ಅಪ್ರತಿಮ ಜನನಾಯಕ ಮೋದಿ: ಸುರೇಶ್ ಗೌಡ
ತುಮಕೂರು: ಅತ್ಯಂತ ಕಡಿಮೆ ಅವಧಿಯಲ್ಲಿ ವಿಶ್ವದ ಅತ್ಯಂತ ಮೇರು ಶಿಖರಕ್ಕೆ ಬೆಳೆದು ವಿಶ್ವದ ಗಮನ ಸೆಳೆದಿರುವ ಅಪ್ರತಿಮ ಜನನಾಯಕ ನರೇಂದ್ರ ಮೋದಿ ಎಂದು ಶಾಸಕ ಬಿ. ಸುರೇಶ ಗೌಡರು ಬಣ್ಣಿಸಿದರು ಅವರು ಸಿರಿವರ ಗ್ರಾಮದಲ್ಲಿ ನಡೆದ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ದೇಶದ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಈ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಆಯ್ಕೆ ಆಗಬೇಕು. ಮೋದಿಯವರನ್ನು ಪ್ರಧಾನ ಮಂತ್ರಿಯನ್ನಗಿ ಮಾಡುವುದೇ ನಮ್ಮ ನಿಮ್ಮೆಲ್ಲರ ಗುರಿ. ಈ ಗುರಿ ಮುಟ್ಟುವವರೆಗೆ ಹಗಲಿರುಳೆನ್ನದೆ ಕಾರ್ಯಕರ್ತರು ಟೊಂಕ ಕಟ್ಟಿ ಚುನಾವಣಾ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು
ಮೋದಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಗುಜರಾತ್ ಮುಖ್ಯಮಂತ್ರಿಯಾಗಿ ಈಗಾಗಲೇ ಯಶಸ್ವಿಯಾಗಿ ಗುಜರಾತನ್ನು ಅಭಿವೃದ್ಧಿಯತ್ತ ಕೊಂಡೊಯ್ದಿರುವ ದಕ್ಷ. ಸರ್ವಧರ್ಮ ಸಮಭಾವದ ಭ್ರಷ್ಟಾಚಾರ ರಹಿತ ಜನಪರ ಆಡಳಿತಕ್ಕಾಗಿ ನರೇಂದ್ರಮೋದಿಯವರೇ ಪ್ರಧಾನಮಂತ್ರಿಯಾಗಲು ಅರ್ಹ ಹಾಗೂ ಸೂಕ್ತ ಎಂಬುದಾಗಿ ಜನತೆಯ ದೃಢ ನಿಲುವು ಆಗಿದೆ. ಈ ನಿಟ್ಟಿನಲ್ಲಿ ಬರುವಂತ ಲೋಕಸಭಾ
ಚುನಾವಣೆ ನಮ್ಮೆಲ್ಲರ ಪ್ರತಿಷ್ಠೆಯ ಚುನಾವಣೆ ಇದಾಗಿದ್ದು ಕಾರ್ಯಕರ್ತರು ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗೊತ್ತಿ ಚುನಾವಣಾ ಕಾರ್ಯದಲ್ಲಿ ಭಾಗವಹಿಸಲು ಕರೆ ನೀಡಿದರು.
ಜಿ.ಎಸ್. ಬಸವರಾಜು ಉತ್ತಮ ಸಂಸದೀಯ ಪಟುವಾಗಿದ್ದು ಜಿಲ್ಲೆಯ ಅಭಿವೃದ್ಧಿಗೆ ವಿಶೇಷವಾಗಿ ಬಯಲುಸೀಮೆ ಜಿಲ್ಲೆಗಳಿಗೆ ನದಿ ನೀರು ಹರಿಸಲು ನೀರಾವರಿ ಹಕ್ಕೋತ್ತಾಯ ಮಂಡಿಸುವಲ್ಲಿ ಮೂಂಚೂಣಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

