಶೇಷ ಆವಿಷ್ಕಾರ ಅಗತ್ಯವಿದ್ದು ಯುವ ತಂತ್ರಜ್ಞರು ಸೂಕ್ತ ಶಿಕ್ಷಣದೊಂದಿಗೆ ಕೌಶಲ್ಯವನ್ನು ಒಗ್ಗೂಡಿಸಿಕೊಳ್ಳಬೇಕಾಗಿದೆ. ತಾಂತ್ರಿಕ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಲಹೆ ಹಾಗೂ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದರು.
ಪ್ರಾಂಶುಪಾಲ ಕೆ. ಆರ್. ಅಶೋಕರವರು ವಿದ್ಯಾರ್ಥಿಗಳಿಗೆ ಬದಲಾವಣೆ ಹಾಗು ಪರಿವರ್ತನೆ ಅಗತ್ಯತೆ ಬಗ್ಗೆ ತಿಳಿಸಿದರು. ಯಶಸ್ಸಿನ ಶಿಖರವೇರಲು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ ಅವಶ್ಯಕತೆ ಇದ್ದು, ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿಯನ್ನು ನೀಡಿ ಅವರಲ್ಲಿ ತಾಂತ್ರಿಕ ಶಿಕ್ಷಣದ ವೃತ್ತಿಪರತೆಯನ್ನು ಬೆಳೆಸಲಾಗಿದೆ ಎಂದರು.
ನಾಗಭೂಷಣ್ ಬಿ.ಆರ್. ರಮ್ಯಾ, ಉಪಪ್ರಾಂಶುಪಾಲ ಬಿ.ವಿ. ರಾಜೇಂದ್ರಕುಮಾರ್ ಉಪಸ್ಥಿತರಿದ್ದರು. ರಾಧಿಕಾ ನಿರೂಪಿಸಿ, ಲಕ್ಷ್ಮೀದೇವಿ ಪ್ರಾರ್ಥಿಸಿ, ಶ್ರೀಧರ್ ಸ್ವಾಗತಿಸಿ, ಅಶ್ವಿನಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

