ತುಮಕೂರು

ನಮೋ ಬೆಂಬಲಕ್ಕೆ ಶಿವಯೋಗಿಸ್ವಾವು ಗೆಲ್ಲಿಸಿ

Published On :

ಕ.ಪ್ರ. ವಾರ್ತೆ ಟಿ ತುಮಕೂರು ಟಿ ಜೂ. 14
ನಮೋಸ್ತುತಿ ಮೇಲ್ಮನೆ ಚುನಾವಣೆಯಲ್ಲೂ ಮುಂದುವರೆದಿದೆ. ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಎ.ಎಚ್. ಶಿವಯೋಗಿಸ್ವಾವು ಅವನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನಮೋ ಬೆಂಬಲಿಸಿ. ಬಲಿಷ್ಟ ಭಾರತದ ಮೋದಿ ಆಶಯ ಈಡೇರಲು ಶಿವಯೋಗಿಸ್ವಾವು ಅವರನ್ನು ವಿಧಾನಪರಿಷತ್‌ಗೆ ಆರಿಸಿ ಕಳುಹಿಸಿ ಎಂದು ಕೇಂದ್ರ ರೈಲ್ವೆ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಕರೆ ನೀಡಿದರು.
ತುಮಕೂರಿನಲ್ಲಿ ಬಿಜೆಪಿ ವತಿಯಿಂದ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಸಭೆಯಲ್ಲಿ ಅವರು ಮಾತನಾಡಿದರು. ಸಾಮಾನ್ಯರಲ್ಲಿ ಸಾಮಾನ್ಯನಾಗಿರುವ, ಯಶಸ್ವಿ ಜನಪ್ರತಿನಿಧಿಯೆಂದೇ ಹೆಸರಾಗಿರುವ, ಸದಾ ಪದವೀಧರ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ, ಸಮಸ್ಯೆಗಳ ಪರಿಹಾರಕ್ಕೆ ಸದನದಲ್ಲಿ ಧನಿಯಾಗುವ, ಸದನ ಆರಂಭವಾಗುವುದಕ್ಕೆ 5 ನಿಮಿಷ ಮುಂಚೆ ಹಾಜರಿದ್ದು, ಕಲಾಪ ಮುಗಿಯುವವರೆಗೂ ಸದನದಲ್ಲೇ ಇರುವ ಬಿಜೆಪಿ ಅಭ್ಯರ್ಥಿ ಡಾ. ಎ. ಎಚ್. ಶಿವಯೋಗಿಸ್ವಾವು ಅವರನ್ನು ಆಯ್ಕೆ ಮಾಡುವಂತೆ ಪದವೀಧರ ಮತದಾರರಿಗೆ ಡೀವಿ ಮನವಿ ಮಾಡಿದರು.
ಎತ್ತಿನಹೊಳೆ ಯೋಜನೆ ಅನುಷ್ಠಾನದಲ್ಲೂ ಶಿವಯೋಗಿಸ್ವಾವು ಅವರ ಪಾತ್ರ ಇದೆ. ಹೈಸ್ಕೂಲ್ ಸಹಶಿಕ್ಷಕರ ಕಾಲಮಿತಿ ಬಡ್ತಿಗೆ ಮಸೂದೆ ಸಿದ್ಧವಾಗಿದೆ. ಈ ವಿಷಯದಲ್ಲೂ ಶಿವಯೋಗಿಸ್ವಾವುಯಿದ್ದಾರೆ. ಈ ಬಾರಿಯ ಲೋಕಸಭೆಗೆ ಮೋದಿ ನೇತೃತ್ವದಲ್ಲಿ ನಮ್ಮನ್ನು ಗೆಲ್ಲಿಸಿದ್ದೀರಿ. ದೇಶದಲ್ಲಿ ಬದಲಾವಣೆಯ ಹೊಸ ಶಕೆಗೆ ಕಾರಣರಾಗಿದ್ದೀರಿ. ಅದೇ ರೀತಿ ಜವಾಬ್ದಾರಿ ಜನಪ್ರತಿನಿಧಿಗಳಿರುವ ವಿಧಾನಪರಿಷತ್‌ಗೂ ಮತ್ತೊಮ್ಮೆ ಶಿವಯೋಗಿಸ್ವಾವುಯವರನ್ನು ಕಳುಹಿಸಿ ಎಂದರು.
ಸುಶಾಸನಕ್ಕೆ ಹೆಚ್ಚು ಒತ್ತು: ಎಲ್ಲರಿಗೂ ಮಾದರಿಯಾಗುವಂತೆ ಮೋದಿ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜಕಾರಣದಲ್ಲಿ ಶಿಸ್ತು ತರುವ ಹಿನ್ನೆಲೆಯಲ್ಲಿ ಮೋದಿ ಅಧಿಕಾರಿ, ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾರಂಭ ಮಾಡಿದ್ದಾರೆ. ಜನಪ್ರತಿನಿಧಿಗಳಷ್ಟೇ ಅಧಿಕಾರಿಗಳು ಕೂಡ ಜವಾಬ್ದಾರರು ಎಂಬುದು ಎನ್‌ಡಿಎ ಸರ್ಕಾರದ ನೀತಿ. ಜನರ ಭಾವನೆಗಳಿಗೆ ತಕ್ಕಂತೆ ದೇಶವನ್ನು ಹಳೇ ವಿಚಾರಗಳ ಆಧಾರದಲ್ಲಿ, ಹೊಸ ವೇಗದಲ್ಲಿ ಕೊಂಡೊಯ್ಯಲಾಗುವುದು ಎಂದರು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಭ್ಯರ್ಥಿ ಡಾ. ಎ. ಎಚ್. ಶಿವಯೋಗಿಸ್ವಾವು, ಮಾಜಿ ಸಂಸದ ಜಿ.ಎಸ್ ಬಸವರಾಜ್, ಮಾಜಿ ಶಾಸಕ ಬಿ.ಸಿ. ನಾಗೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ವೈ. ಎ. ನಾರಾಯಣಸ್ವಾಮಿ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.