ಗ್ರಾಮ ವಾಸಿಗಳೆಲ್ಲರೂ ಗ್ಯಾಸ್ ಬಳಸಿದರೆ ಒಳಿತು
ಕೊರಟಗೆರೆ: ಗ್ರಾಮವಾಸಿಗಳೆಲ್ಲರೂ ಗ್ಯಾಸ್ ಬಳಸಬೇಕು, ಉರುವಲಿಗಾಗಿ ಹುಡುಕುವುದು ನಿಲ್ಲಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ತಾಲೂಕು ಯೋಜನಾಧಿಕಾರಿ ಎ. ಮುರುಳೀಧರ್ ತಿಳಿಸಿದರು.
ಅವರು ತಾಲೂಕಿನ ಅಕ್ಕಿರಾಂಪುರ ವಲಯದ ರೆಡ್ಡಿಹಳ್ಳಿಯಲ್ಲಿ ಸಂಘದ ವತಿಯಿಂದ 32 ಜನ ಸದಸ್ಯರಿಗೆ ಎಲ್.ಪಿ.ಜಿ. ಗ್ಯಾಸ್ ವಿತರಣೆ ಮತ್ತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಉರುವಲಿಗೆ ಸಮಸ್ಯೆಯಾಗುತ್ತದೆ. ಉರುವಲಿಗಾಗಿ ಅರಣ್ಯ ನಾಶವಾಗುತ್ತದೆ. ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲು ಎಲ್ಲರೂ ಗೋಬರ್ ಗ್ಯಾಸ್, ಎಲ್ಪಿಜಿ ಗ್ಯಾಸ್ಗಳನ್ನು ಬಳಸುವಂತಾಗಬೇಕು. ಸಂಘದ ವತಿಯಿಂದ ಇಂತಹವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಗ್ರಾ.ಪಂ ಸದಸ್ಯ ಓಬಳೇಶ್, ಹಾಲು ಉತ್ಪಾದಕರ ಸಂಘದ ಸದಸ್ಯ ನಂಜುಂಡಯ್ಯ, ಮುಖಂಡ ರಾಜಣ್ಣ, ಸೇವಾಪ್ರತಿನಿಧಿ ಅನಿತಾಲಕ್ಷ್ಮೀ , ಧರ್ಮಸ್ಥಳ ಸಂಘದ ಮೇಲ್ವಿಚಾರಕ ರವೀಂದ್ರ, ಭಾರತ್ ಗ್ಯಾಸ್ ಏಜೆಂಟ್ ಕಿಶೋರ್ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

