ಅಕ್ರಮ ಮರಳು: ವಾಹನ ವಶಕ್ಕೆ ಪಡೆದ ಗ್ರಾಮಸ್ಥರು
ಕುಣಿಗಲ್: ಅಕ್ರಮ ಮರಳುಸಾಗಣೆ ನಿಯಂತ್ರಿಸುವಲ್ಲಿ ಕಂದಾಯ, ಪೊಲೀಸ್ ಇಲಾಖೆ ವೈಫಲ್ಯ ಖಂಡಿಸಿದ ಗ್ರಾಮಸ್ಥರೆ ಕಾರ್ಯಾಚರಣೆ ನಡೆಸಿ, ಅಕ್ರಮ ಮರಳುಸಾಗಾಣೆಯಲ್ಲಿ ನಿರತವಾಗಿದ್ದ ವಾಹನಗಳನ್ನು ಪೊಲೀಸರ ವಶಕ್ಕೆ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹುಲಿಯೂರುದುರ್ಗ ಹೋಬಳಿಯಲ್ಲಿನ ಉಜ್ಜಿನಿ ಗ್ರಾಮದ ಸಮೀಪವಿರುವ ನಿಡಸಾಲೆಕೆರೆ ಸ್ಥಳೀಯ ಆಡುಭಾಷೆಯಲ್ಲಿ ಶಿವನಹಳ್ಳಿಕೆರೆ ಸುಮಾರು 400 ಎಕರೆ ವಿಸ್ತೀರ್ಣಹೊಂದಿದೆ. ಈಕೆರೆಗೆ ಹೊಂದುಕೊಂಡಂತೆ ದೊಡ್ಡತೊರೆಯು ಇದ್ದು, ಸದರಿ ತೊರೆಯಲ್ಲಿ ಈಗಾಗಲೆ ನೂರಾರು ಲೋಡ್ ಮರಳು ಸಾಗಾಣೆ ನಡೆಸಿದ ಮರಳುಮಾಫೀಯದವರು, ಈಗ ಕೆರೆಯಲ್ಲಿ ಸಂಗ್ರಹವಾಗಿರುವ ಮರಳು ಎತ್ತುವಳಿಗೆ ಲಾಬಿ ನಡೆಸಿದ್ದು, ಗ್ರಾಮದಲ್ಲಿ ಟ್ರ್ಯಾಕ್ಟರ್ ಮಾಲೀಕರಿಗೆ ಹಣದ ಆಮಿಷ ತೋರಿಸಿ, ಜೆಸಿಬಿ ಸಹಾಯದಿಂದ ದೊಡ್ಡ ಹೊಂಡಗಳನ್ನು ತೆಗೆದು, ಮುಖ್ಯರಸ್ತೆಯ ಬದಿಯಲ್ಲಿನ ಗೋಮಾಳದಲ್ಲಿ ರಾಶಿಹಾಕಿ, ರಾತ್ರಿವೇಳೆ ಹತ್ತುಚಕ್ರದ
ಬೃಹತ್ ಲಾರಿಗಳಲ್ಲಿ ತುಂಬಿಸಿ, ಕಳ್ಳಮಾರ್ಗದಮೂಲಕ ಬೆಂಗಳೂರಿಗೆ ಸಾಗಿಸುವ ದಂಧೆ ನಡೆಸುತ್ತಿದ್ದಾರೆ. ಅಕ್ರಮಮರಳು ಸಾಗಾಣೆ ದಂಧೆಯಿಂದಾಗಿ, ಗ್ರಾಮದ ಬಹುತೇಕ ಕೊಳವೆಬಾವಿಗಳಲ್ಲಿ ನೀರಿನಮಟ್ಟ ಕುಸಿದು
ಸ್ಥಗಿತಗೊಳ್ಳುವಂತಾದ್ದರಿಂದ ಎಚ್ಚೆತ್ತ ಉಜ್ಜಿನಿ ಗ್ರಾಮಸ್ಥರಾದ ಸಿ.ಸತೀಶ, ಸಂಪತ್,ದೀಪಕ, ಸತೀಶ, ಕುಮಾರ, ಕೃಷ್ಣಪ್ಪ, ದೇವರಾಜ, ಇತರೆ ಉಜ್ಜಿನಿ ಗ್ರಾಮಸ್ಥರು ಅಕ್ರಮ ಮರಳುಸಾಗಣೆ ನಿಯಂತ್ರಿಸುವಂತೆ ಕಂದಾಯ, ಲೋಕೋಪಯೋಗಿ, ಪೊಲೀಸ್ ಇಲಾಖಾಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ.
ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖರಾದ ಸತೀಶ್ಗೆ ಮರಳುಸಾಗಣೆ ಮಾಫಿಯ ಕೊಲೆ ಬೆದರಿಕೆ ಹಾಕಿದ್ದರಿಂದ ರೋಸಿಹೋದ ಗ್ರಾಮಸ್ಥರು ಶುಕ್ರವಾರ ರಾತ್ರಿ ಕೆರೆಯಿಂದ ಅಕ್ರಮ ಮರಳು ಸಾಗಣೆಯಲ್ಲಿ ನಿರತವಾಗಿದ್ದ ತಂಡದಮೇಲೆ ದಾಳಿ ನಡೆಸಿ ಒಂದು ಜೆಸಿಬಿ, ಮೂರು ಹತ್ತುಚಕ್ರದ ಮರಳು ತುಂಬಿದ ಲಾರಿಗಳನ್ನು ಶನಿವಾರ ರಾತ್ರಿ ಎರಡು ಲಾರಿಗಳನ್ನು ಹುಲಿಯೂರು ದುರ್ಗಪೊಲೀಸರ ವಶಕ್ಕೆ ನೀಡಿದರು. ಅಕ್ರಮರಳು ಸಾಗಣೆ ವಿರುದ್ಧ ಪೊಲೀಸರಿಗೆ ವಾಹನ ನೀಡಿದ್ದರೂ ಕ್ರಮ ಕೈಗೊಳ್ಳದ ಬಗ್ಗೆಅಸಮಾಧಾನ ವ್ಯಕ್ತಪಡಿಸಿದರು.
ಘಟನೆಗೆ ಸಂಬಂಧಿಸಿದಂತೆ ಅಕ್ರಮಮರಳು ಸಾಗಾಣೆಯಲ್ಲಿ ನಿರತರಾಗಿದ್ದ ಜಯಣ್ಣ, ಕೃಷ್ಣ, ಲೋಕಿ ಎಂಬುವವರ ವಿರುದ್ಧ ದೂರು ನೀಡಿದ್ದು ಸ್ಥಳೀಯ ಪೊಲೀಸರು ಸ್ಪಂದಿಸದ ಕಾರಣ, ಡಿವೈಎಸ್ಪಿಯವರಿಗೆ ದೂರು ಸಲ್ಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

