ತುಮಕೂರು

ಪಠ್ಯೇತರ ಚಟುವಟಿಕೆ ಸಮಾಜಮುಖಿಯಾಗಲಿ

Published On :

ಮಧುಗಿರಿ: ಪಠ್ಯೇತರ ಚಟುವಟಿಕೆ ಸಮಾಜ ಮುಖಿಯಾಗಲಿ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ನುಡಿದರು.
ಮಧುಗಿರಿ ಟಿ.ವಿ.ವಿ.ಕಾಲೇಜು ವತಿಯಿಂದ ಕಸಬಾ ಬಿಜವರ ಗ್ರಾಮದ ಶ್ರೀವೀರಭದ್ರಸ್ವಾಮಿ ದೇವಸ್ಥಾನದ ಆವರಣದ ಸುತ್ತ ಮುತ್ತ  ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯದಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರದ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಹೃದಯಗಳು ಹಳ್ಳಿಗಳಲ್ಲಿದೆ. ಆರೋಗ್ಯಕರ ವಾತಾವರಣವಿದ್ದಾಗ ಮಾತ್ರ  ದೇಶ ಪ್ರಗತಿ ಸಾಧಿಸಲು ಸಾಧ್ಯ. ಸೇವಾ ಮನೋಭಾವ ಚಿಕ್ಕಂದಿನಿಂದಲೇ
ಅಂತಃಕರಣದಲ್ಲಿ ಅರಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಉದ್ಯೋಗ, ಉನ್ನತ ಶಿಕ್ಷಣ ಹಾಗೂ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ವಿಶೇಷ ಶಿಬಿರ ಸಹಕಾರಿ ಎಂದ ಅವರು ಲಿಂಗ ತಾರತಮ್ಯವಿಲ್ಲದೆ ಎಲ್ಲರಲ್ಲಿಯೂ ಪ್ರೀತಿ, ವಿಶ್ವಾಸ ಸಹಕಾರ ಮನೋಭಾವ ಬೆಳಸಿಕೊಳ್ಳಲು ನೆರವಾಗಲಿದೆ. ಯೋಜನಾ ಕಾರ್ಯಗಳು ಕ್ರಿಯಾಶೀಲವಾದಾಗ ಮಾತ್ರ ಎಲ್ಲೆಡೆ ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಪ್ರೊ.ಸಿ.ಕೃಷ್ಣಪ್ಪ ಯುವ ಜನಾಂಗ ಈ ದೇಶದ ಅಮೂಲ್ಯ ಸಂಪತ್ತು, ಅದು ದೇಶದ ಪ್ರಗತಿಗೆ, ಸಮಾಜದ ಅಭಿವೃದ್ಧಿಗೆ ಸದ್ಬಳಕೆಯಾಗಬೇಕು. ದೇಶದ ಬದಲಾವಣೆಗೆ ಯುವ ಜನ ಕಾಯ, ವಾಚ, ಮನಸಾ ಪರಿಶುದ್ಧ ಭಾವನೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ಬಿಜವರ ಗ್ರಾ.ಪಂ. ಸದಸ್ಯ ಗಂಗಹನುಮಯ್ಯ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷೆ ಸುನಂದ ಸಿದ್ದಪ್ಪ, ಸದಸ್ಯೆ ಮಹಾಲಕ್ಷ್ಮಮ್ಮ, ಕಾಲೇಜು ಆಡಳಿತಾಧಿಕಾರಿ ಬಿ.ಎಂ. ಪ್ರೇಮನಾಥ್, ಪ್ರಾಂಶುಪಾಲ ಡಾ.ಪಿ. ಹನುಮಂತರಾಯ, ಪ್ರೊ.ಎಲ್. ಮಣಿಗಯ್ಯ,ಪ್ರೊ.ರೇವಯ್ಯ, ಶಿಬಿರಾಧಿಕಾರಿ ಬಿ.ಎಸ್. ರಾಜಣ್ಣ, ಮುಖಂಡ ಎಂ.ವಿ. ಮೂಡ್ಲಗಿರೀಶ್, ಬೆಸ್ಕಾಂ ಸಂಜೀವಕುಮಾರ್, ಗಿರೀಶ್,ಶ್ರೀನಿವಾಸರೆಡ್ಡಿ, ವೀರಭದ್ರಯ್ಯ  ಮೊದಲಾದವರು ಉಪಸ್ಥಿತರಿದ್ದರು. ನಂತರ ಶಿಬಿರಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಣೆ ಪಡೆಯಿತು. ರಾಜಣ್ಣ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.