ತುಮಕೂರು

ಸಹಕಾರ ಸಂಘಗಳು ಬದುಕಿಗೆ ಆಸರೆಯಾಗಲಿ

Published On :

ಕನ್ನಡಪ್ರಭ ವಾರ್ತೆ, ತುಮಕೂರು, ಜೂ.15
ಸಹಕಾರ ಸಂಘಗಳು ಬಡವನ ಹಾಗು ರೈತನ ಆರ್ಥಿಕ ಬಡತನವನ್ನು ನೀಗಿಸಿ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಆಸರೆಯಾಗಬೇಕು ಎಂದು ಶಾಸಕ ಬಿ. ಸುರೇಶ್‌ಗೌಡ ಅಭಿಪ್ರಾಯಪಟ್ಟರು
ಅವರು ಬೆಳ್ಳಾವಿ ಗ್ರಾಮದಲ್ಲಿ ನಡೆದ ಬಸವ ಸೇವಾ ಪತ್ತಿನ ಸಹಕಾರ ಬ್ಯಾಂಕ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹೆಚ್ಚಿನದಾಗಿ ಸಹಾಕಾರಿ ಸಂಘಗಳು ಸ್ಥಾಪನೆಯಾಗಬೇಕು ಮತ್ತು ಬಡವನಿಗೆ ಹಾಗು ರೈತಾಪಿ ವರ್ಗಕ್ಕೆ ಕೈ ಗೆಟಕುವ ರೀತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಕಡಿಮೆ ಬಡ್ಡಿಯಲ್ಲಿ ಆರ್ಥಿಕ ಸಹಾಯ ನೀಡುವ ಮೂಲಕ ಸಹಕಾರಿ ಸಂಘಗಳು ರೈತರಿಗೆ ಸಹಕಾರಿಯಾಗಬೇಕು, ಎಂದು ಸುರೇಶ್ ಗೌಡರು, ಸಲಹೆ ನೀಡಿದರು. ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆಯಲು ಅನೇಕ ರೈತರು ಮಹಿಳೆಯರು ಮತ್ತು ಹಿಂದುಳಿದವರು ದಲಿತರು ಸಾಲ ಪಡೆದಷ್ಟೇ ಹಣವನ್ನು ಅವನ ಓಡಾಟ ಅಲೆದಾಟ ದಾಖಲಾತಿ ನಿರ್ಮಾಣಕ್ಕಾಗಿ ಸವೆಸಿ ಸೋತು ಸುಣ್ಣವಾಗಿರುವ ಉದಾಹರಣೆಗಳೇ ಹೆಚ್ಚಾಗಿವೆ ಎಂದರು.
ಇಂದು ರೈತರು ಬ್ಯಾಂಕಗಳ ಬಗ್ಗೆ ನಂಬಿಕೆಯನ್ನೇ ಕಳೆದುಕೊಂಡಿದ್ದಾನೆ. ರಾಷ್ಟ್ರೀಕೃತ ಬ್ಯಾಂಕಗಳ ಸಿಬ್ಬಂದಿಯ ಮನೋಭೂಮಿಕೆಯನ್ನು ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಸಡಿಲತೆಯನ್ನು ಮಾಡಿ ಆರ್‌ಟಿಜಿಎಸ್ ಮೂಲಕ ಎಲ್ಲ ವ್ಯವಹಾರವೂ ಬ್ಯಾಂಕುಗಳ ಮೂಲಕ ಆಗಬೇಕು ಎಂದು ಆದೇಶಿಸಿದೆ. ಆದರೂ ಬ್ಯಾಂಕಗಳಲ್ಲಿರುವ ಸಿಬ್ಬಂದಿ ಮನೋಭಾವದಿಂದ ಮತ್ತು ಉತ್ತಮ ಸಂವಹನ ಇಲ್ಲದೆ ಬಡವರಿಗೆ ರೈತರಿಗೆ ಮಹಿಳೆಯರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಯಾರೋ ಉಳ್ಳವರ ಮತ್ತು ಮಧ್ಯವರ್ತಿಗಳ ಪಾಲಾಗುತ್ತಿವೆ. ಈ ನಿಟ್ಟಿನಲ್ಲಿ ರೈತರಿಂದ ಷೇರು ಪಡೆದು ರಚನೆಯಾಗಿರುವ ಸಹಾಕಾರಿ ಸಂಘಗಳ ಅವಶ್ಯಕತೆ ಹೆಚ್ಚಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಖಾರದ ಮಠದ ಸ್ವಾಮಿಗಳು, ಕೆಂಎಂಫ್ ನಿರ್ದೇಶಕ ಹಾಲನೂರು ಬಾಬು, ಬ್ಯಾಂಕ್ ಅಧ್ಯಕ್ಷ ಸಿ.ವಿ. ರವೀಶ್, ಬಿಜೆಪಿ ಮುಖಂಡ ರವಿಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.