ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಶ್ಲಾಘನೀಯ
ತುರುವೇಕೆರೆ: ದೇಶವನ್ನು ಕುಡಿತದಿಂದ ಮುಕ್ತರನ್ನಾಗಿಸಬೇಕು. ಸರ್ವರಿಗೂ ಗೌರವ ದೊರೆಯಬೇಕು. ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನ ಲಭಿಸಬೇಕು.
ಆಕೆಯೂ ಸಮಾಜದ ಕಣ್ಣಾಗಬೇಕು ಎಂಬ ಅಭಿಲಾಶೆ ಹೊಂದಿದ್ದ ರಾಷ್ಟ್ರಪಿತ ಮಹಾತ್ಮ ಗಾಧಿಯವರ ಕನಸನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಕಾರ್ಯಗತ ಮಾಡುತ್ತಿದ್ದಾರೆ ಎಂದು ಕಲ್ಪತರು ಆಶ್ರಮದ ಪ್ರಸನ್ನನಾಥ ನಂದಸ್ವಾಮೀಜಿ ಹೇಳಿದರು. ತಾಲೂಕಿನ ಸೊರವನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಯೋಜನೆಯ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ನಡೆದ ವಲಯದ ಮೂರು ವರ್ಷಗಳ ಸಾಧನಾ ಸಮಾವೇಶದ ಹಾಗೂ ಜ್ಞಾನವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಿದ್ದರು.
ಕಣ್ಣೀರೊರೆಸುವ ಯೋಜನೆ: ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮಹಿಳೆ ಹಾಗೂ ಪುರುಷರ ಜಾಗೃತಿ ಶಿಬಿರಗಳನ್ನು ನಡೆಸುತ್ತಿರುವುದು ಜನರು ಸಜ್ಜನರಾಗಲು ಅವಕಾಶವಾಗಿದೆ. ಆದಿಚುಂಚನಗಿರಿ ಮಠವೂ ಸಹ ಗ್ರಾಮೀಣಾಭಿವೃದ್ಧಿಗೆ ಕಂಕಣ ಬಧ್ಧವಾಗಿದೆ. ಎರಡೂ ಕ್ಷೇತ್ರಗಳ ಗುರಿ ಜನರನ್ನು ಸದಾಶಯದತ್ತ ತೆಗೆದುಕೊಂಡು ಹೋಗುವುದೇ ಆಗಿದೆ ಎಂದರು. ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಯೋಜನೆಯಿಂದ ನಡೆಸಲಾಗುತ್ತಿರುವ ಮದ್ಯವರ್ಜನಾ ಶಿಬಿರವಂತೂ ಗ್ರಾಮೀಣ ಮಹಿಳೆಯರ ಕಣ್ಣೀರೊರೆಸುವ ಕಾಮಧೇನುವಾಗಿದೆ ಎಂದು ಪ್ರಸನ್ನನಾಥ ನಂದ ಸ್ವಾಮೀಜಿ ಹೇಳಿದರು. ಯೋಜನಾಧಿಕಾರಿ ಪ್ರವೀಣ್ ಕುಮಾರ್ ಮಾತನಾಡಿ ಯೋಜನೆಯ ಉದ್ದೇಶ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

