ಅಲ್ಪರ ಮಾತಿಗೆ ಪ್ರತಿಕ್ರಿಯೆ ನೀಡಲಾರೆ: ಬಸವರಾಜು
ಚಿಕ್ಕನಾಯಕನಹಳ್ಳಿ: ಅಲ್ಪರ ಸಂಘ ಮಾನಭಂಗ ಎಂಬಂತೆ, ಅಲ್ಪರ ಮಾತುಗಳಿಗೆ ನಾನು ಪ್ರತಿಕ್ರಿಯಸುದಕ್ಕೆ ನನ್ನ ಸಮಯ ಹಾಳು ಮಾಡಲು ಇಚ್ಚಿಸುವುದಿಲ್ಲ ಎಂದು ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಹೇಳಿದರು.
ಮಾ.29ರಂದು ತಾಲೂಕಿನಲ್ಲಿ ಪ್ರಚಾರದ ನಿಮಿತ್ತ ಆಗಮಿಸಿದ್ದ ಸಂದರ್ಭದಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ತಮ್ಮ ಬಗ್ಗೆ ಅಸಭ್ಯವಾಗಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿ ಈ ಪ್ರಕ್ರಿಯೆ ನೀಡಿದರು. ಹೆಲಿಕಾಪ್ಟರ್ ಕಾರ್ಖಾನೆ ವಿಚಾರದ ಬಗ್ಗೆ ಮಾತನಾಡಿ, 8 ವರ್ಷಗಳ ಹಿಂದೆ ನಾನೇ ಅದನ್ನು ತಾಲೂಕಿಗೆ ಮಂಜೂರು ಮಾಡಿಸಿದ್ದು ಎಂದು ಶಾಸಕರು ಹೇಳಿದ್ದಾರೆ. ಆದರೆ ಎಚ್ಎಎಲ್ ಛೇರ್ಮನ್ಯಾರೆಂಬುದು ಅವರಿಗೆ ಗೊತ್ತಿದೆಯೇ, ರಕ್ಷಣಾ ಸಚಿವರನ್ನು ಭೇಟಿ ಮಾಡಲು ಇವರಿಗೆ ಸಾಮರ್ಥ್ಯವಿದೆಯೆ, ಪ್ರಚಾರಕ್ಕಾಗಿ ಪಕ್ಷದ ವೇದಿಕೆಯಲ್ಲಿ ಬಾಯಿಗೆ ಬಂದಂತೆ ಮಾತಾನಾಡುವುದನ್ನು ಬಿಟ್ಟು ಚರ್ಚೆಗೆ ಬರಲಿ,ಅವರ ಆಹ್ವಾನವನ್ನು ಸ್ವೀಕರಿಸುತ್ತೇನೆ ಎಂದರು. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕ, ಸರ್ಕಾರ ಪೈಪ್ ಲಾಭಿಗೆ ಮಣಿದು ನೀರಾವರಿ ತಜ್ಞ ಪರಮಶಿವಯ್ಯನವರ ವರದಿಯನ್ನು ಗಾಳಿಗೆ ತೂರಿ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ಮಾಡಲು ಈ ಸರ್ಕಾರವೇ ಕಾರಣಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

