ತುಮಕೂರು

ಸ್ತ್ರೀ ಶಕ್ತಿ ಗುಂಪಿಗೆ ಪ್ರೋತ್ಸಾಹ ಧನ ವಿತರಣೆ

Published On :

ತುರುವೇಕೆರೆ: ತಾಲೂಕಿನ ಹಲವಾರು ಸ್ತ್ರೀ ಶಕ್ತಿ ಗುಂಪುಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯಿಂದ ನೀಡಲಾಗುವ ವಿವಿಧ ಯೋಜನೆಗಳಾದ ಕಿರು ಸಾಲ, ಪ್ರೋತ್ಸಾಹ ಧನ, ಸುತ್ತು ನಿಧಿಗಳನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಬಿಡುಗಡೆ ಮಾಡಿದರು. ಇಂದಿರಾ ನಗರದ ಇಂದಿರಾ ಗಾಂಧಿ ಸ್ತ್ರೀ ಶಕ್ತಿ ಸಂಘಕ್ಕೆ ಕಿರುಸಾಲವಾಗಿ 1 ಲಕ್ಷ ರು.ಗಳು, ಡಿ.ಪಾಳ್ಯದ ಕನ್ನಿಕಾ ಪರಮೇಶ್ವರಿ ಸಂಘ, ಮೇಲಿನವರಗೇನಹಳ್ಳಿಯ ಚಿಕ್ಕಮ್ಮ ಸಂಘ,
ಮಾದಾಪಟ್ಟಣದ ಕೆಂಪಮ್ಮ ಸಂಘ, ಚಾಕುವಳ್ಳಿ ಪಾಳ್ಯದ ಸರಸ್ವತಿ ಸಂಘ, ಹನುಮಾಪುರದ ಶನಿದೇವರ ಸಂಘ, ಬೀಚನಹಳ್ಳಿಯ ತುಳಸಿ ಸಂಘ, ಜಿ. ದೊಡ್ಡೇರಿಯ ಹಚ್ಚಮ್ಮ ದೇವಿ ಸಂಘಕ್ಕೆ ಪ್ರೋತ್ಸಾಹ ಧನವಾಗಿ ತಲಾ 5 ಸಾವಿರ ರು.ಗಳನ್ನು, ಬ್ಯಾಡರಹಳ್ಳಿಯ ಲಕ್ಷ್ಮೀದೇವಿ ಸಂಘ ಹಾಗೂ ಪುಟ್ಟ ಮಾದಿಹಳ್ಳಿಯ ತಾತಯ್ಯ ಸ್ತ್ರೀಶಕ್ತಿ ಸಂಘಕ್ಕೆ ತಲಾ 15 ಸಾವಿರ ರು.ಗಳ ಪ್ರೋತ್ಸಾಹ ಧನವನ್ನು ಶಾಸಕ ಎಂ.ಟಿ.ಕೃಷ್ಣಪ್ಪ ವಿತರಣೆ ಮಾಡಿದರು.  ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿ.ಟಿ. ವೆಂಕಟರಾಮಯ್ಯ, ಇ. ಓ. ವಾಳ್ವೇಕರ್, ಎಪಿಎಂಸಿ ಅಧ್ಯಕ್ಷ ಬಸವರಾಜು, ಸಿಡಿಪಿಓ ರವೀಂದ್ರ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.