ಅಧಿಕಾರಿಗಳೇ ಇಲ್ಲ ಕೆಲಸ ಹೇಗೆ ಮಾಡೋದು?
ತುರುವೇಕೆರೆ: ಸಾರ್ ನಮ್ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಓ ಇಲ್ಲ, ಕಾರ್ಯದರ್ಶಿ ಇಲ್ಲ. ಇಓಗೆ ಹೇಳಿ ಹೇಳಿ ಸಾಕಾಗಿ ಹೋಗಿದೆ. ಇವತ್ತು ಕಳಿಸ್ತೀನಿ, ನಾಳೆ ಕಳಿಸ್ತೀನಿ ಅಂತ ಹೇಳ್ತಾರೆ. ಕಳೆದ ಆರೇಳು ತಿಂಗಳಿಂದ ನಮ್ಮ ಸ್ಥಿತಿ ಹೇಳತೀರದಾಗಿದೆ. ಯಾವೊಬ್ಬ ಅಧಿಕಾರಿಗಳೂ ಬರುತ್ತಿಲ್ಲ. ಕೆಲಸ ಮಾಡಿಸಿಕೊಳ್ಳಿ ಎಂದರೆ ಅದು ಹೇಗೆ ಆಗುತ್ತೆ ಸಾರ್...
ಹೀಗೆ ತಮ್ಮ ಗ್ರಾಮ ಪಂಚಾಯ್ತಿಯ ಸರ್ಕಾರಿ ಅಧಿಕಾರಿಗಳ ಗೈರು ಹಾಜರಿಯ ಬಗ್ಗೆ ಸ್ವತಃ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹರೀಶ್ ತಮ್ಮ ಅಸಹಾಯಕತೆಯನ್ನು ಜಿಲ್ಲಾಧಿಕಾರಿ ಡಿ.ಸತ್ಯಮೂರ್ತಿಯವರ ಎದುರು ತೋಡಿಕೊಂಡರು. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸರಿಯಾಗಿ ಬರುತ್ತಿಲ್ಲ. ಜನರ ಕೆಲಸಗಳು ಸಾಲು ಸಾಲಾಗಿ ಇವೆ. ಸಂಬಂಧಿಸಿದ ಕಡತಗಳು ಅವರ ಬಳಿಯೇ ಇವೆ. ಅಧಿಕಾರಿಗಳು ಯಾವಾಗ ಬರುತ್ತಾರೋ ಬಿಡುತ್ತಾರೋ ಆ ದೇವರಿಗೇ ಗೊತ್ತು. ಇದು ಹೋಬಳಿ ಕೇಂದ್ರವೂ ಆಗಿದೆ. ಆದ್ದರಿಂದ ಪರ್ಮನೆಂಟ್ ಆಗಿ ಇರೋ ಪಿಡಿಓ ಹಾಗೂ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಡಿ ಸಾರ್ ಪ್ಲೀಸ್ ಅಂತ ಹರೀಶ್ ಜಿಲ್ಲಾಧಿಕಾರಿಗಳನ್ನು ವಿನಂತಿಸಿಕೊಂಡರು. ಹರೀಶ್ ಅವರ ಅಹವಾಲನ್ನು ಬಹಳ ಗಂಭೀರವಾಗಿ ಗಮನಿಸಿದ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯ್ತಿಯಿ ಮುಖ್ಯ ಕಾರ್ಯದರ್ಶಿಗಳ ಬಳಿ ವಿಷಯ ಪ್ರಸ್ತಾಪಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

