ರಂಗನಕೆರೆ ಗ್ರಾಮಕ್ಕೆ ವೈದ್ಯಾಧಿಕಾರಿ ಭೇಟಿ
ಹುಳಿಯಾರು: ಕಳೆದ 15 ದಿನಗಳಿಂದ ಚಿಕುನ್ ಗುನ್ಯಾ ಶಂಕೆಯಿಂದ ನರಳುತ್ತಿದ್ದ ಹೋಬಳಿಯ ರಂಗನಕೆರೆ ಗ್ರಾಮಕ್ಕೆ ಆರೋಗ್ಯ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಚಿಕುನ್ ಗುನ್ಯಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಚರಿಸಿ 25ಕ್ಕೂ ಹೆಚ್ಚು ಮಂದಿಗೆ ಮಂಡಿ ನೋವು, ಕೀಲು ನೋವು ಕಾಣಿಸಿಕೊಂಡಿದ್ದ ರೋಗಪೀಡಿತರನ್ನು ಪರೀಕ್ಷಿಸಿದ ನಂತರ ಇಬ್ಬರಿಗೆ ಚಿಕುನ್ಗುನ್ಯಾ ದೃಢಪಟ್ಟಿದೆ. ಗ್ರಾಮದಲ್ಲಿ ಸ್ವಚ್ಛತೆಯಿದ್ದು ಕುಡಿಯುವ ನೀರಿನ ಸಿಸ್ಟನ್ ಆಗಾಗ ಬ್ಲಿಚಿಂಗ್ ಪೌಡರ್ ಹಾಕಿ ಸ್ವಚ್ಛಗೊಳಿಸದ ಕಾರಣ ರೋಗ ಕಾಣಿಸಿಕೊಂಡಿರಬಹುದು. ಈ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ನೀರಿನ ಮಾದರಿ ಪರೀಕ್ಷೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಕಳೆದೊಂದು ವಾರದಿಂದ ಜ್ವರದಿಂದ ನರಳುತ್ತಿರುವ ಸಿಂಚನ ಎಂಬ ಐದು ವರ್ಷದ ಬಾಲಕಿಯ ರಕ್ತ ಪರೀಕ್ಷೆಗೆ ಕಳುಹಿಸಲಾಗಿದ್ದು ಸೋಮವಾರದಿಂದ ಗ್ರಾಮಕ್ಕೆ ಒಬ್ಬರು ವೈದ್ಯರನ್ನು ಕಳುಹಿಸುವ ಮೂಲಕ ಬಾಧಿತರಿಗೆ ಚಿಕಿತ್ಸೆ ನೀಡಲಾಗುವುದು. ಶನಿವಾರವಷ್ಟೇ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಹಾಗೂ ಶಾಸಕ ಸಿ.ಬಿ.ಸುರೇಶ್ ಬಾಬು ಉಪಸ್ಥಿತಿಯಲ್ಲಿ ನಡೆದ ಆರೋಗ್ಯ ಸಭೆಯಲ್ಲಿ ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ವೈದ್ಯರ ನೇಮಕದ ಬಗ್ಗೆ ಚರ್ಚಿಸಲಾಗಿದ್ದು ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದರು.
-
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

