ತುಮಕೂರು

ಸಹಕಾರ ಕಾಯ್ದೆ ಸರಳೀಕೃತ: ವೀರೇಶ್

Published On :

ತುಮಕೂರು: ಸಹಕಾರ ಕಾಯ್ದೆಯನ್ನು ಸರಳೀಕೃತಗೊಳಿಸಿ ಸಹಕಾರ ಸಂಘಗಳಿಗೆ ಹೆಚ್ಚಿನ ಅನುಕೂಲ ದೊರಕಿಸಲಾಗಿದೆ ಎಂದು ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಹಕಾರ ಸಂಘಗಳ ಅಪರ ನಿಬಂಧಕ ಸಿ.ಎಸ್. ವೀರೇಶ್ ತಿಳಿಸಿದರು.
ತುಮಕೂರು ಜಿಲ್ಲೆಯ ಪತ್ತಿನ ಸಹಕಾರ ಸಂಘಗಳು, ಗೃಹ ನಿರ್ಮಾಣ ಸಹಕಾರ ಸಂಘಗಳು ಹಾಗೂ ಬಳಕೆದಾರರ ವಿವಿದೋದ್ದೇಶ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಇದರಿಂದ ಸಹಕಾರಿಗಳಿಗೆ ಹೆಚ್ಚಿನ ಹಕ್ಕು ಕೊಟ್ಟು ಜವಾಬ್ದಾರಿ ವಹಿಸಿದೆ. ಹಕ್ಕು ಜವಾಬ್ದಾರಿಗಳನ್ನು ಇಂತಹ ತರಬೇತಿಗಳಿಂದ ಪಡೆದು ಜ್ಞಾನ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎನ್. ಗಂಗಣ್ಣ ಮಾತನಾಡಿ ಸಹಕಾರ ಸಂಘಗಳಲ್ಲಿ ಕಾಲಕಾಲಕ್ಕೆ ಆಗಬೇಕಾದ ಕೆಲಸ ಕಾರ್ಯಗಳನ್ನು ಆಯಾ ಸಮಯದಲ್ಲಿ ಚಾಚು ತಪ್ಪದೆ ನಿರ್ವಹಿಸಿ, ಸಹಕಾರ ಕ್ಷೇತ್ರವನ್ನು ಇನ್ನೂ ಬೃಹದಾಕಾರವಾಗಿ ಬೆಳಸಿ, ದೀನ ದಲಿತರ ಅಭಿವೃದ್ಧಿಗೆ ಶ್ರಮಿಸುವಂತೆಯೂ, ಇಂತಹ ತರಬೇತಿಗಳಿಂದ ಕಾರ್ಯದರ್ಶಿಗಳು ತಮ್ಮ ಕಾರ್ಯದಕ್ಷತೆಯನ್ನು  ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು.
ಮುಥ್ಯ ಅತಿಥಿ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಜಿ. ವೆಂಕಟೇಗೌಡರು ಮಾತನಾಡಿ ಸಹಕಾರ ಕ್ಷೇತ್ರ ಮಧ್ಯಮ ವರ್ಗದ ಹಾಗೂ ದೀನದಲಿತರ ಕ್ಷೇತ್ರವಾಗಿದೆ. ಸಮಾಜದ ಎಲ್ಲಾ ಸ್ಥರಗಳಲ್ಲಿಯೂ ತನ್ನ ಛಾಪು ಮೂಡಿಸಿ, ಬಡವರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಈ ಕ್ಷೇತ್ರವನ್ನು ಇನ್ನೂ ಉತ್ತಮವಾಗಿ ಬೆಳೆಸಬೇಕೆಂದು ನುಡಿದರು.
ಸಹಕಾರ ಸಂಘಗಳ ಉಪನಿಬಂಧಕ ಜಿ. ಪ್ರಕಾಶ್, ಸಹಕಾರ ಕ್ಷೇತ್ರದ ಶಕ್ತಿ ಆಯಾ ಸಹಕಾರ ಸಂಘಗಳ ಸಹಕಾರಿಗಳೇ ಎಂದು ತಿಳಿಸಿ, ತರಬೇತಿಯ ಯಶಸ್ಸಿನ ಬಗ್ಗೆ ಶುಭ ಹಾರೈಸಿದರು.
ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷೆ ಟಿ.ಎನ್. ಆಶಾಕಿರಣ್,  ನಿರ್ದೇಶಕ ಎಸ್. ರಾಮಚಂದ್ರಯ್ಯ, ಟಿ.ಆರ್. ಸುರೇಶ್, ಎಚ್.ಜಿ. ಲಿಂಗಯ್ಯ, ಜಿ.ಡಿ.ಸುರೇಶ್‌ಗೌಡ, ಟಿ.ಎಸ್. ಪಂಚಾಕ್ಷರಿ, ವಿ.ಪಿ. ಕಾಂತರಾಜು,  ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಎಂ. ರಾಮಯ್ಯ, ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಎಂ.ವಿ. ರಾಮಚಂದ್ರಪ್ಪ, ರಾಜ್ಯ ಸಹಕಾರ ಮಹಾಮಂಡಳದ ಸಹಾಯಕ ಸಹಕಾರ ಶಿಕ್ಷಣಾಧಿಕಾರಿ ಜಿ.ಬಿ. ರಂಗಸ್ವಾಮಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ವಿಷಯ ತಜ್ಞರಾಗಿ ಬೆಂಗಳೂರಿನ ನಿವೃತ್ತ ಅಪರ ನಿಬಂಧಕ ಶಶಿಧರ ಎಲೆ ಅವರು, ಇತ್ತೀಚಿನ ಸಹಕಾರಿ ಕಾಯ್ದೆ, ಕಾನೂನುಗಳ ತಿದ್ದುಪಡಿಯ ಮುಖ್ಯಾಂಶಗಳು ಹಾಗೂ ಸಾಲ ವಸೂಲಾತಿಯ ಕ್ರಮಗಳ ಬಗ್ಗೆಯೂ, ಬೆಂಗಳೂರು ಆರ್.ಐ.ಸಿ.ಎಂ.ನ  ನಿವೃತ್ತ ಪ್ರಾದೇಶಿಕ ನಿರ್ದೇಶಕ ಡಾ. ಎಸ್.ಎ. ಸಿದ್ಧಾಂತಿ ಸಹಕಾರ ಸಂಘಗಳ ಆಡಳಿತ ನಿರ್ವಹಣೆ ಬಗ್ಗೆಯೂ ಹಾಗೂ  ಬೆಂಗಳೂರಿನ  ಚಾರ್ಟೆಡ್ ಅಕೌಂಟೆಂಟ್ ಡಿ.ಆರ್. ವೆಂಕಟೇಶ್ ರವರು ಸಹಕಾರ ಸಂಘಗಳಿಗೆ ಅನ್ವಯವಾಗುವ ಇತ್ತೀಚಿನ ಆದಾಯ ತೆರಿಗೆಗಳು ಹಾಗೂ ಲೆಕ್ಕಪತ್ರ ನಿರ್ವಹಣೆಯ ಬಗ್ಗೆ ಉಪನ್ಯಾಸ ನೀಡಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್. ರಾಮಚಂದ್ರಯ್ಯ ಸ್ವಾಗತಿಸಿದರು.  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಸಿದ್ದಪ್ಪಶೆಟ್ಟಿ ಕಾರ್ಯಕ್ರಮದ ಉದ್ದೇಶ ತಿಳಿಸಿ ನಿರೂಪಿಸಿದರು. ಯೂನಿಯನ್ ಉಪಾಧ್ಯಕ್ಷೆ ಟಿ.ಎನ್. ಆಶಾಕಿರಣ್ ವಂದಿಸಿದರು. ಜಿ. ಲೀಲಾ ಪ್ರಾರ್ಥಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.