ಸಮಾಜದ ಅಂಕುಡೊಂಕು ತಿದ್ದಲು ಕಲಾರಂಗಕ್ಕೆ ಸಾಧ್ಯ
ತುಮಕೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಧೀಮಂತ ಶಕ್ತಿ ಹಾಗೂ ಯುಕ್ತಿ ಇದ್ದದ್ದು ಕಲಾರಂಗಕ್ಕೆ ಮಾತ್ರ ಎಂದು ಕೆ.ಬಿ.ಆರ್. ಡ್ರಾಮಾ ಕಂಪನಿ ಮಾಲೀಕ ಚಿಂದೋಡಿ ಚಂದ್ರಣ್ಣ ಅಭಿಪ್ರಾಯಪಟ್ಟರು.ಅವರು ಇಲ್ಲಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗುಬ್ಬಿ ವೀರಣ್ಣಾಸ್ ಗುಬ್ಬಿ ಡ್ರಾಮಾ ಕಂಪನಿ ವತಿಯಿಂದ ವಿನೋದ ಸದಾರಮೆ ಎಂಬ 25ನೇ ಪ್ರದರ್ಶನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಲಾರಂಗದಿಂದ ವಿವಿಧ ರೀತಿಯ ಸವಾಲುಗಳನ್ನು ಸಮಾಜ ಸರಿದೂಗಿಸಲು ರಂಗಭೂಮಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದ ಅವರು ಇದಕ್ಕೆ ಸಾಕ್ಷಿಯಾಗಿ ಗುಬ್ಬಿ ಕಂಪನಿಯ ನಾಲ್ಕನೇ ತಲೆಮಾರಿನ ವಿನೋದ್ ಗುಬ್ಬಿ ವೀರಣ್ಣ ಬಂದಿದ್ದಾರೆ ಎಂದರು.
ಹರಿಕಥಾ ವಿದ್ವಾನ್ ವಿದ್ವಾನ್ ಡಾ. ಲಕ್ಷ್ಮಣದಾಸ್ ಮಾತನಾಡಿ ಗುಬ್ಬಿ ಕಂಪನಿಯ ಶತಮಾನೋತ್ಸವವನ್ನು ಆಚರಿಸಿ ಅತ್ಯಾಧುನಿಕ ಜಗತ್ತಿಗೆ ಹಿಂದಿನ ಕಲೆಯ ಜೀವವನ್ನು ಬೆಳಗಿಸುವುದರ ಮೂಲಕ ಜೀವ ತುಂಬುತ್ತಾ ಬಂದಿದೆ ಎಂದರು. ಹೆಬ್ಬಾಕ ಸಿದ್ಧಲಿಂಗಪ್ಪ, ಎನ್.ಎಸ್. ಮೂರ್ತಿ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮವನ್ನು ಮಹದೇವಯ್ಯ ಉದ್ಘಾಟಿಸಿದರು. ಜಯರಾಜ್, ರಾಜೇಶ್ ಗುಬ್ಬಿ, ಜಯಣ್ಣ, ಉಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

