ಮಹಿಳೆಯರಿಗೆ ವಿಶೇಷ ಕಾನೂನಿನಡಿ ರಕ್ಷಣೆ
ಗುಬ್ಬಿ: ಮಹಿಳೆಯರು ಮತ್ತು ಮಕ್ಕಳು ಸಂರಕ್ಷಣೆಗೆ ಹಲವು ಮಹತ್ವದ ಕಾನೂನು ಸೌಲಭ್ಯಗಳಿದ್ದು ತೊಂದರೆಗೊಳಗಾದ ಮಹಿಳೆಯರು ವಿಶೇಷ ಕಾನೂನಿನಡಿ ಸೂಕ್ತ ರಕ್ಷಣೆ ಪಡೆದುಕೊಂಡು ಉತ್ತಮ ಬದುಕು ಸಾಗಿಸುವಂತೆ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾ. ಎನ್.ನರಸಮ್ಮ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಬಳಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಸಾಂತ್ವನ, ಮಕ್ಕಳ ಸಹಾಯವಾಣಿ ಸಹಯೋಗದಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟಲು ಆಯೋಜಿಸಿದ್ದ ತಾಲೂಕು ಮಟ್ಟದ ಜಾಥಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಮುಗ್ಧ ಮಹಿಳೆಯರ ಅಮಾಯಕತೆಯನ್ನು ಬಳಸಿಕೊಂಡು ವಿದೇಶಕ್ಕೆ ಮಾರಾಟ ಮಾಡುವ ಕೃತ್ಯಗಳು ಸಾಕಷ್ಟು ನಡೆದಿದೆ. ಇದರ ವಿರುದ್ಧ ಮಹಿಳಾ ಸಂಘಟನೆಗಳು, ಸಮಾಜ ಸೇವಕರು ದನಿಯಾಗಬೇಕಿದೆ ಎಂದರು.
ಜೆಎಂಎಫ್ಸಿ ನ್ಯಾಯಾಲಯದ ನ್ಯಾ. ಎಚ್.ಕೆ.ಉಮೇಶ್ ಮಾತನಾಡಿ ಸಾರ್ವಜನಿಕ ಜಾಗೃತಿ ಮೂಡಿಸುವ ಜತೆಯಲ್ಲಿ ಶೋಷಿತರಿಗೆ ಪುನರ್ವಸತಿ, ರಕ್ಷಣೆ, ಪಾಲನೆ, ಸಲಹಾ ಸೇವೆಯ ಪೂರೈಕೆ ನಡೆಸಿ ನ್ಯಾಯ ಒದಗಿಸುವ ಕ್ರಮವನ್ನು ಉಜ್ವಲ ಸಂಸ್ಥೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ತಹಸೀಲ್ದಾರ್ ಸಿದ್ದಪ್ಪ ಮಾತನಾಡಿ ಮಕ್ಕಳ ಮಾರಾಟ ನಿತ್ಯ ಜೀವನದಲ್ಲಿ ಕಾಣುತ್ತಿದ್ದೇವೆ. ಮಕ್ಕಳನ್ನು ಭಿಕ್ಷಾಟನೆ, ಕಳ್ಳತನಕ್ಕೆ ಬಳಸುವುದು, ಮಹಿಳೆಯರನ್ನು ವಿದೇಶಿಗಳಿಗೆ ಮಾರಾಟ ಮಾಡುವುದು, ವೇಶ್ಯವಾಟಿಕೆಗೆ ತಳ್ಳುವುದು ಅವ್ಯಾಹತವಾಗಿ ನಡೆದಿದೆ. ಇದರ ವಿರುದ್ಧ ದೊಡ್ಡ ಮಟ್ಟದ ಸಮರ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಮುದಾಯದ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಮಕ್ಕಳ ಜಾಥದಲ್ಲಿ ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಣಿಕೆ ವಿರುದ್ಧ ಘೋಷಣೆ ಕೇಳಿ ಬಂತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಬಸವರಾಜು, ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಕೆ.ಆರ್. ಹೊನ್ನೇಶಪ್ಪ, ಮುಖ್ಯ ಶಿಕ್ಷಕ ಗಂಗಾಧರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

