ಐಪಿಎಸ್ ಸ್ಕೂಲ್: ಶೇ.99 ಮತದಾನ
ತುರುವೇಕೆರೆ: ಇಲ್ಲಿನ ಇಂಡಿಯನ್ ಪಬ್ಲಿಕ್ ಶಾಲೆಯ ಒಂದರಿಂದ 7 ನೇ ತರಗತಿಯ ವಿದ್ಯಾರ್ಥಿಗಳು ಶೇ.99 ಮತ ಚಲಾಯಿಸಿದ್ದಾರೆ. ಶಾಲೆಯ 250 ವಿದ್ಯಾರ್ಥಿಗಳ ಪೈಕಿ 228 ಮಂದಿ ಮತ ಚಲಾಯಿಸಿದ್ದರು. 22 ಮಂದಿ ತರಗತಿಗೆ ಗೈರು ಹಾಜರಾಗಿದ್ದರು. 228 ವಿದ್ಯಾರ್ಥಿಗಳ ಪೈಕಿ ಕೇವಲ 3 ವಿದ್ಯಾರ್ಥಿಗಳು ಚಲಾಯಿಸಿದ ಮತ ತಿರಸ್ಕೃತಗೊಂಡಿದೆ. ಈ ಶಾಲೆ ಮಕ್ಕಳಿಗೆ ಮಾದರಿ ಚುನಾವಣೆಯನ್ನು ನಡೆಸಿತ್ತು. ಮತದಾನ ಮಾಡುವ ಪರಿ ಹೇಗೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಗಿತ್ತು. ಚುನಾವಣೆಯಲ್ಲಿ ಮತದಾನ ಮಾಡಿದ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖಂಡ, ಸಾಂಸ್ಕೃತಿಕ ಕ್ಷೇತ್ರ, ಕ್ರೀಡಾ ಕ್ಷೇತ್ರಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು.
ಜನಪರ ದನಿ ಮೊಳಗಿಸಲು ಸಿಪಿಎಂ ಬೆಂಬಲಿಸಿ
ತುಮಕೂರು: ಐದು ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದ ಅಖಾಡಕ್ಕೆ ಸಿಪಿಐ (ಎಂ) ಸಹ ಧುಮುಕಿದೆ. ವಿಧಾನಪರಿಷತ್ನಲ್ಲಿ ಜನಪರ ಧನಿ ಮೊಳಗಿಸಲು, ಪದವೀಧರರ, ಶಿಕ್ಷಕರ ಸಮಸ್ಯೆಗೆ ಧನಿಯಾಗಲು ಅವಕಾಶ ಕಲ್ಪಿಸುವಂತೆ ಸಿಪಿಐ(ಎಂ) ಅಭ್ಯರ್ಥಿ ಪಯಾಜುಲ್ಲುಖಾನ್ ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.
ಅಭಿವೃದ್ಧಿ: ಸಿಪಿಐ(ಎಂ) ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ, ನಿರುದ್ಯೋಗ ಸಮಸ್ಯೆಯ ವಿರುದ್ಧ ಹಾಗೂ ದೇಶದ ಐಕ್ಯತೆ, ಸಮಗ್ರತೆಗಾಗಿ ನಿರಂತರ ಹೋರಾಟ ಮಾಡುತ್ತಲೇ ಬಂದಿದೆ. ಸರ್ವರಿಗೂ ಶಿಕ್ಷಣ ಮತ್ತು ಸರ್ವರಿಗೂ ಉದ್ಯೋಗಕ್ಕಾಗಿ ನಿರಂತರವಾಗಿ ಯುವ ಜನತೆಯನ್ನು ಸಂಘಟಿಸುತ್ತಾ, ಹೋರಾಟ ಮಾಡುತ್ತಾ ಬಂದಿದೆ. ರಾಜ್ಯದಲ್ಲಿ ಲಕ್ಷಾಂತರ ಪದವೀಧರರು ನಿರುದ್ಯೋಗಿಗಳಾಗಿ ಬದುಕುತ್ತಿದ್ದಾರೆ. ಸರ್ಕಾರಗಳು ಪದವೀಧರರ ಬದುಕಿಗಾಗಿ ಹಾಗೂ ಪದವೀಧರರನ್ನು ರಾಜ್ಯದ ಅಭಿವೃದ್ಧಿಯಲ್ಲಿ ತೊಡಗಿಸಲು ವಿಫಲವಾಗಿವೆ. ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಅಭದ್ರತೆಯಲ್ಲಿ ತೊಡಗಿದ್ದಾರೆ. ಶಿಕ್ಷಕರ ಸಮಸ್ಯೆಗಳು, ಉಪನ್ಯಾಸಕರ, ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಪದವೀಧರರ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುತ್ತಿವೆ. ಆದರೆ ಮತ ಪಡೆದು, ಗೆದ್ದು ಹೋಗಿರುವ ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿರುವುದು ಖಂಡನೀಯ ಎಂದಿದ್ದಾರೆ.
ಸಮಸ್ಯೆ: ಜಾಗತೀಕರಣ, ಖಾಸಗೀಕರಣ ನೀತಿಗಳನ್ನು ಪ್ರತಿಪಾದಿಸುವ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಿಂದ ಪದವೀಧರರ, ಶಿಕ್ಷಕರ, ಇತರೆ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ, ವಿಶೇಷವಾಗಿ ವಿಧಾನಪರಿಷತ್ನಲ್ಲಿ ಪರ್ಯಾಯ ಧನಿ ಮೊಳಗಿಸಲು ಸಿಪಿಐ(ಎಂ)ಗೆ ಬೆಂಬಲಿಸುವಂತೆ ಪಯಾಜುಲ್ಲಾಖಾನ್ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ. ಉಮೇಶ್, ಸಿಐಟಿಯುನ ಎನ್.ಕೆ. ಸುಬ್ರಹ್ಮಣ್ಯ, ಡಿವೈಎಫ್ಐನ ಜಿಲ್ಲಾ ಘಟಕದ ಮುಖ್ಯಸ್ಥ ರಾಘವೈಂದ್ರ, ಎಸ್ಎಫ್ಐ ನ ಶಿವಣ್ಣ ಇತರರು ಉಪಸ್ಥಿತರಿದ್ದರು.
ನಾಳೆ ಉರ್ಸ್ ಸಮಾರಂಭ, ಖವ್ವಾಲಿ
ತುಮಕೂರು: ಸರ್ವಧರ್ಮ ಭಾವೈಕ್ಯತೆಯ ಪ್ರತೀಕವಾದ ನಗರದ ಶಿರಾಗೇಟ್ನ ಸತ್ಯಮಂಗಲ ರಸ್ತೆಯಲ್ಲಿರುವ ದರ್ಗಾ ಷರೀಪ್ನಲ್ಲಿ ಹಜರತ್ ಸೈಯದ್ ಹುಸೇನಿ ಭಾಷಖಾದ್ರಿ ಅವರ ಗಂಧ ಹಾಗೂ ಉರ್ಸ್ ಸಮಾರಂಭ ಜೂನ್ 19 ರಂದು ಸಂಜೆ 7ಕ್ಕೆ ನಡೆಯಲಿದೆ. ಅಂದು ರಾತ್ರಿ 9 ಗಂಟೆಗೆ ಜಿದ್ದಾಜಿದ್ದಿ ಖವ್ವಾಲಿ ಕಾರ್ಯಕ್ರಮ ನಡೆಯಲಿದೆ. ಹಿಂದು ಮುಸ್ಲಿಮರಾದಿಯಾಗಿ ಸರ್ವಜನಾಂಗದವರೂ ತುಂಬಾ ಶ್ರದ್ಧಾ ಭಕ್ತಿಗಳಿಂದ ಭಾಗವಹಿಸುತ್ತಾರೆ. ಸದ್ಭಕ್ತರು ಸಮಯಕ್ಕೆ ಸರಿಯಾಗಿ ಭಾಗವಹಿಸಬೇಕೆಂದು ಮಸ್ಜಿದ್-ಎ-ಮೋಜ್ಜಮ್ ಕಮಿಟಿಯವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇಸ್ತಿಯಾಕ್ ಅಹಮದ್ 9141409988 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

