ನೀರು ಕೊಡದಿದ್ದರೆ ಮತದಾನ ಬಹಿಷ್ಕಾರ
ಕುಣಿಗಲ್: ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡದಿದ್ರೆ ಮತದಾನ ಬಹಿಷ್ಕಾರ ಮಾಡುವುದಾಗಿ ಸಿದ್ದರಾಮನಪಾಳ್ಯ ಗ್ರಾಮಸ್ಥರು ತಾಪಂ ಇಒರೊಂದಿಗೆ ವಾಗ್ವಾದ ನಡೆಸಿದರು.
ತಾಲೂಕಿನ ಹುತ್ರಿದುರ್ಗ ಹೋಬಳಿಯ ಜೋಡಿಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಸಿದ್ದರಾಮನಪಾಳ್ಯದಲ್ಲಿ ಕಳೆದ ಒಂದೂವರೆ ತಿಂಗಳಿಂದಲೂ ಕುಡಿಯುವ ನೀರು ಪೂರೈಕೆಯಾಗಿಲ್ಲ. ಇದ್ದ ಎರಡು ಬೋರ್ವೆಲ್ಳಲ್ಲಿ ನೀರಿಲ್ಲದಂತಾಗಿದ್ದು, ಗ್ರಾಮದ ಪರದಾಡುವಂತಾಗಿದೆ. ಜೊತೆಗೆ ವಿದ್ಯುತ್ ಸಮಸ್ಯೆ ತೀವ್ರವಾಗಿರುವ ಪರಿಣಾಮ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.
ಗ್ರಾಪಂ ಪದಾಧಿಕಾರಿಗಳು, ಜಿಪಂ ಎಇಇರನ್ನು ಸಂಪರ್ಕಿಸಿದಾಗ ನೀತಿ ಸಂಹಿತೆ ಇರುವ ಕಾರಣ ಹೊಸಬೋರ್ವೆಲ್ ಕೊರೆಯುವುದಾಗಲಿ, ಪರ್ಯಾಯ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳು ಅನುಮತಿ ಪಡೆಯಬೇಕು ಅಲ್ಲಿಯವರೆಗೂ ಏನು ಮಾಡಲಾಗದು ಎಂಬ ಅಸಹಾಯಕತೆ ವ್ಯಕ್ತಪಡಿಸಿದರು. ಇದರಿಂದ ರೋಸಿಹೋದ ಗ್ರಾಮಸ್ಥರು ಶಾಸಕ ಡಿ. ನಾಗರಾಜಯ್ಯ ಬಳಿ ಅಹವಾಲು ಸಲ್ಲಿಸಿದ್ದು, ಶಾಸಕರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಗ್ರಾಮಸ್ಥರಾದ ರಾಮಣ್ಣ, ಗಂಗಾಧರ, ಕುಮಾರ, ನಂಜಯ್ಯ, ಶ್ರೀನಿವಾಸ, ರವಿಕಿರಣ, ಭದ್ರಯ್ಯ, ದೊಡ್ಡಯ್ಯ, ಲಕ್ಷ್ಮಣ ಇತರರು ತಾಪಂ ಇಒ ಶಂಕರಪ್ಪರಿಗೆ ಮನವಿ ಸಲ್ಲಿಸಿ ನೀರು ಪೂರೈಸದಿದ್ದಲ್ಲಿ ಮತದಾನ ಬಹಿಷ್ಕಾರದ ಬೆದರಿಕೆ ಹಾಕಿದ್ದಾರೆ. ಮನವಿಗೆ ಸ್ಪಂದಿಸಿದ ತಾಪಂ ಇಒ ಶಂಕರಪ್ಪ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ನೀರು ಪೂರೈಸಲು ಆಗ್ರಹ: ತಾಲೂಕಿನ ಎಡೆಯೂರು ಹೋಬಳಿಯ ನಾಗಸಂದ್ರ ಗ್ರಾಮದಲ್ಲಿ ಈಗಾಗಲೆ ಕೊರೆಸಲಾಗಿರುವ ಕೊಳವೆ ಬಾವಿಯಿಂದ ಗ್ರಾಮಕ್ಕೆ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಗ್ರಾಪಂ ಸದಸ್ಯ ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಾಗಸಂದ್ರ ಗ್ರಾಮದಲ್ಲಿ ಕೊಳವೆಬಾವಿ ಕೊರೆಸಿದ್ದು, ಗುತ್ತಿಗೆದಾರರು ಹಸ್ತಾಂರಿಸದ ಕಾರಣ ನೀರಿನ ತೊಂದರೆಯಿಂದ ಗ್ರಾಮಸ್ಥರು ಪರದಾಡುವಂತಾಗಿದ್ದು, ಕ್ರಮ ಕೈಗೊಳ್ಳುವಂತೆ ಸದಸ್ಯ ತಿಮ್ಮಪ್ಪ ಇತರರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

