ತುಮಕೂರು

ಲೋಕಸಭೆ: ವಿಶೇಷ ಕೌಂಟರ್ ಸ್ಥಾಪನೆ

Published On :

ತುಮಕೂರು: ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸುವ ಸಲುವಾಗಿ  ತುಮಕೂರು ಮಹಾನಗರ ಪಾಲಿಕೆಯ ಕಂದಾಯ ಶಾಖೆಯಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದೆ ಎಂದು
ತುಮಕೂರು ಮಹಾನಗರಪಾಲಿಕೆ ಆಯುಕ್ತ  ಅಶದ್ ಷರೀಪ್ ತಿಳಿಸಿದ್ದಾರೆ.
ತುಮಕೂರು ಮಹಾನಗರಪಾಲಿಕೆ ಕಚೇರಿಯಲ್ಲಿ ರಮೇಶ್, ಮೊ.ಸಂ.9663124870 ಎಂಬುವರನ್ನು ನಿಯೋಜಿಸಲಾಗಿದ್ದು, ಅಂತೆಯೇ ತುಮಕೂರು ತಹಸೀಲ್ದಾರ್ ಕಾರ್ಯಾಲಯದಲ್ಲಿ  ಮಹದೇವಪ್ಪ ಮೊ.9164690268, ಶಿವಶಂಕರ್ ಮೊ.9886462440 ಎಂಬುವರನ್ನು ನಿಯೋಜಿಸಲಾಗಿದೆ.
ಇವರನ್ನು ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಕಚೇರಿ ವೇಳೆಯಲ್ಲಿ ಭೇಟಿ ಮಾಡಿ, ನಿಗದಿತ ನಮೂನೆಯ ಅರ್ಜಿಗಳನ್ನು ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಂಬಂಧ ದೂರುಗಳಿದ್ದಲ್ಲಿ ತುಮಕೂರು ಮಹಾನಗರಪಾಲಿಕೆ ದೂರವಾಣಿ ಸಂ. 2272200 ಮತ್ತು 2271200 ಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ವಿಶೇಷ ಮತದಾರರ ನೋಂದಣಿ ಶಿಬಿರವನ್ನು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಈಗಾಗಲೇ ಏರ್ಪಡಿಸಿ, ಮತಗಟ್ಟೆ ಅಧಿಕಾರಿಗಳನ್ನು (ಬಿ.ಎಲ್.ಓ.) ನಿಯೋಜಿಸಿ ಕ್ರಮಬದ್ಧ ಮತದಾರರ ನೋಂದಣಿಯ ನಿಗದಿತ ನಮೂನೆಗಳಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತದಾರರ ನೋಂದಣಿಗೆ ನಿಗದಿತ ನಮೂನೆಯ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 16 ರವರೆಗೆ ಕಾಲಾವಕಾಶವಿದ್ದು, ಆಯಾಯ ಮತಗಟ್ಟೆಗಳಲ್ಲಿ ನಿಯೋಜಿಸಲಾಗಿರುವ ಮತಗಟ್ಟೆ ಅಧಿಕಾರಿಗಳಿಗೆ ಈ ಅರ್ಜಿಗಳನ್ನು ಸಲ್ಲಿಸಬೇಕು.  ತಪ್ಪಿದಲ್ಲಿ ಅವರಿಂದ ಸಹಿ ಪಡೆದು ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸುವಂತೆ ಅವರು ಸೂಚಿಸಿದ್ದಾರೆ.

ಬೆಂಕಿ ಆಕಸ್ಮಿಕ: ಮಹಿಳೆ ಸಾವು
ಕುಣಿಗಲ್:
ಕರೆಂಟ್ ಕೈ ಕೊಟ್ಟ ಕಾರಣ, ಸೀಮೆಎಣ್ಣೆ ಬುಡ್ಡಿ ದೀಪ ಹಚ್ಚಿಕೊಂಡು ಕೆಲಸ ಮಾಡಲು ಮುಂದಾದ ಮಹಿಳೆಗೆ ಆಕಸ್ಮಿಕ ಬೆಂಕಿ ತಗುಲಿ, ಸುಟ್ಟಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುವ ವೇಳೆ  ಮೃತಪಟ್ಟಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ಕಿಯಲ್ಲಿ ನಡೆದಿದೆ. ಹುಲಿಯೂರರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಕೆಬ್ಬಳ್ಳಿ ಗ್ರಾಮದ ಬೋರಯ್ಯ ಎಂಬಾತನ ಮನೆಯಲ್ಲಿ, ಈತನ ಪತ್ನಿ ಜಯಮ್ಮ (50) ಕಳೆದ 7ರಂದು ಮಧ್ಯಾಹ್ನ ವೇಳೆ, ಮನೆಯೊಳಗೆ ಕರೆಂಟ್ ಇಲ್ಲದ ಕಾರಣ, ಸೀಮೆಎಣ್ಣೆ ಬುಡ್ಡಿದೀಪ ಹಚ್ಚಿಕೊಂಡು ಅಡಿಗೆ ಮಾಡಲು ಮುಂದಾದರು. ಆಕಸ್ಮಿಕವಾಗಿ ಆಕೆ ಉಟ್ಟಿದ್ದ ಸೀರೆಗೆ  ತಗುಲಿ, ಬೆಂಕಿ ಹೊತ್ತಿಕೊಂಡು ಸುಟ್ಟಗಾಯಗಳಾದವು. ಕೂಡಲೆ ಆಕೆಯನ್ನು ರಕ್ಷಿಸಿ,108 ವಾಹನದ ಮೂಲಕ ಸ್ಥಳೀಯ ಹುಲಿಯೂರುದುರ್ಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಆಕೆ ಮೃತಪಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಬೋರಯ್ಯ ನೀಡಿದ ದೂರಿನ ಮೇರೆಗೆ ಹುಲಿಯೂರುದುರ್ಗ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.