ಮುದ್ದಹನುಮೇಗೌಡರೂ ಪಕ್ಷಾಂತರಿಯೇ: ಜಿಎಸ್ಬಿ
ಚಿಕ್ಕನಾಯಕನಹಳ್ಳಿ: ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡುವಾಗ ನನ್ನ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ಅಭ್ಯರ್ಥಿಮುದ್ದಹನುಮೇಗೌಡರು ತಾವು ಪಕ್ಷಾಂತರಿಯೇ ಎಂಬುದನ್ನು ಅರಿತು ಮಾತನಾಡಬೇಕೆಂದು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ವಾಗ್ದಾಳಿ ನಡೆಸಿದರು.
ಅವರು ತಾಲೂಕಿನ ಶಕ್ತಿದೇವತೆ ಮಲ್ಲೀಗೆರೆ ಕರಿಯಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದರು.
ಗೌಡರು ಕಾಂಗ್ರೆಸ್ನಿಂದ ಜೆಡಿಎಸ್ಗೆ, ಜೆಡಿಎಸ್ನಿಂದ ಕಾಂಗ್ರೆಸ್ಗೆ ಮರಕೋತಿಯಾಟವಾಡಿದ್ದಾರೆ. ಮುದ್ದಹನುಮೇಗೌಡರು ನನ್ನ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನು ಉಳಿಸಿಕೊಂಡಿದ್ದಾರೆ ಎಂಬುದನ್ನು ಜನತೆಯ ಮುಂದೆ ಹೇಳಲಿ ಎಂದು ಸವಾಲು ಹಾಕಿದರು. ನಾನು 4 ಬಾರಿ ಸಂಸದನಾಗಿ ಕ್ಷೇತ್ರಕ್ಕೆ ಯಾವ ಕೆಲಸವನ್ನು ಮಾಡಿಲ್ಲ. ಹಾಗೂ ಕೇಂದ್ರದಿಂದ ಯಾವುದೇ ರೀತಿ ವಿಶೇಷ ಅನುದಾನವನ್ನು ತರುವಲ್ಲಿ ವಿಫಲನಾಗಿದ್ದೇನೆಂದು ಟೀಕಿಸಿರುವ ಅವರು ಚುನಾವಣೆಗಳ್ಲಲಿ ಸೋತು ಮನೆಯಲ್ಲಿ ಕೂತವರಿಗೆ ನನ್ನ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಅವರ ಮನೆಗೆ ಕಳುಹಿಸಿ ಕೊಡುವ ದರ್ದು ಬಂದಿಲ್ಲ. ಸೋತು ಮನೆಯಲ್ಲಿ ಮಲಗಿದ್ದವರು ದಿಢೀರನೆ ಪಕ್ಷಾಂತರ ಮಾಡಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ, ಯಾವುದೇ ಪೂರ್ವಾಪರ ತಿಳಿವಳಿಕೆಯಿಲ್ಲದೆ ಮನಬಂದಂತೆ ಮಾತನಾಡುವುದು ಸಭ್ಯರ ಲಕ್ಷಣವಲ್ಲ. ಇದಕ್ಕೆ ಚುನಾವಣೆಯಲ್ಲಿ ಜನರೇ ಅವರಿಗೆ ಉತ್ತರ ನೀಡಲಿದ್ದಾರೆ ಎಂದರು.
ಹಲವು ಯೋಜನೆ: ನನ್ನ ಅವಧಿಯಲ್ಲಿ 1.35 ಲಕ್ಷ ಕೋಟಿ ರು.ಗಳ ಯೋಜನೆಗಳಳನ್ನು ಕ್ಷೇತ್ರದ ಅಭಿವೃದ್ಧಿಗೆ ತರಲಾಗಿದೆ. ಅದರಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಮೂಲಭೂತ ಸೌಕರ್ಯಗಳ ತಯಾರಿಕೆ ವಲಯ ಜಿಲ್ಲೆಗೆ ಮಂಜೂರಾಗಿದ್ದು,3.5 ಲಕ್ಷ ಮಂದಿಗೆ ಉದ್ಯೋಗ ದೊರಕಲಿದೆ. 765 ಕೋಟಿ ರು. ಕೇಂದ್ರ ಸರ್ಕಾರದಿಂದ ಎಚ್ಎಎಲ್ ಸ್ಥಾಪನೆಗೆ ಸಾಗರನಹಳ್ಳಿಯ ಹತ್ತಿರ ಮಾರಶೆಟ್ಟಿಹಳ್ಳಿ ಬಳಿ 600 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ನೀಡಿದ್ದು, 8 ಸಾವಿರ ಕೋಟಿ ಯೋಜನೆ ಚಾಲನೆಯಲ್ಲಿದೆ. ಇಲ್ಲಿ ಹೆಲಿಕಾಪ್ಟರ್, ಲಘುವಿಮಾನಗಳ ಬಿಡಿಭಾಗಗಳ ತಯಾರಿಕೆ ಕೇಂದ್ರವಾಗಿ ಸಾವಿರಾರು ಜನರಿಗೆ ಕೆಲಸ ಹಾಗೂ ಜಿಲ್ಲೆಯ ಹೆಗ್ಗಳಿಕೆಗೆ ಕಾರಣವಾಗಿದೆ. ಚೆನ್ನೈ-ಚಿತ್ರದುರ್ಗದ ಕಾರಿಡಾರ್ಗೆ ಒಪ್ಪಿಗೆ ದೊರೆತಿದೆ. 500 ಕೋಟಿ ಫುಡ್ಪಾರ್ಕ್ ಯೋಜನೆ ಕಾರ್ಯರೂಪವಾಗುತ್ತಿದ್ದು,1800 ಜನರಿಗೆ ಕೆಲಸ ಸಿಗಲಿದೆ. ದಾವಣಗೆರೆ-ತುಮಕೂರು ರೈಲು ಮಾರ್ಗ ಮಂಜೂರಾಗಿ ಚಾಲನೆಯಲ್ಲಿದೆ. ತುಮಕೂರು-ಚಾಮರಾಜನಗರ ರೈಲು ಮಾರ್ಗ ಮಂಜೂರಾಗಿದೆ.
ನನ್ನ 30 ವರ್ಷದ ರಾಜಕಾರಣದಲ್ಲಿ ಹೃದಯ ಬೇನೆಗೆ ತುತ್ತಾದಾಗ ಮಾತ್ರ ಒಂದು ವಾರಕಾಲ ಚಿಕಿತ್ಸೆ ಕಾರಣದಿಂದ ಆಸ್ಪತ್ರೆಯಲ್ಲಿ ಮಲಗಿದ್ದು ಬಿಟ್ಟರೆ ಶ್ರಮಪಟ್ಟು ಕೆಲಸ ಮಾಡಿದ್ದೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

