'ಇದು ಜೆನ್ ಅಲ್ಲ' ಕೃತಿ ಲೋಕಾರ್ಪಣೆ
ತುಮಕೂರು: ಜಾತಿ ವಿಮೋಚನೆಗಾಗಿಯೇ ಬೌದ್ಧ ಧರ್ಮ ಎಂಬುದು ತಪ್ಪು. ಬೌದ್ಧ ಧರ್ಮವನ್ನು ಜಾತಿ ವಿಮೋಚನೆಯ ದಾರಿಯಾಗಿ ನೋಡುವುದು ಸರಿಯಲ್ಲ. ಇದು ಸಾಮಾಜಿಕ ಸಿದ್ದಾಂತ. ಬುದ್ಧ ಹೇಳುವ ಹಾಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುವ ಆದರ್ಶ ಸಿದ್ಧಾಂತ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ಮಟ್ಟು ಪ್ರತಿಪಾದಿಸಿದರು.
ತುಮಕೂರಿನ ಓಶೋ ಧ್ಯಾನ ಕೇಂದ್ರದಲ್ಲಿ ಬೋಧಿ ಮಂಡಲ ಮತ್ತು ಸಹಜ ಪ್ರಕಾಶನದ ವತಿಯಿಂದ ಹಮ್ಮಿಕೊಂಡಿದ್ದ ಲೇಖಕ, ಪತ್ರಕರ್ತ ಕುಚ್ಚಂಗಿ ಪ್ರಸನ್ನ ಅವರ “B¥Úß ಜೆನ್ @ÄÇ’ ಕೃತಿ ಬಿಡುಗಡೆ ಕಾರ್ಯಕ್ರಮದ ನಂತರ ಏರ್ಪಾಟಾಗಿದ್ದ “eÛ~¿ßM¥Ú ಬಿಡುಗಡೆ ಹೊಂದುವ ಹಾದಿಯಲ್ಲಿ ಬೌದ್ಧ ಧರ್ಮದೊಂದಿಗೆ @«ÚßÑÚM¨Û«Ú’ ಗೋಷ್ಠಿಯಲ್ಲಿ ಮಾತನಾಡಿದರು. ಜಾತಿ ವಿನಾಶಕ್ಕೆಂದು ರೂಪಿಸಲಾದ ಬಸವಣ್ಣನವರ ವೀರಶೈವ ಧರ್ಮ ಇಂದು ಏನಾಗಿದೆ ಎಂಬ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಬೌದ್ಧ ಧರ್ಮವನ್ನು ಜಾತಿ ನಿರ್ಮೂಲನೆ ದೃಷ್ಟಿಯಿಂದ ನೋಡುವುದು ಅಷ್ಟಾಗಿ ಸರಿಯಲ್ಲ ಎಂದರು. ಸಮಾರಂಭದಲ್ಲಿ ಡಾ. ನಟರಾಜ್ ಬೂದಾಳ್, ಡಾ.ಎಚ್.ವಿ. ರಂಗಸ್ವಾಮಿ, ಲೇಖಕ ಕುಚ್ಚಂಗಿ ಪ್ರಸನ್ನ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಕೆ.ಟಿ. ಶಿವಪ್ರಸಾದ್ ಇತರರಿದ್ದರು.
ಯೋಗದಿಂದ ನಿಯಂತ್ರಣ
ತುಮಕೂರು: ಬೌದ್ಧ ತಾತ್ವಿಕತೆಗೆ ಕರ್ನಾಟಕದ ಕೊಡುಗೆ ಅಪಾರ ಎಂದು ಹೆಸರಾಂತ ಬೌದ್ಧ ಮೀಮಾಂಸಕ ಹಾಗೂ ವಿಮರ್ಶಕ ಡಾ. ನಟರಾಜ್ ಬೂದಾಳ್ ಪ್ರತಿಪಾದಿಸಿದರು. ಅವರು ಕುಚ್ಚಂಗಿ ಪ್ರಸನ್ನರ ಇದು ಜೆನ್ ಅಲ್ಲ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಬೌದ್ಧ ತಾತ್ವಿಕತೆಗೆ ದಕ್ಷಿಣ ಭಾರತದ ಅದರಲ್ಲಿಯೂ ಕರ್ನಾಟಕದ ಕೊಡುಗೆ ಆಪಾರ. ಬೌದ್ಧ ಧರ್ಮವೆಂದಾಕ್ಷಣ ಎಲ್ಲರೂ ಉತ್ತರದ ಕಡೆಗೆ ನೋಡುತ್ತಾರೆ. ಆದರೆ ಬೌದ್ದ ತಾತ್ವಿಕತೆಗೆ ಹೆಚ್ಚು ಕೊಡುಗೆ ನೀಡಿದ್ದು, ದಕ್ಷಿಣ ಭಾರತ ಅದನ್ನು ಇತಿಹಾಸದಿಂದ ಮರೆಮಾಚಲಾಗಿದೆ ಎಂದು ವಿಷಾದಿಸಿದರು.
ಯೋಗ, ಧ್ಯಾನ ಅಧಿಕಾರ ನಿಯಂತ್ರಣ: ಇಂದು ಬಹುತೇಕ ಜನತೆ ಭಾವನಾತ್ಮಕ ಮತ್ತು ವಾಸ್ತವ ಇವೆರಡರ ನಡುವಿನ ಗೊಂದಲದಲ್ಲಿದ್ದಾರೆ. ಅದ್ವೈತ ಸಿದ್ದಾಂತ ಉಳಿದೆಲ್ಲವನ್ನು ನಿಯಂತ್ರಿಸುವಂತೆ, ಭಾವನಾತ್ಮಕ ವಿಷಯಗಳು ಹಲವರ ಅಧಿಕಾರ ಕಿತ್ತುಕೊಂಡಿರುವುದು ಇತ್ತೀಚಿನ ಸಾಂಸ್ಕೃತಿಕ ರಾಜಕಾರಣದಿಂದ ಕಾಣಬಹುದಾಗಿದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

