ಸಾಂಸ್ಕೃತಿಕ ಚಟುವಟಿಕೆಯಿಂದ ಮನೋಲ್ಲಾಸ: ಸೋಮೇಶ್ವರನಾಥ
ಶ್ರೀರಂಗಪಟ್ಟಣ: ಮಕ್ಕಳಲ್ಲಿರುವ ಪ್ರತಿಭೆ ಬೆಳಕಿಗೆ ತರಲು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉಪಯುಕ್ತ ಎಂದು ಆದಿಚುಂಚನಗಿರಿ ಮೈಸೂರು ಸಂಸ್ಥಾನ ಶಾಖಾ ಮಠದ ಪೀಠಾಧ್ಯಕ್ಷ ಸೋಮೇಶ್ವರನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕೆಆರ್ಎಸ್ನ ಬಿಜಿಎಸ್ ಶಾಲಾ ವಾರ್ಷಿಕೋತ್ಸವ
ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಲ್ಲಿ ಶಾಲೆಯಲ್ಲೇ ಕಲಿತ ಮಕ್ಕಳು ವರ್ಷದಲ್ಲಿ ಕೊನೆ ದಿನವನ್ನು ತಮ್ಮ ಅನುಭವಕ್ಕೆ ತಕ್ಕಂತೆ ಖುಷಿಯಾಗಿ ಆಟೋಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತೋಷ ಪಡುವರು. ಈ ಸಂತೋಷ ಅವರ ಮುಂದಿನ ತರಗತಿಗೆ ಹೋಗುವ ಉತ್ಸಾಹ ತೋರುತ್ತದೆ. ಜೊತೆಗೆ ಹೆಚ್ಚಿನ ಉಲ್ಲಾಸ ಜೊತೆಗಿರುತ್ತದೆ. ಮಕ್ಕಳ ಚುರುಕು ತನಕ್ಕೆ ಇದು ಪ್ರೋತ್ಸಹ ದೊರೆತಂತೆ ಆಗುತ್ತದೆ ಎಂದರು. ಕೆಆರ್ಎಸ್ ಠಾಣೆ ಪಿಎಸ್ಐ ಪುಟ್ಟಸ್ವಾಮಿ ಅವರು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಮೂವರು ಪೇದೆ ಅಮಾನತು
ಮೈಸೂರು: ಮರಳು ಸಾಗಿಸುತ್ತಿದ್ದ ಲಾರಿಗಳನ್ನು ತಡೆದು ಹಣ ವಸೂಲಿ ಮಾಡಿರುವ ಆರೋಪದಡಿ ಜಿಲ್ಲಾ ಅಪರಾಧ ಪತ್ತೆ ದಳದ (ಡಿಸಿಐಬಿ) ಮೂವರು ಪೇದೆಗಳನ್ನು ಮೈಸೂರು ಜಿಲ್ಲಾ ಎಸ್ಪಿ ಅಭಿನವ್ ಅಶೋಕ್ ಖರೆ ಅಮಾನತುಗೊಳಿಸಿದ್ದಾರೆ. ಡಿಸಿಐಬಿನ ಮುಖ್ಯಪೇದೆ ಪಾಂಡುರಂಗ, ಪೇದೆಗಳಾದ ಗೌರಿಶಂಕರ್ ಮತ್ತು ಮಂಜುನಾಥ್ ಅಮಾನತುಗೊಂಡವರು. ಈ ಮೂವರು ಪೊಲೀಸರು ಬನ್ನೂರು ರಸ್ತೆಯಲ್ಲಿರುವ ಹಾರೋಹಳ್ಳಿ ಬಳಿ ಮರಳು ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದರು ಎಂದು ಮೈಸೂರು ದಕ್ಷಿಣ ಠಾಣೆಯ ಎಸ್ಐ ಮಂಜುನಾಥ್ ಅವರು ಎಸ್ಪಿ ಅವರಿಗೆ ವರದಿ ಸಲ್ಲಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಅಭಿನವ್ ಖರೆ, ಮೂವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

