ತುಮಕೂರು

ತಾಲೂಕು ಕಚೇರಿಯಲ್ಲಿ ಮತ ಕೇಂದ್ರ ಸ್ಥಾಪನೆ

Published On :

ಚಿಕ್ಕನಾಯಕನಹಳ್ಳಿ: ಜೂನ್ 20ರಂದು ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತಗಟ್ಟೆಯನ್ನು ತಾಲೂಕು ಕಚೇರಿಯಲ್ಲಿ ಸ್ಥಾಪಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹಳಿಕೆ ನೀಡಿರುವ ಅವರು ಜೂ. 20ರಂದು ಬೆಳಿಗ್ಗೆ 8ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ತಾಲೂಕಿಗೆ ಸಂಬಂಧಿಸಿದಂತೆ 2 ಮತಗಟ್ಟೆಗಳನ್ನು ತಾಲೂಕು ಕ ಚೇರಿ ಸಿಬ್ಬಂದಿ ಹಾಲ್‌ನಲ್ಲಿ ಮತಗಟ್ಟೆ ನಂಬರ್ 56 ಹಾಗೂ ತಹಸೀಲ್ದಾರ್ ಕೋರ್ಟ್ ಹಾಲ್‌ನಲ್ಲಿ ಮತಗಟ್ಟೆ ನಂಬರ್ 57ನ್ನು ಸ್ಥಾಪಿಸಲಾಗಿದೆ. ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವ ಮತದಾರರು ಮೇಲ್ಕಂಡ ದಿನಾಂಕದಂದು ತಪ್ಪದೇ ಮತ ಚಲಾಯಿಸಲು ಹಾಗೂ ಮತದಾರರು ತಮ್ಮ ಮತವನ್ನು ಮತಪತ್ರದಲ್ಲಿ ಒಂದಕ್ಕಿತ ಹೆಚ್ಚು ಮತ ಚಲಾಯಿಸಲಿಚ್ಚಿಸಿದಲ್ಲಿ  ಪ್ರತಿಯೊಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಆಧ್ಯತಾನುಸಾರ ಮತ ಚಲಾಯಿಸಬಹುದಾಗಿರುತ್ತದೆ. ಸದರಿ ಮತಪತ್ರದಲ್ಲಿ ಟ್ಟಿಡಿಛ ಕಾಲಂ ಮುಂದೆ(್ಢ) ಅಥವಾ  ರೈಟ್‌ಮಾರ್ಕ್ ನಮೂದು ಮಾಡಬಹುದಾಗಿರುತ್ತದೆ.
ಉದಾಹರಣೆಗೆ 1, 2, 3 ಅಥವಾ ಕನ್ನಡ ಅಂಕಿಗಳನ್ನಾದರೂ ಬಳಸಬಹುದು. ಈ ನಮೂನೆಗಳನ್ನು ಮತಗಟ್ಟೆಯಲ್ಲಿ ನೀಡುವ ನೇರಳೆ ಬಣ್ಣದ ಸ್ಕೆಚ್‌ಪೆನ್ನಿಂದ ಗುರುತು ಮಾಡುವುದು. ಇದನ್ನು ಹೊರತುಪಡಿಸಿ ಆದ್ಯತೆಗಳನ್ನು ಪದಗಳಲ್ಲಿ ಅಥವಾ ಬೇರೆ ಪೆನ್ನುಗಳಲ್ಲಿ ನಮೂದು ಮಾಡಿದಲ್ಲಿ ಮತಪತ್ರ ತಿರಸ್ಕೃತವಾಗುತ್ತದೆ. ಮತ ಚಲಾಯಿಸಲು 13ದಾಖಲೆಗಳಲ್ಲಿ ಯಾವುದಾದರೊಂದು ದಾಖಲೆಯನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.