ಕೇಂದ್ರದ ವಿರುದ್ಧ ಶೀಘ್ರ ಹೋರಾಟ
ತುಮಕೂರು: ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ತರಲು ಹೊರಟಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಐಕ್ಯ ಹೋರಾಟಗಳನ್ನು ಮುನ್ನಡೆಸುವ ಕುರಿತು ಜನರಲ್ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ, ಮುಂದಿನ ಹೋರಾಟವನ್ನು ರೂಪಿಸಲಾಗುವುದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೌನ್ಸಿಲ್ ಸಭೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತ ಒಟ್ಟು ಐದು ಜಾಥಾಗಳನ್ನು ಸಿಐಟಿಯು ರಾಜ್ಯ ಸಮಿತಿ ಹಮ್ಮಿಕೊಂಡಿದೆ. ಕಾರವಾರ, ಚಾಮರಾಜನಗರ, ಕೆಜಿಎಫ್ ಬೆಳಗಾವಿ, ಗುಲ್ಬರ್ಗದಿಂದ ಜಾಥಾವು ಹೊರಟು ಬಳ್ಳಾರಿ ತಲುಪಲಿದೆ. ಜುಲೈ 11ರಿಂದ 14ರವರೆಗೆ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ ಸಿಐಟಿಯು ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆ ನಡೆಯಲಿದ್ದು, ಸಭೆಯಲ್ಲಿ ಆಮೂಲಾಗ್ರವಾಗಿ ಚರ್ಚಿಸಲಾಗುವುದು ಎಂದರು.
ಕೆಜಿಎಫ್ನಿಂದ ಹೊರಡುವ ಸವರಿದಾಸ್ ಜಾಥಾ ಜು.12ರಂದು ತುಮಕೂರಿಗೆ ಬರಲಿದೆ. ಬಳಿಕ ಕೊರಟಗೆರೆ, ಮಧುಗಿರಿ, ಪಾವಗಡದ ಮೂಲಕ ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿ ತಲುಪಲಿದೆ. ಚಾಮರಾಜನಗರದಿಂದ ಬರುವ ಎಂ.ಎನ್. ಉಗ್ರಪ್ಪ ಜಾಥಾ ಜು. 11ರಂದು ರಾತ್ರಿ ಕುಣಿಗಲ್ ತಲುಪಲಿದೆ. ಜು.12ರಂದು ಕುಣಿಗಲ್, ಎಡೆಯೂರು, ಮಾಯಸಂದ್ರ, ತುರುವೇಕೆರೆ, ತಿಪಟೂರು, ಸಿ.ಎನ್. ಹಳ್ಳಿ, ಹುಳಿಯಾರ್ ಮೂಲಕ ಶಿರಾ ತಲುಪಲಿದೆ. ಜು.13ರಂದು ಬೆಳಗ್ಗೆ ಬಹಿರಂಗ ಸಭೆ ನಡೆಸಿ ಹಿರಿಯೂರು ಮೂಲಕ ಬಳ್ಳಾರಿಯತ್ತ ಸಾಗಲಿದೆ ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಪ್ರಧಾನ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ, ಬಿ. ಉಮೇಶ್ ಉಪಸ್ಥಿತರಿದ್ದರು.
ವಿಶೇಷ ಪೂಜೆ
ತಿಪಟೂರು: ಪಟ್ಟಣದ ಶ್ರೀ ರಾಮಮಂದಿರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮನ ವಿಗ್ರಹಗಳಿಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾದರು. ನಂತರ ಪ್ರಸಾದ ವಿನಿಯೋಗ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

