ತುಮಕೂರು

ಕೆಬಿಸಿ ವಿರೋಧ

Published On :

ಕ.ಪ್ರ.ವಾರ್ತೆ ಟಿ ತುಮಕೂರು ಟಿ ಜೂ.17
ವೃತ್ತಿ ರಾಜಕಾರಣಿಗಳನ್ನು ವಿಧಾನಪರಿಷತ್‌ಗೆ ನಾಮಕರಣ ಮಾಡಲು ಹೊರಟಿರುವುದು ಆಘಾತಕಾರಿ ವಿಷಯ. ಅಷ್ಟೇ ಅಲ್ಲ. ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಸಾಹಿತಿ ಕೆ.ಬಿ. ಸಿದ್ದಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳ ಪ್ರತಿಭಾವಂತರಿಗೆ, ಪ್ರಜಾಪ್ರಭುತ್ವದ ಹಿತ ಕಾಯುವ ಮಂದಿಗೆಂದೇ ವಿಧಾನಪರಿಷತ್‌ನಲ್ಲಿ ನಾಮಕರಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಸರ್ಕಾರ ವೃತ್ತಿ ರಾಜಕಾರಣಿಗಳಿಗೆ ಮಣೆ ಹಾಕಲು ಹೊರಟಿರುವುದು ಸರಿಯಲ್ಲ ಎಂದಿದ್ದಾರೆ. ಇದಕ್ಕೆ ರಾಜ್ಯಪಾಲರು ಅವಕಾಶ ಕೊಡಬಾರದು ಎಂದಿದ್ದಾರೆ.
ಉಲ್ಲಂಘನೆ: ಹಾಲಿ ಸಲ್ಲಿಕೆಯಾಗಿದೆ ಎಂದು ಹೇಳಲಾಗುತ್ತಿರುವ ವೃತ್ತಿ ರಾಜಕಾರಣಿಗಳ ಪಟ್ಟಿಯಲ್ಲೂ ಬ್ರಾಹ್ಮಣ, ದಲಿತರ ಹೆಸರಿಲ್ಲ. ಇಲ್ಲೂ ಸಾಮಾಜಿಕ ನ್ಯಾಯ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ, ವಿಧಾನಪರಿಷತ್ ಮೂಲಕ ಹಿಂಬಾಗಿಲ ಪ್ರವೇಶ ಪಡೆಯುವುದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಂತವರಿಗೆ ಶೋಭೆ ತರುವಂತದ್ದಲ್ಲ ಎಂದಿದ್ದಾರೆ.
ಘನತೆ: ಪರಮೇಶ್ವರ್ ವಿಧಾನಸಭೆಗೆ ಫೈಟ್ ಮಾಡಿ ಆಯ್ಕೆಯಾಗಬೇಕಿತ್ತು. ಇದು ನಿಜವಾದ ಜನ ನಾಯಕನ ಗುಣ ಕೂಡ. ಆದರೆ ಪರಮೇಶ್ವರ್‌ಗೆ ದೊಡ್ಡ ರಾಜಕಾರಣ ಮಾಡುವ ಘನತೆಯಿಲ್ಲ ಅನ್ನೋದು ತಮ್ಮ ಅಭಿಪ್ರಾಯ ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಲೇಖಕಿಯರಾದ ಅನ್ನಪೂರ್ಣ ವೆಂಕಟನಂಜಪ್ಪ, ಸಿ.ಎನ್. ಸುಗುಣಾದೇವಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಹಿರಿಯ ಮುಖಂಡ ಕುಂದೂರು ತಿಮ್ಮಯ್ಯ,  ಸಾಮಾಜಿಕ ಹೋರಾಟಗಾರರಾದ ವಿರೂಪಾಕ್ಷ, ಕೊಟ್ಟ ಶಂಕರ್, ಇತರರು ಉಪಸ್ಥಿತರಿದ್ದರು.
ಸಿಎನ್‌ಆರ್ ರಾವ್, ತಮ್ಮನ್ನು ನಾಮ ನಿರ್ದೇಶನ ಮಾಡಲಿ
ತುಮಕೂರು: ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನೋಡುವುದಾದರೆ ಮೇಲ್ಮನೆಗೆ ದೇಶದ ಖ್ಯಾತ ವಿಜ್ಞಾನಿ, ಭಾರತ ರತ್ನ ಸಿ.ಎನ್.ಆರ್. ರಾವ್ ಅವರನ್ನು ಮೇಲ್ಮನೆ ವಿಧಾನಪರಿಷತ್‌ಗೆ ಕಾಂಗ್ರೆಸ್ ಸರ್ಕಾರ ನಾಮ ನಿರ್ದೇಶನ ಮಾಡಬೇಕು. ಅವರ ಜತೆ ಪರಿಶಿಷ್ಟ ಜಾತಿಯಲ್ಲಿ ಎಡಗೈ ಪಂಗಡ ಮಾದಿಗ ಜಾತಿಗೆ ಸೇರಿರುವ ತಮನ್ನು ವಿಧಾನಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕು. ಈ ನಾಮನಿರ್ದೇಶನ ಆಕಾಂಕ್ಷಿಗಳಲ್ಲಿ ತಾವೂ ಒಬ್ಬರಾಗಿದ್ದು, ಈವರೆಗೆ ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಜನಾಂಗವನ್ನು ಕಡೆಗಣಿಸುತ್ತಲೇ ಬರಲಾಗಿರುವುದು ರಾಜ್ಯ ರಾಜಕಾರಣದ ಇತಿಹಾಸಲ್ಲಿ ದಾಖಲಾಗಿದೆ. ಈಗಾಗಲೇ ಬಲಗೈ ಪಂಗಡ ಅಂದರೆ ಪರಿಶಿಷ್ಟರಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಹೊಲೆಯರ ಜಾತಿಗೆ ಸೇರಿದ ಕೋಟಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ಗೆ ವಿಧಾನಸಭೆ ಮೂಲಕ ವಿಧಾನಪರಿಷತ್‌ಗೆ ಪ್ರವೇಶಿಸಿದ್ದಾರೆ. ಎಡಗೈ ಪಂಗಡಕ್ಕೆ ತಮ್ಮ ಮೂಲಕ ವಿಧಾನಪರಿಷತ್ ನಲ್ಲಿ ನಾಮನಿರ್ದೇಶನದ ಮೂಲಕ ಪ್ರಾತಿನಿಧ್ಯ ದೊರಕಿಸಿಕೊಡಲಿ ಎಂದು ಕೆ.ಬಿ. ಸಿದ್ದಯ್ಯ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.