ಮೋದಿ ದೇಶದ ಭರವಸೆಯ ನಾಯಕ: ಸುರೇಶ್ಗೌಡ
ತುಮಕೂರು: ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲಿ ಭಾರತವನ್ನು ಮೂಂಚೂಣಿಗೆ ಕೊಂಡೊಯ್ಯಬಲ್ಲ ಸಾಮರ್ಥ್ಯ ಇರುವ ಭಾರತದ ಭರವಸೆಯ ನಾಯಕ ನರೇಂದ್ರಮೋದಿ ಎಂದು ಶಾಸಕ ಬಿ ಸುರೇಶ್ ಗೌಡರು ಬಣ್ಣಿಸಿದರು.
ಅವರು ತುಮಕೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಕೆಸರಮಡು ಪಂಚಾಯ್ತಿ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಶಾಸಕ ಬಿ. ಸುರೇಶ್ ಗೌಡರು ಮಾತನಾಡಿದರು. ಈ ದೇಶಕ್ಕೆ ಪ್ರಧಾನಿಯಾಗಿ ನರೇಂದ್ರ ಮೋದಿ, ಜಿಲ್ಲೆಯ ಸಂಸದರಾಗಿ ಜಿ.ಎಸ್. ಬಸವರಾಜು ಆಯ್ಕೆ ನಿಶ್ಚಿತ ಎಂದು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ಅತ್ಯಂತ ಭರವಸೆಯ ನಾಯಕ ನರೇಂದ್ರ ಮೋದಿ ಎಂದು ಪ್ರತಿಪಾದಿಸಿದ ಬಿ. ಸುರೇಶ್ ಗೌಡರು 2014 ರ ಚುನಾವಣೆಯಲ್ಲಿ 275 ಕ್ಕಿಂತ ಹೆಚ್ಚಿನ ಸಂಸದರು ಬಿಜೆಪಿಯಿಂದ ಆಯ್ಕೆಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಿಂದ ಬಸವರಾಜು ಆಯ್ಕೆ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಶಿಸ್ತು ಬದ್ಧ ಪಕ್ಷವಾಗಿದ್ದು ಸಾಮಾನ್ಯ ಒಬ್ಬ ಕಾರ್ಯಕರ್ತನೂ ಕೂಡಾ ಪ್ರಧಾನಿ ಆಗಬಹುದು, ಮುಖ್ಯಮಂತ್ರಿಯಾಗಬಹುದು, ಮಂತ್ತಿಯಾಗಬಹುದು, ಶಾಸಕರಾಗಬಹುದು ಎಂದು ತಿಳಿಸುತ್ತಾ ಇದಕ್ಕೆ ಉದಾಹರಣೆ ಸುರೇಶ್ಗೌಡ ಎಂದರು. ನನಗೆ ನನ್ನ ಕುಟುಂಬಕ್ಕೆ ಯಾವುದೇ ರಾಜಕೀಯ ನಂಟು ಇರಲಿಲ್ಲ. ಆದರೂ ಸಾಮಾನ್ಯ ಕಾರ್ಯಕರ್ತನಾದ ನನಗೆ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ 2 ಬಾರಿ ಶಾಸಕರಾಗಿ ಒಮ್ಮೆ ಮೈಸೂರ್ ಪೇಪರ್ ಮಿಲ್ಲ್ ಅಧ್ಯಕ್ಷನಾಗಿ ಮಾಡಿದ ಪಕ್ಷ ಬಿಜೆಪಿ ಎಂದು ತಿಳಿಸುತ್ತಾ ಈ ರಾಷ್ಟ್ರದ ಚಿತ್ರಣವನ್ನು ಬದಲಿಸುವಂತ ಸಾಮರ್ಥ್ಯ ಇರುವ ಅಭಿವೃದ್ಧಿ ಮತ್ತು ಓಳ್ಳೆಯ ಚಿಂತನೆ ರಾಷ್ಟ್ರದ ಕಲ್ಪನೆ ಉಳ್ಳ ಪಕ್ಷವಾದ ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಮೋದಿಯವರು ರಾಷ್ಟ್ರೀ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಗುಜರಾತ್ ಸಿಎಂ ಆಗಿ ಸ್ತುಸ್ತ್ಯ ಕಾರ್ಯ ಮಾಡಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

