ಭರವಸೆ ಬೆಳಕು ಸ್ಫೂರ್ತಿಗೆ ಪ್ರೇರಕ
ತುಮಕೂರು: ದುಃಖ ನಿವಾರಣೆಯ ಅರಿವಿನ ಮಾರ್ಗ ತೋರಿದ ಶಂಕರಪ್ಪನವರ ನಿಧನ ದುಃಖ ಮತ್ತು ನಷ್ಟ ಎಂದು ಭಾವಿಸಬಾರದು ಎಂದು ಚಿಂತಕ ಕೆ. ದೊರೈರಾಜು ಹೇಳಿದರು.
ಅವರು ನಗರದ ಐ.ಎಂ.ಎ. ಸಭಾಂಗಣದಲ್ಲಿ ಏರ್ಪಡಿಸಿದ್ದ ಬುದ್ಧಬಯಲಿನ ಪಯಣಿಗ-ಬುದ್ಧಮಾರ್ಗಿ ಕೆ.ಎಂ. ಶಂಕರಪ್ಪನವರ ನೆನಪಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ಪರಿಭಾಷೆಯಲ್ಲಿ ಬಳಸಿವ ಪದಗಳ ದಾರ್ಶನಿಕ, ವಿಜ್ಞಾನಿ, ತತ್ವಜ್ಞಾನಿ ಪದಗಳಿಗಿಂತ ಶಂಕರಪ್ಪನವರನ್ನು ಹಿರೀಕ ಎಂಬುದು ಹೆಚ್ಚು ಸರಿಯಾದದ್ದು. ಭಾರತೀಯ ಬದುಕಿನಲ್ಲಿ, ಚಿಂತನೆಯ ಧಾರೆಗಳಲ್ಲಿ ಹಿರೀಕ ಅನ್ನುವ ಪದ ಮಹತ್ವ ವಸ್ತುವಾಗಿದೆ. ಜೀವನಾನುಭವದ ನೆಲೆಯಲ್ಲಿ ಅರಿವಿನ ಬೆಳಕನ್ನು ತೋರಿಸಿದವರು, ಅಪಾರ ಜ್ಞಾನವನ್ನು ಹೊಂದಿದವರು, ಸಾಮಾನ್ಯರ ಜೊತೆ ಇದ್ದು, ಸಹಜವಾಗಿ ಬದುಕಿದವರು ಎಂದೂ ಅಸಾಮಾನ್ಯರಾಗಿ ಬೀಗಿದವರಲ್ಲ, ಅವರ ಆಲೋಚನೆಗಳು ಅತ್ಯುನ್ನತ ಆಧ್ಯಾತ್ಮಿಕ ನೆಲೆಯಲ್ಲಿ ಮೂಡಿದಂತಹವುದು ಎಂದು ಹೇಳಿದರು.ಅವರ ಬದುಕು-ಚಿಂತನೆಗಳು ನಮ್ಮಲ್ಲಿರುತ್ತದೆ. ಬದುಕಿನಲ್ಲಿ ಗೊಂದಲ, ಹತಾಸೆ ಮೂಡಿದಾಗ ಭರವಸೆ ಬೆಳಕನ್ನು ಚೈತನ್ಯ ಸ್ಫೂರ್ತಿಯನ್ನು ತುಂಬುತ್ತವೆ ಆ ಮೂಲಕ ಶಂಕರಪ್ಪನರು ನಮ್ಮೊಂದಿಗೆ ಇರಬೇಕು ಎಂದರು.
ಯುವ ಮನಸ್ಸುಗಳನ್ನು ಸರಳತೆಯ ಹಾದಿಯಲ್ಲಿ ಬುದ್ಧನನ್ನು ಕಾಣುವಂತೆ ಮಾಡಿದ್ದಾರೆ, ರೈತ-ದಲಿತ ಚಳುವಳಿಗಳ ಒಡನಾಡಿಯಾಗಿ ಇದ್ದಂತಹ ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದರು ಎಂದರು.ಶಂಕರಪ್ಪನವರ ಬಾಲ್ಯ ಗೆಳೆಯ ಪುಟ್ಟರಾಮಯ್ಯ ಮಾತನಾಡಿ ಶಂಕರಪ್ಪ ಯಾವುದೇ ವಿಷಯವನ್ನು ನಿರ್ಲಕ್ಷಿಸುತ್ತಿರಲಿಲ್ಲ. ಎಲ್ಲಾ ವಿಷಯಗಳನ್ನು ಪ್ರಭಾವಿಯಾಗಿ ಹೇಳುವ ಶಕ್ತಿಯಾಗಿದ್ದರು ಎಂದರು.ಡಾ. ರಂಗಸ್ವಾಮಿ ಹೆಚ್.ವಿ. ಮಾತನಾಡಿ ಬೌದ್ಧಧರ್ಮ ಯಾರ ಮೇಲು ಹೇರ ಬೇಕಾಗಿಲ್ಲ, ಬುದ್ದನ ವ್ಯಕ್ತಿತ್ವ ಅರ್ಥ ಮಾಡಿಕೊಂಡರೆ ಸಾಕು ಎಂದು ಶಂಕರಪ್ಪನವರು ಹೇಳುತ್ತಿದ್ದರು ಎಂದರು.ನರಸೀಯಪ್ಪ, ಕಂದೂರು ತಿಮ್ಮಯ್ಯ, ವಡ್ಡಗೆರೆನಾಗರಾಜಯ್ಯ, ಡಾ.ಬಸವರಾಜು, ಮಲ್ಲಿಕಾ.ಜಿ. ಡಾ. ಅರುಂಧತಿ, ಬಂದಕುಂಟೆ ನಾಗರಾಜಯ್ಯ, ವೈ.ಕೆ. ಬಾಲಕೃಷ್ಣಪ್ಪ, ಹೆಚ್.ವಿ. ಮಂಜುನಾಥ ಮುಂತಾದವರು ಮಾತನಾಡಿದರು.
ಮುಂಗಾರು ಪ್ರವೇಶ
ತುಮಕೂರು: ತುಮಕೂರು ನಗರಕ್ಕೆ ಮುಂಗಾರು ಪ್ರವೇಶವಾಗಿದೆ. ಕಳೆದ ಎರಡು ದಿವಸಗಳಿಂದ ನಗರದಲ್ಲಿ ಮಳೆ ಸುರಿಯುತ್ತಿದೆ. ಕಳೆದ ಹಲವಾರು ತಿಂಗಳಿನಿಂದ ಬಿಸಿಲಿನಿಂದ ಬಳಲಿದ್ದ ಜನತೆಗೆ ಮುಂಗಾರು ಪ್ರವೇಶ ತಂಪಿನ ಅನುಭವ ನೀಡಿದೆ. ತುಮಕೂರಿನ ಜೂನಿಯರ್ ಕಾಲೇಜು ಮೈದಾನ ಮಳೆಯಿಂದಾಗಿ ಕೆಸರು ಗದ್ದೆಯಾಗಿತ್ತು. ಅಲ್ಲದೇ ತುಮಕೂರಿನ ಕೆಲವು ಬಡಾವಣೆಗಳಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು. ಕೆಲವು ಕಡೆ ಮರಗಳು ಕೂಡ ಧರೆಗೆ ಉರುಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

