ತುಮಕೂರು

ನರೇಂದ್ರ ಮೋದಿ ಜನಪ್ರಿಯತೆಗೆ ಕಾಂಗ್ರೆಸ್ ತತ್ತರ

Published On :

ಕುಣಿಗಲ್: ಲೋಕಸಭೆ ಚುನಾವಣೆ  ಘೋಷಣೆಯ ಮುನ್ನವೆ ನರೇಂದ್ರ ಮೋದಿ ಜನಪ್ರಿಯತೆಗೆ ತತ್ತರಿಸಿ ಹೋಗಿರುವ ಕಾಂಗ್ರೆಸ್ ಮುಖಂಡರು, ನಮೋ ಬಗ್ಗೆ ಅಶ್ಲೀಲ ಹೇಳಿಕೆಗಳನ್ನು ನೀಡುತ್ತಾ ತಮ್ಮ ಹತಾಶ ಮನೋಭಾವ ವ್ಯಕ್ತಪಡಿಸುತ್ತಿದ್ದಾರೆಂದು ಬೆಂ.ಗ್ರಾ.ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಮುನಿರಾಜು ಗೌಡ ತಿಳಿಸಿದರು. ಬುಧವಾರ, ಪಟ್ಟಣದ ನಮೋ ಅಭಿಮಾನಿಗಳು ವಾರದ ಸಂತೆ ಪ್ರಯುಕ್ತ ಗ್ರಾಮಾಂತರ ಪ್ರದೇಶದ ಜನತೆಗೆ ನರೇಂದ್ರ ಮೋದಿಯವರ ಬಗ್ಗೆ ಪ್ರಚಾರ ಮಾಡಲು ನಮೋ ಟೀ ಸ್ಟಾಲ್ ಪ್ರಾರಂಭಿಸಿದ್ದು, ಟೀಸ್ಟಾಲ್‌ಗೆ  ಭೇಟಿ ನೀಡಿ, ಜನತೆಗೆ ಚಹಾ ವಿತರಿಸಿ ಮಾತನಾಡಿದ ಅವರು, ಐದು ದಶಕಗಳ ದೇಶವನ್ನಾಳಿದ ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ಶ್ರಮಿಸದ ಕೇವಲ ಸ್ವಾರ್ಥಪರ ಸಾಧನೆಯಿಂದ ದೇಶವನ್ನು ಅಧೋಗತಿಗೆ ತಂದಿದೆ. ಅಧಿಕಾರದಲ್ಲಿರುವಾಗಲೂ ಹಲವು ಹಗರಣಗಳಲ್ಲಿ ಮುಳುಗೇಳುತ್ತಾ, ರಾಷ್ಟ್ರದ ಜನತೆಗೆ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುವಂತೆ ಮಾಡಿರುವುದೇ ಕಾಂಗ್ರೆಸ್ ಸಾಧನೆಯಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.