ಬೆಂಕಿ ಆಕಸ್ಮಿಕ: ಲಕ್ಷಾಂತರ ರು. ನಷ್ಟ
ಶಿರಾ: ಹೊಲವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು 1000 ಕ್ಕೂ ಹೆಚ್ಚು ವಿವಿಧ ತೋಟಗಾರಿಕೆ ಮರ ಗಿಡಗಳು ಬೆಂಕಿಗಾಯುತಿಯಾಗಿ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ತಾಲೂಕಿನ ಬರಗೂರು ಸಮೀಪದ ಹೊಲದಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದ್ದು, ಹೊಲದ ಮಾಲೀಕ ಸಿದ್ದಯ್ಯ ಎಂಬುವವರಿಗೆ ಆಗದವರು ಈ ಘಟನೆಗೆ ಕಾರಣರಾಗಿದ್ದಾರೆ ಎಂದು ಮಾಲೀಕ ಸಿದ್ದಯ್ಯ ಶಂಕಿಸಿದ್ದು ಈ ಬೆಂಕಿ ಅನಾಹುತದಲ್ಲಿ 1000 ಕ್ಕೂ ಹೆಚ್ಚು ದಾಳಿಂಬೆ ಗಿಡ, 1000 ಅಡಕೆ, ಮಾವು ಗಿಡಗಳು, 300 ಕ್ಕೂ ಹೆಚ್ಚು ತ್ಯಾಗದ ಗಿಡಗಳು, 150 ಸರ್ವೇ ಮರಗಳು ಸೇರಿದಂತೆ ಸುಮಾರು 10 ಎಕರೆಯಲ್ಲಿ ಹಾಕಲಾಗಿದ್ದ ಹನಿ ನೀರಾವರಿ ಪೈಪುಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಲು ಶ್ರಮಿಸಿದ್ದ ಪ.ನಾ.ಹಳ್ಳಿ ಠಾಣಾಧಿಕಾರಿಗಳು ಹಾಗೂ ಬರಗೂರು ಉಪ ಠಾಣಾಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

