ಸನಾತನ ಸಂಸ್ಕೃತಿಯಿಂದ ಗುರುಪರಂಪರೆ
ತುಮಕೂರು: ಭಾರತದ ಸನಾತನ ಸಂಸ್ಕೃತಿ ಉಳಿದಿರುವುದು ಗುರುಪರಂಪರೆ ಮತ್ತು ಋಷಿ ಸಂಸ್ಕೃತಿಯಿಂದ ಎಂದು ನಿವೃತ್ತ ಉಪನ್ಯಾಸಕ ಕೆ.ಕೆ. ಶ್ರೀಧರ ಶರ್ಮ ಅಭಿಪ್ರಾಯಪಟ್ಟರು.
ಅವರು ಸಂಸ್ಕಾರ ಭಾರತಿ, ಗನಕ ಭಾರತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮನುಷ್ಯನನ್ನು ಸುಸಂಸ್ಕೃತನನ್ನಾಗಿ ರೂಪಿಸಿದ್ದು ವೇದ. ವೇದವನ್ನು ಋಷಿಗಳು ಸಮಾಜಕ್ಕೆ ನೀಡಿರುವುದು ಅಮೂಲ್ಯ ಕೊಡುಗೆ. ಇಚ್ಛಾಶಕ್ತಿ, ಕ್ರಿಯಾ ಶಕ್ತಿ ನೀಡುವವನು ಗುರು. ಗುರುವಿಲ್ಲದೆ ಗುರಿ ಇಲ್ಲಾ. ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನ ನೀಡುವನು ಎಂದರು.
ಯೋಗ್ಯವಾದವರಿಗೆ ಗುರು ಉಪದೇಶಿಸುತ್ತಾನೆ. ತ್ರಿಮೂರ್ತಿ ಸ್ವರೂಪನಾದ ಗುರು ತಾನು ಕಲಿತ ವಿದ್ಯೆ ಸತ್ಪಾತ್ರರಿಗೆ ನೀಡಿದಾಗ ಸಮಾಜ ಸಂಸ್ಕಾರದಿಂದ ಕೂಡಿರುತ್ತದೆ. ಭಗವದ್ಗೀತೆಯಾಗಲಿ, ಮಹಾಕಾವ್ಯಗಳಾಗಲಿ ಗುರುವೇ ಪ್ರಧಾನ ಪಾತ್ರ ವಹಿಸುತ್ತಾನೆ. ಸದಾ ಶಿಷ್ಯರ ಅಭ್ಯುದಯವನ್ನು ಬಯಸುತ್ತಾ ಸಮಾಜದ ಓರೆ ಕೋರೆಗಳನ್ನು ತಿದ್ದುತ್ತಾ ಜ್ಞಾನದಾಹವನ್ನು ನೀಗಿಸುವ ಆತನ ಪಾತ್ರ ಅತಿ ಎತ್ತರದ್ದು ಎಂದರು.
ಶ್ರೀಧರಶರ್ಮ ಅವರನ್ನು ನಾ. ವೆಂಕಟೇಶ್ ಜೋಯಿಸ್ ಪರಿಚಯಿಸಿದರು. ಸನ್ಮಾನ ಪತ್ರವನ್ನು ಡಾ. ಪಾವಗಡ ರೇಣುಕಾ ಪ್ರಸಾದ್ ವಾಚಿಸಿದರು. ಸಂಸ್ಕಾರ ಭಾರತೀಯ ಕ್ರಿಯಾ ಚಟುವಟಿಕೆಗಳ ಬಗ್ಗೆ ಗ.ಸೀ. ಶ್ರೀನಿವಾಸಮೂರ್ತಿ ತಿಳಿಸಿದರು. ಅನಂತರಾಮಯ್ಯ ವಂದಿಸಿದರು.
ಹಣಬಲ ಪ್ರಯೋಗಿಸಿದ ಜಯಚಂದ್ರ: ಆರೋಪ
ಶಿರಾ: ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರು, ಕಾಂಗ್ರೆಸ್ನ ಸಚಿವ ಟಿ.ಬಿ.ಜಯಚಂದ್ರ ಅವರು ಹಣಬಲ, ಅಧಿಕಾರ ಬಲದಿಂದ ತಾಲೂಕಿನಲ್ಲಿ ಕೀಳು ರಾಜಕಾರಣಕ್ಕೆ ಅಸ್ತಿಭಾರ ಹಾಕಿದ್ದಾರೆ. ತಮ್ಮ ಹಣ ಬಲದಿಂದ ಜೆಡಿಎಸ್ ಚಿಹ್ನೆಯಿಂದ ಗೆದ್ದ ನಾಲ್ಕು ಜನ ಸದಸ್ಯರಿಗೆ ಬೆಲೆ ಕಟ್ಟಿ, ಅವರಿಂದ ಪಕ್ಷದ ಆದೇಶ ವಿಪ್ ಉಲ್ಲಂಘನೆ ಮಾಡಿಸಿ, ತನ್ನ ಪಕ್ಷವನ್ನು ಒಂದು ಮತದ ಅಂತರದಿಂದ ಶಿರಾ ತಾಪಂನಲ್ಲಿ VæÆÇÒOÚæàMt¥Û§Áæ’ ಎಂದು ಆರೋಪಿಸಿದರು. ಜಿಲ್ಲಾ ಸಚಿವರಾಗಿ, ರಾಜ್ಯದ ಕಾನೂನು ಸಚಿವರಾಗಿ ಬೇರೆ ಪಕ್ಷದವರನ್ನು ಪಕ್ಷಾಂತರ ಮಾಡಿಸಿಕೊಂಡು ಅವರೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈಗ ಪಕ್ಷಾಂತರಗೊಂಡಿರುವ ಸದಸ್ಯರು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಜಿಲ್ಲಾ ಹಿಂದುಳಿದ ವರ್ಗ ಅಧ್ಯಕ್ಷ ಮುದಿಮಡು ರಂಗಶಾಮಯ್ಯ, ಕಳ್ಳಂಬೆಳ್ಳ ಕ್ಷೇತ್ರ ಮುಖಂಡ ಮಹದೇವಪ್ಪ, ಕೆ.ಎಂ.ಹೆಂಜಾರಪ್ಪ ಸೇರಿದಂತೆ ತಾಪಂ ಸದಸ್ಯರು, ಜಿಪಂ ಸದಸ್ಯರು ಹಾಜರಿದ್ದರು.
ಅಧಿಕಾರಿಗಳ ನೀತಿ ಖಂಡಿಸಿ ಪ್ರತಿಭಟನೆ
ತುಮಕೂರು: ಶಿರಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ರಾಜ್ಯ ಸರ್ಕಾರದ ಮೆಟ್ರಿಕ್ಪೂರ್ವ ವಿದ್ಯಾರ್ಥಿ ವೇತನ ಹಾಗೂ ಕೇಂದ್ರ ಪುರಸ್ಕೃತ ವಿದ್ಯಾರ್ಥಿ ವೇತನ ನೀಡಲು ಅರ್ಹ ಪ್ರವರ್ಗ-1, 2ಎ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿ ವೇತನ ಪಡೆಯುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನು ಮಂಡ್ಯ: ಮೇಲುಕೋಟೆ ಚಲುವನಾರಾಯಣಸ್ವಾಮಿ ಕೃಷ್ಣರಾಜ ಮುಡಿ ಉತ್ಸವಕ್ಕೆ ಜಿಲ್ಲಾ ಖಜಾನೆಯಿಂದ ಕೃಷ್ಣರಾಜ ಮುಡಿ ಹಾಗೂ ಇತರ ಆಭರಣಗಳನ್ನು ಉತ್ಸವಕ್ಕೆ ತೆಗೆದುಕೊಂಡು ಹೋಗಲು ತಮಗೆ ಅವಕಾಶ ನೀಡದ ಅಧಿಕಾರಿಗಳ ನೀತಿಯನ್ನು ಖಂಡಿಸಿ ನಾಲ್ಕನೇ ಸ್ಥಾನಿಕರು ಹಾಗೂ ಅವರ ಬೆಂಬಲಿಗರು ವಾಹನ ತಡೆದು ಪ್ರತಿಭಟಿಸಿದರು. ಮಂಡ್ಯ ಜಿಲ್ಲಾ ಖಜಾನೆಯಲ್ಲಿದ್ದ ಕೃಷ್ಣರಾಜಮುಡಿ ಹಾಗೂ ಇತರೆ ಆಭರಣಗಳನ್ನು ಗುರುವಾರ ಸಂಜೆಯ ವೇಳೆಗೆ ಮೇಲುಕೋಟೆಯಲ್ಲಿ ನಡೆಯುವ ಕೃಷ್ಣರಾಜ ಮುಡಿ ಉತ್ಸವಕ್ಕೆ ತೆಗೆದುಕೊಂಡು ಹೋಗಬೇಕಾಗಿತ್ತು. ವಾಹನದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ 4ನೇ ಸ್ಥಾನಿಕರಾದ ಎಸ್.ನಾಗರಾಜ ಅಯ್ಯಂಗಾರ್ ಮತ್ತು ಬೆಂಬಲಿಗರು ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಕೃಷ್ಣರಾಜ ಮುಡಿ ಮತ್ತು ಆಭರಣಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕೊನೆಗೆ ಪ್ರತಿಭಟನೆ ಹಾದಿ ಹಿಡಿದರು.
ಕಾಲೇಜು ಮೈದಾನದ ಮರಕಡಿದ ಕಿಡಿಗೇಡಿಗಳು
ಚಿಕ್ಕನಾಯಕನಹಳ್ಳಿ: ಪಟ್ಟಣದ ಸರ್ಕಾರಿ ಪದವಿ ಕಾಲೇಜು ಮೈದಾನದ ಮರಗಳನ್ನು ಒತ್ತುವರಿ ಹುನ್ನಾರ ನಡೆಸುತ್ತಿರುವ ಕಿಡಿಗೇಡಿಗಳು ಹಂತಹಂತವಾಗಿ ಕಡಿಯುತ್ತಿರುವುದರಿಂದ ಕಾಲೇಜು ಸಿಬ್ಬಂದಿಗೆ ಆತಂಕವಾಗಿದೆ.
ಪದವಿ ಕಾಲೇಜು ಮೈದಾನದ ಸುತ್ತ ಪಟ್ಟಭದ್ರ ಹಿತಾಸಕ್ತಿಗಳ ದುಷ್ಟಕೂಟವೆ ಇದ್ದು, ಈಗಾಗಲೇ ಹಲವು ಮರಗಳು ಬಲಿಯಾಗಿವೆ. ಇತ್ತೀಚೆಗೆ ಕಾಲೇಜಿಗೆ ಬಂದ ಪ್ರಾಂಶುಪಾಲರು ಕಾಲೇಜಿನ ಬಗ್ಗೆ ಬಹಳ ಮುತುವರ್ಜಿ ವಹಿಸಿದ ಪರಿಣಾಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದ್ಲಲಿ ಏರಿಕೆ ಕಂಡಿತು. ಅದರ ಅಂಗವಾಗಿ ಕಾಲೇಜಿನಲ್ಲಿ ಎನ್ಎಸ್ಎಸ್, ಪರಿಸರ ಸಂಘಟನೆಗಳನ್ನು ಕಟ್ಟಿ ವಿಸ್ತಾರವಾಗಿದ್ದ ಕಾಲೇಜು ಮೈದಾನವನ್ನು ಮರಗಿಡಗಳಿಂದ ಹಸಿರು ಮುಚ್ಚುವಂತೆ ಮಾಡಿದ್ದರು. ಇದರಿಂದ ಒತ್ತುವರಿದಾರರ ಪ್ರಕ್ರಿಯೆಗೆ ಅಡ್ಡಿಯಾದ ಪರಿಣಾಮ ಹಂತಹಂತವಾಗಿ ಮರಗಳನ್ನು ಕಡಿಯುತ್ತಿರುವುದರಿಂದ ಮೈದಾನದಲ್ಲಿದ್ದ ಹಲವಾರು ಮರಗಳು ಈಗಾಗಲೇ ನಾಶವಾಗಿವೆ.
ಈ ಕೃತ್ಯದ ಹಿಂದೆ ಕಾಲೇಜು ಸುತ್ತಮುತ್ತಲಿನ ನಿವೇಶನ ಒತ್ತುವರಿದಾರರ ಕೈವಾಡವಿರುವುದಾಗಿ ಶಂಕಿಸಲಾಗಿದೆ. 5 ಎಕರೆ ಪ್ರದೇಶದ ವಿಸ್ತಾರ ಹೊಂದಿರುವ ಮೈದಾನದಲ್ಲಿ ನೂರಾರು ಸಸಿಗಳನ್ನು ವಿದ್ಯಾರ್ಥಿಗಳು ತಮ್ಮ ಮಕ್ಕಳಂತೆ ದತ್ತು ಪಡೆದು ಪೋಷಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ಕಾಲೇಜುವತಿಯಿಂದ ತಮ್ಮ ನಿವೇಶನದ ಗಡಿ ಗುರ್ತಿಸಿಕೊಳ್ಳಲು ಸರ್ಕಾರದ ಕಡೆಯಿಂದ ಅಳತೆ ಮಾಡಿಸುತ್ತಿದ್ದಾಗ, ಕೆಲವರು ವಿನಾಕಾರಣ ವಿವಾದ ಎಬ್ಬಿಸಿದ್ದರು. ಕಾಲೇಜು ಮೈದಾನದೊಳಗೆ ತಮಗೆ ತಿರುಗಾಡಲು ದಾರಿ ಬಿಡಬೇಕೆಂದು ಅನವಶ್ಯಕ ಕ್ಯಾತೆ ಮಾಡುವ ಮೂಲಕ ಸರ್ವೆ ಕಾರ್ಯವನ್ನು ಸ್ಥಗಿತಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಬಗ್ಗೆ ತಹಸೀಲ್ದಾರ್ಗೆ ದೂರು ನೀಡಲಾಗಿತ್ತು. ಸದರಿ ದೂರಿನನ್ವಯ ತಹಸೀಲ್ದಾರ್ ತಕರಾರು ಮಾಡಿದವರಿಗೆ ವಿವರಣೆ ನೀಡುವಂತೆ ನೋಟಿಸ್ ಜಾರಿಮಾಡಿದ್ದರು. ಆದರೆ ಈವರೆಗು ಯಾರಿಂದಲೂ ಈ ಬಗ್ಗೆ ತಕರಾರು ಬಂದಿಲ್ಲ. ಈಗ ಏಕಾಏಕಿ ಅಕ್ರಮವಾಗಿ ಮರ ಕಡಿಯುವ ಮೂಲಕ ದುಷ್ಕಮಿಗಳು ವಿವಾದ ಸೃಷ್ಟಿಸಿದ್ದಾರೆ. ಈ ಕೃತ್ಯದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲ ವಿ. ವರದರಾಜು ಠಾಣೆಗೆ ಮತ್ತು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ದೂರಿನನ್ವಯ ಅರಣ್ಯ ಇಲಾಖೆಯವರು ಬಂದು ಸ್ಥಳಪರಿಶೀಲನೆ ಮಾಡಿದ್ದಾರೆ. ಒಂದು ಸಾವಿರ ವಿದ್ಯಾರ್ಥಿಗಳಿರುವ ಸರ್ಕಾರಿ ಪದವಿ ಕಾಲೇಜಿಗೆ ಕಾಂಪೌಂಡ್ ಇರಲಿ ಕನಿಷ್ಠ ತಂತಿ ಬೇಲಿ ಹಾಕಿಸುವ ಬಗ್ಗೆ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕರು ಗಮನಹರಿಸಿಲ್ಲ. ವಿದ್ಯಾರ್ಥಿಗಳಿಗೆ ಕೊಠಡಿಗಳ ಸಮಸ್ಯೆ ತಲೆದೋರಿದಾಗ ಅಂದಿನ ಪ್ರಾಂಶುಪಾಲರೇ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ 70 ಲಕ್ಷ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದರು. ಇದು ಬಿಟ್ಟರೆ ಶಾಸಕರು ತಮ್ಮ ತಂದೆಯವರ ಹೆಸರಿನಲ್ಲಿ ವಾಗ್ದಾನ ಮಾಡಿದ್ದ ಲಕ್ಷರು.ಗಳ ಭರವಸೆ ಬಗ್ಗೆ ತಿಳಿದುಬಂದಿಲ್ಲ.
ಬಾಲಕಿ ಅಪಹರಿಸಿ ಅತ್ಯಾಚಾರ
ನಾಗಮಂಗಲ: ಬಾಲಕಿ ಅಪಹರಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ಬಾಲಕಿ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗ್ರಾಮದ 16 ವರ್ಷದ ಬಾಲಕಿ ಮೇಲೆ ಪಕ್ಕದ ಮದ್ದೇನಹಟ್ಟಿ ಗ್ರಾಮದ ಸಣ್ಣಪ್ಪ ಎಂಬುವರ ಪುತ್ರ ಸಿದ್ದರಾಜು (25) ಎಂಬಾತ ಅತ್ಯಾಚಾರವೆಸಗಿದ್ದಾನೆ ಎಂದು ದೂರಿದ್ದಾರೆ. ಬಾಲಕಿಯು ಬೆಂಗಳೂರಿನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಕಳೆದ ಎರಡು ತಿಂಗಳ ಹಿಂದೆ ಭೀಮನಹಳ್ಳಿ ಗ್ರಾಮದಲ್ಲಿ ಜರುಗಿದ ಹಬ್ಬವೊಂದಕ್ಕೆ ಊರಿಗೆ ಬಂದಿದ್ದ ಸಮಯದಲ್ಲಿ ಸಿದ್ದರಾಜುವಿನ ಪರಿಚಯವಾಗಿದೆ. ನಂತರ ಜು.8ರಂದು ಆರೋಪಿ ಸಿದ್ದರಾಜು ಬಾಲಕಿಯ ಸ್ನೇಹಿತೆಯೊಬ್ಬಳ ಮೂಲಕ ಗ್ರಾಮದ ಹೊರವಲಯಕ್ಕೆ ಕರೆಸಿಕೊಂಡು, ಲಕ್ಷ್ಮೀಪುರ ಗ್ರಾಮದ ಸ್ನೇಹಿತನೊಬ್ಬನ ಮನೆಗೆ ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಬಾಲಕಿ ಅತ್ಯಾಚಾರ ಯತ್ನ: ಆರೋಪಿ ಸೆರೆಗೆ ಒತ್ತಾಯ
ಕುಣಿಗಲ್: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿರುವ ಆರೋಪಿಯನ್ನು ಬಂಧಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ತಾಲೂಕಿನ ಅಮೃತೂರು ಠಾಣಾ ವ್ಯಾಪ್ತಿಯ ಹುಲಿವಾನ ಗ್ರಾಮದಲ್ಲಿ ಘಟನೆ ನಡೆದಿದ್ದು, ದನಗಳಿಗೆ ಹುಲ್ಲು ತರಲು ಹೊಲಕ್ಕೆ ಹೋಗುವಾಗ ಇದೇ ಗ್ರಾಮದ ಮುನಿರಾಜು ಎಂಬ ಯುವಕ, ನಿರ್ಜನ ಪ್ರದೇಶಕ್ಕೆ ಎತ್ತಿಕೊಂಡು ಹೋಗಲು ಯತ್ನಿಸಿ, ಬಾಲಕಿಯ ಬಟ್ಟೆ ಹರಿದಿದ್ದು, ಕೂಗಿಕೊಂಡ ಪರಿಣಾಮ ಕೊಲೆ ಮಾಡುವ ಬೆದರಿಕೆ ಹಾಕಿ, ಎತ್ತೊಯ್ಯಲು ಯತ್ನಿಸಿದ್ದಾನೆ. ಬಾಲಕಿಯ ಚೀರಾಟ ಕೇಳಿದ ಸ್ಥಳೀಯರು ಬಂದಾಗ ಬಾಲಕಿಯನ್ನು ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿ ಬಾಲಕಿ ಅಮೃತೂರು ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸದ ಕಾರಣ ಗ್ರಾಮದಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿದ್ದು. ಆರೋಪಿಯನ್ನು ಬಂಧಿಸಿ, ಬಾಲಕಿಗೆ ನ್ಯಾಯದೊರಕಿಸಿಕೊಡುವಂತೆ ಗ್ರಾಮಸ್ಥರಾದ ಗಂಗಾಧರ, ಕಾಳೇಗೌಡ, ತಿಮ್ಮಯ್ಯ ಆಗ್ರಹಿಸಿದ್ದಾರೆ.
ಆಟೋಗಳ ಮುಖಾಮುಖಿ ಡಿಕ್ಕಿ: ಒಬ್ಬನ ಸಾವು, ಹಲವರಿಗೆ ಗಾಯ
ಮಧುಗಿರಿ: ತಾಲೂಕಿನ ಸಿದ್ದಾಪುರ ವೇಣುಗೋಪಾಲಸ್ವಾಮಿ ದೇವಸ್ಥಾನದ ಸಮೀಪ ಎರಡು ಪ್ಯಾಸೆಂಜರ್ ಆಟೋಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು ಹಲವರು ಗಾಯಗೊಂಡು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನ ಪುರವರ ಹೋಬಳಿ ಗಿರಿಗೌಡನಹಳ್ಳಿ ನಿವಾಸಿ ನರಸಿಂಹಮೂರ್ತಿ(32) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದ್ದು ಮಧುಗಿರಿಯಿಂದ-ಬಡವನಹಳ್ಳಿ ಕಡೆಗೆ ಪ್ಯಾಸೆಂಜರ್ ತುಂಬಿಕೊಂಡು ಹೋಗುತ್ತಿದ್ದ ಆಟೋ ಮತ್ತು ಬಡವನಹಳ್ಳಿಯಿಂದ ಮಧುಗಿರಿಗೆ ಬರುತ್ತಿದ್ದ ಆಟೋಗಳ ನಡುವೆ ಸಿದ್ದಾಪುರ ಸಮೀಪ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಗುರುವಾರ ರಾತ್ರಿ ಮುಖಾಮುಖಿ ಡಿಕ್ಕಿ ಹೊಡೆದಿವೆ.ನರಸಿಂಹಮೂರ್ತಿ ಸ್ಥಳದಲ್ಲೇ ಮೃತಪಟ್ಟರೆ ಹಲವರಿಗೆ ಪೆಟ್ಟು ಬಿದ್ದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪಿಎಸೈ ಅಂಬರೀಶ್, ಸಿಪಿಐ ಗಿರಿಶ್ ನಾಯ್ಕ್ ಭೇಟಿ ನೀಡಿ ಪ್ರಕರಣ ದಾಖಲಾಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

