ತುಮಕೂರು

ಕಲ್ಪತರು ಮಕ್ಕಳ ಸಾಂಸ್ಕೃತಿಕ ವೇದಿಕೆ

Published On :

ತಿಪಟೂರು: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹಾಗೂ ವಿದೇಶ ಕಲೆ ಸಂಸ್ಕೃತಿಗಳ ಹಾವಳಿಯಿಂದಾಗಿ ದೇಶಿಯ ಗ್ರಾಮೀಣ ಕಲೆಗಳು ಮೂಲೆ ಗುಂಪಾಗಿರುವ ಇಂಥ ಕಾಲದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವ ಮಹತ್ಕಾರ್ಯದ ಕಾಯಕಲ್ಪವನ್ನು ತಾಲೂಕಿನ ಸಾರ್ಥವಳ್ಳಿಯ ಕಲ್ಪತರು ಮಕ್ಕಳ ಸಾಂಸ್ಕೃತಿ ವೇದಿಕೆ ಮಾಡುತ್ತಿದೆ.
 ಜಾನಪದ ಕಲೆಗಳಾದ ಸೋಮನಕುಣಿತ, ನಂದಿಧ್ವಜ ಕುಣಿತ, ವೀರಗಾಸೆ, ಅರೆಕಹಳೆ, ಮಂಗಳವಾದ್ಯಗಳನ್ನು ಪ್ರತಿವರ್ಷ ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಪ್ರದರ್ಶಿಸುತ್ತಾ ಬಂದಿದೆ.
 ಇದೇ ಗ್ರಾಮದ ಕೆಲ ಯುವಶಕ್ತಿಗಳು ಒಗ್ಗೂಡಿ ಈ ವರ್ಷದಿದ ರಂಗನಾಟಕಗಳು, ಯಕ್ಷಗಾನ, ಪೌರಾಣಿಕ ನಾಟಕಗಳನ್ನು ಪ್ರತಿವರ್ಷ  ಪ್ರದರ್ಶಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುವುದು ಈ ವೇದಿಕೆಯ ಮುಖ್ಯ ಉದ್ದೇಶ. ವಿಶ್ವರಂಗಭೂಮಿ ದಿನದಂದೆ ಪ್ರಾರಂಭವಾದ ಈ ಕಲಾಪೋಷಕವೃಂದ ಸತತ ಪ್ರಯತ್ನದಿಂದ ಕಾರ್ಯಸಾಧನೆ ಮಾಡಿ ಈ ಭಾಗದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
 ಈ ವರ್ಷದ ವೇದಿಕೆಯ ಮೊದಲ ಪ್ರಯೋಗವಾಗಿ ಶಾಲಾ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿ ಮುಂದೆ ಇವರನ್ನು ಗ್ರಾಮದಲ್ಲಿ ದೊಡ್ಡ ದೊಡ್ಡ ಕಲಾವಿಧರನ್ನಾಗಿ ಮಾಡುವ ಯೋಜನೆಯೊಂದಿಗೆ ಸುಮಾರು 20 ಮಕ್ಕಳನ್ನು ಆಯ್ಕೆ ಮಾಡಿಕೊಂಡು ಪೌರಾಣಿಕ ನಾಟಕದ ಎಲ್ಲಾ ಪಾತ್ರಗಳಲ್ಲಿ ಅಭಿನಯಿಸುವ ಉತ್ಸಾಹವನ್ನು ತುಂಬಿದ ಫಲವಾಗಿ ಶ್ರೀಕೃಷ್ಣಾರ್ಜುನ ಕಾಳಗ ಎಂಬ ನಾಟಕದ ಪ್ರಸಂಗವನ್ನು ಅತ್ಯಂತ ಯಶಸ್ವಿಯಾಗಿ ಈ ಮಕ್ಕಳು ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ್ದಾರೆ.
 ಗ್ರಾಮದಲ್ಲಿ ಹುಟ್ಟಿಬೆಳೆದು ಯುವಕರಾಗಿ ಹತ್ತಾರು ನಾಟಕಗಳಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿ ಇದೀಗ ಕಲೆಯನ್ನು ಮೈಗೂಡಿಸಿಕೊಂಡು ಮಕ್ಕಳ ಅಭಿನಯಿಸುತ್ತಿರುವ ಎಲ್ಲಾ ನಾಟಕಗಳಿಗೂ ಭಾಗವತಿಕೆ, ನಿರ್ದೇಶಕ ನೀಡುವಲ್ಲಿ ಎಸ್.ಶಿವಣ್ಣನವರು ಕಂಕಣಬದ್ಧರಾಗಿದ್ದಾರೆ. ಇವರ ನಿಸ್ವಾರ್ಥ ಕಲಾಸೇವೆ ಬೇರೆ ಕಲಾವಿದರಿಗೆ ಮಾರ್ಗದರ್ಶನವೇ ಸರಿ.
 ಮಕ್ಕಳಿಗಾಗಿ ವಾದ್ಯಗೋಷ್ಠಿಯಲ್ಲಿ ಸೇವೆ ಸಲ್ಲಿಸುತ್ತಿರುವ ತಬಲ, ಮೃದಂಗ ಕಲಾವಿದರಾದ ಬಸವರಾಜು, ಹಾರ್ಮೋನಿಯಂ ಮರುಳಪ್ಪ, ಹಿರಿಯ ವಾದ್ಯಗೋಷ್ಠಿ ಕಲಾವಿದರಾದ ನಾರಾಯಣಪ್ಪ,ನಂಜುಂಡನಾಯ್ಕ, ಬಸವರಾಜು, ಎಚ್.ಎನ್. ಗಂಗಾಧರ್ ಮತ್ತು ಎಸ್. ಶಿವಕುಮಾರ್ ಸ್ವಾರ್ಥವಳ್ಳಿ, ಶಿವ ವಿದ್ಯಾಸಂಸ್ಥೆ ಹಾಗೂ ಗ್ರಾಮಸ್ಥರ ಸಹಕಾರ ಮಕ್ಕಳ ಪ್ರತಿಭೆಗೆ ಬೆನ್ನೆಲುಬಾಗಿದ್ದಾರೆ.  ಹೀಗೆ ಇವೆರೆಲ್ಲರ ಸಹಕಾರ ಮಕ್ಕಳ ಕಲಾ ಉತ್ಸಾಹದಿಂದ ಈವರೆಗೆ ಕೇವಲ ಅತ್ಯಲ್ಪಕಾಲಾವಧಿಯಲ್ಲಿ ಮೂರ್ನಾಲ್ಕು ಪ್ರದರ್ಶನ ನೀಡಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.