ಟಿಪ್ಪು ಧೈರ್ಯ, ಶೌರ್ಯ ಯುವ ಜನಾಂಗಕ್ಕೆ ಆದರ್ಶ
ತುಮಕೂರು: ದೇಶಕ್ಕಾಗಿ ಹೋರಾಟ ಮಾಡಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಧೈರ್ಯ, ಶೌರ್ಯಗಳು ಇಂದಿನ ಯುವ ಜನಾಂಗಕ್ಕೆ ಆದರ್ಶಪ್ರಾಯವಾಗಬೇಕು ಎಂದು ತುಮಕೂರು ಜಿಲ್ಲಾ ಅಹಿಂದ ಸಂಘಟನೆಯ ಅಧ್ಯಕ್ಷ ಡಾ.ಬಿ. ಯಲ್ಲಪ್ಪ ಅಭಿಪ್ರಾಯಪಟ್ಟರು.
ನಗರದ ಕೆ. ಲಕ್ಕಪ್ಪ ವೃತ್ತದ ಬಳಿ ಇರುವ ಜಿಲ್ಲಾ ಅಹಿಂದ ಸಂಘಟನೆ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿಪ್ಪು ಅವರು ಅಪ್ರತಿಮ ಹೋರಾಟಗಾರರಾಗಿದ್ದು ಬ್ರಿಟೀಷರ ವಿರುದ್ಧ ಹಲವು ಯುದ್ಧಗಳನ್ನು ಮಾಡಿದ್ದರು ಎಂದರು.
ನಾಲ್ಕು ಬಾರಿ ನಡೆದಂತಹ ಮೈಸೂರು ಯುದ್ಧದಲ್ಲಿ ಮೂರು ಹಾಗೂ ನಾಲ್ಕನೇ ಯುದ್ಧದಲ್ಲಿ ಟಿಪ್ಪು ಬ್ರಿಟೀಷರೊಂದಿಗೆ ಸೋಲುತ್ತಾನೆ. ಮೂರನೇ ಯುದ್ದದಲ್ಲಿ ಸೋತು ತನ್ನ ಇಬ್ಬರು ಮಕ್ಕಳನ್ನು ಅಡವಿಡುವಂತಹ ಪರಿಸ್ಥಿತಿಗೆ ಬರುತ್ತಾನೆ ಟಿಪ್ಪು. ಇನ್ನು ನಾಲ್ಕನೇ ಯುದ್ಧದ ವೇಳೆ ಯುದ್ಧದಲ್ಲಿ ಸೋತು ಶ್ರೀರಂಗಪಟ್ಟಣದ ಸುರಂಗಮಾರ್ಗದ ಮೂಲಕ ತಪ್ಪಿಸಿಕೊಳ್ಳುವ ಸಮಯದಲ್ಲಿ ಬ್ರಿಟೀಷರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ದೇಶಕ್ಕಾಗಿ ಹೋರಾಟ ಮಾಡಿದ ಟಿಪ್ಪು ಕೊನೆಗೆ ದೇಶಕ್ಕಾಗಿಯೇ ತನ್ನ ಪ್ರಾಣವನ್ನು ಬಲಿದಾನ ಮಾಡಿದರು ಎಂದವರು ಟಿಪ್ಪು ಅವರ ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಹಿಂದೂ ವಿರೋಧಿ ಅಲ್ಲ: ಟಿಪ್ಪು ಹಿಂದೂ ವಿರೋಧಿ ಎಂದು ಕೆಲವರು ಆರೋಪಿಸುತ್ತಾರೆ. ಆದರೆ ಅದು ಸತ್ಯಕ್ಕೆ ದೂರವಾದುದು. ಟಿಪ್ಪು ಒಬ್ಬ ವೀರ ಸಾಧಕ.
ಹಿಂದೂ ಧರ್ಮದ ಬಗ್ಗೆ ಅಪಾರ ಗೌರವವುಳ್ಳ ವ್ಯಕ್ತಿಯಾಗಿದ್ದ ಎಂಬುದಕ್ಕೆ ಆತನ ಕಾಲದಲ್ಲಿ ಕನ್ನಡದಲ್ಲಿ ನಡೆಯುತ್ತಿದ್ದ ವ್ಯವಹಾರಗಳೇ ಸಾಕ್ಷಿ.
ಆದರೆ ಇದನ್ನು ಅರಿಯದ ಕೆಲವರು ಟಿಪ್ಪು ಒಬ್ಬ ಹಿಂದೂ ವಿರೋಧಿ ಎಂದು ಹೇಳಿದ್ದಾರೆಯೇ ಹೊರತು ಟಿಪ್ಪು ಹಿಂದೂ ಧರ್ಮ ವಿರೋಧಿಯಲ್ಲ ಎಂದು ತಿಳಿಸಿದರು.
ಅಹಿಂದ ಸಂಘಟನೆಯ ಉಪಾಧ್ಯಕ್ಷ ಮುಸ್ತಾಕ್ ಅಹಮದ್ ಅವರು ಮಾತನಾಡುತ್ತಾ, ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಟಿಪ್ಪು ಹೆಸರನ್ನು ಎಲ್ಲೆಡೆ ಪಸರಿಸುವ ಸಲುವಾಗಿ ಟಿಪ್ಪು ಜಯಂತಿಯಂದು ಸಾರ್ವಜನಿಕ ರಜೆ ನೀಡಬೇಕು. ಪ್ರತಿ ವರ್ಷ ಟಿಪ್ಪು ಹುಟ್ಟುಹಬ್ಬ ಹಾಗೂ ಹುತಾತ್ಮವಾದ ದಿನವನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ಮಾಡಬೇಕುಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

