ತುಮಕೂರು

ನಿಸ್ವಾರ್ಥ ಸೇವೆಯಿಂದ ಆದರ್ಶ ಗ್ರಾಮ ಸಾಧ್ಯ

Published On :

ತಿಪಟೂರು: ನಿಸ್ವಾರ್ಥ ಸೇವೆ ಮೂಲಕ ಆದರ್ಶ ಗ್ರಾಮ ಬೆಳೆಸುವ ಜೊತೆಗೆ ನಮ್ಮ ಮಣ್ಣು, ಕೃಷಿಯನ್ನು ಗೌರವಿಸಬಹುದು ಎಂದು ಡಾ.ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಗೋಪಾಲನಹಳ್ಳಿಯಲ್ಲಿ ನಡೆದ ಸಿರಿಧಾನ್ಯಮೇಳ ಮತ್ತು ಸಂಸ್ಕರಣೆ ಘಟಕದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿನಾಶದ ಅಂಚಿನಲ್ಲಿರುವ ಹಾರಕವನ್ನು ಗೋಪಾಲನಹಳ್ಳಿಯ ಯುವ ರೈತರೇ ಉಳಿಸಿ ಬೆಳೆಸಲು ನಡೆಸುತ್ತಿರುವ ಪ್ರಯತ್ನ ಹೊಸ ಆಶಾಕಿರಣ ಮೂಡುವಂತೆ ಮಾಡಿದೆ ಎಂದರು.
ಡಾ.ಕೆ. ನಾರಾಯಣಗೌಡ ಮಾತನಾಡಿ, ಬೆಂಗಳೂರಿನ ಕೆಎಸ್ಎಫ್ ಪ್ರಾದೇಶಿಕ ನಿರ್ವಹಣಾಧಿಕಾರಿ ನಾಗರಾಜ್ ಜಿ.ನಾಯಕ್, ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಜಿ. ಅನೂಪ್, ಸಹಾಯಕ ಕೃಷಿ ನಿರ್ದೇಶಕ ಡಾ. ಉಮೇಶ್, ನೇತ್ರಾಧಿಕಾರಿ ಎಂ.ಎನ್. ಗಂಗಾಧರಯ್ಯ ಮಾತನಾಡಿದರು.
ಹಾರಕದಿಂದ ತಯಾರಿಸಿದ ರೊಟ್ಟಿ, ಚಿತ್ರಾನ್ನ, ಮೊಸರನ್ನ, ಹಪ್ಪಳ, ಇಡ್ಲಿ, ದೋಸೆ, ನವಣೆ ಪಾಯಸ ಇತರೆ ಪದಾರ್ಥಗಳನ್ನು ಭಾಗವಹಿಸಿದ ರೈತರಿಗೆ ಉಣಬಡಿಸಲಾಯಿತು. ಅಲ್ಲದೇ ಹಸಿರು ಚಪ್ಪರ ಸಿರಿಧಾನ್ಯಗಳ ಮಳಿಗೆ, ಸಿಂಗರಿಸಿದ ಹೋರಿಗಳು, ರಂಗೋಲಿ ಜೊತೆಗೆ ಸ್ಥಳೀಯ ಚಿತ್ರಕಲಾವಿದ ಆತ್ಮಾನಂದರ ಸರ್ವೋದಯ ಹಿಟ್ಟಿನಗಿರಿಣಿ ಎಂಬಲ್ಲಿ ಬರೆದ ಗಾಂಧೀಜಿಯವರ ಚಿತ್ರ ಮನಸೂರೆಗೊಂಡಿತು. ಸೃಜನವತಿಯಿಂದ ಇಂದ್ರಮ್ಮ, ವಿಜ್ಞಾನ ಪರಿಷತ್ತಿನ ರಾಮಕೃಷ್ಣಪ್ಪ, ರೋಹಿತಾಕ್ಷ,ನಾಗರಾಜು, ಅರುಣ್ಕುಮಾರ್ ಭಟ್, ಜಿ.ಎಂ. ಬಸವರಾಜು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.