ಪ್ರೆಸಿಡೆನ್ಸಿ ಕಾಲೇಜು ಉತ್ತಮ ಫಲಿತಾಂಶ
ಶಿರಾ: ನಗರದ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97.10 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ 138 ವಿದ್ಯಾರ್ಥಿಗಳಲ್ಲಿ 44 ಅತ್ಯುತ್ತಮ ಶ್ರೇಣಿ, 85 ಪ್ರಥಮ ಶ್ರೇಣಿ ಹಾಗೂ 05 ದ್ವಿತೀಯ ಶ್ರೇಣಿ ಪಡೆದಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿ ಸಾಗರೀಕಾ ಶ್ರೀ ಒಟ್ಟು 584 ಅಂಕಗಳೊಂದಿಗೆ ಶೇ.97.33 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. (ಭೌತಶಾಶ್ತ್ರ 100), ಶ್ರದ್ಧಾ 578 ಅಂಕಗಳೊಂದಿಗೆ ಶೇ.96.33 (ಗಣಿತ 100), ದೀಪಾ ಪಿ. 95.83 (ಗಣಿತ 100, ರಸಾಯನಶಾಸ್ತ್ರ 100), ಭುವನೇಶ್ವರಿ 95.5, ಹರ್ಷಪ್ರದ 94.83, ನಳಿನ ಬಿಕೆ 94.83, ಮಧುಗೌಡ 94.5, ಶಮಂತ್ ವೈ.ಬಿ 94.33, ಪವನ್ ಜಿ. 94, ಶಶಿಕುಮಾರ್ ನಾಯಕ್ 93.5, ದೀಪ್ತಿ 93.17, ಭಾವನಾ 92.83, ಶ್ರೀಧರ್ 92.33, ರಶ್ಮಿತಾ 92.17, ಭಾನುಪ್ರಿಯ 92, ಸುಷ್ಮಾ 91.83 (ಕನ್ನಡ 100), ಚೈತ್ರಾ ಸಿ 91.17, ಅಕ್ಷತಾ 91, ನಯನಾ 90.83, ದಿವ್ಯಾ ಜಿ 90.67, ಬಿಂದು 90.5, ಕಾವ್ಯಾ 90.5, ಹರ್ಷ 90.17 ರಷ್ಟು ಫಲಿತಾಂಶ ಪಡೆದಿದ್ದಾರೆ.
ನಿಮಿಷಾಂಬ ಜಯಂತ್ಯುತ್ಸವ
ಮಧುಗಿರಿ: ಪಟ್ಟಣದ ಐತಿಹಾಸಿಕ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸೋಮವಂಶ ಕ್ಷತ್ರೀಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮೇ 9ರ ಶುಕ್ರವಾರ ಕುಲದೇವತೆ ಶ್ರೀ ನಿಮಿಷಾಂಬ ಜಯಂತ್ಯುತ್ಸವ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶಂಕರ್ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಲೋಕ ಕಲ್ಯಾಣಾರ್ಥಕವಾಗಿ ಈ ವಿಶೇಷ ಪೂಜೆ ಮತ್ತು ಹೋಮ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಿದೆ. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ
ತುಮಕೂರು: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಚಿಕ್ಕನಾಯಕನಹಳ್ಳಿ ಖಾಸಗಿ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಎಚ್.ಎಂ. ರಘು, ಹನುಮಂತಯ್ಯ ಮತ್ತು ಚುರುಮುರಿ ಗುರು ಬಂಧಿತ ಆರೋಪಿಗಳು. ಇವರು ಬುಧವಾರ ರಾತ್ರಿ ಚಿಕ್ಕನಾಯಕನಹಳ್ಳಿ ಖಾಸಗಿ ಬಸ್ ನಿಲ್ದಾಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳ ಬಗ್ಗೆ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ 49 ಸಾವಿರದ 940 ರು.ಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಸವಿ ಜಯಂತಿ ಇಂದು
ಹುಳಿಯಾರು: ಪಟ್ಟಣದ ಆರ್ಯವೈಶ್ಯ ಮಂಡಳಿ, ವಾಸವಿ ಯುವಜನ ಸಂಘ, ಆರ್ಯವೈಶ್ಯ ಮಹಿಳಾ ಸಂಘ ಮತ್ತು ಆರ್ಯವೈಶ್ಯ ಕನ್ಯಕಾಪರಮೇಶ್ವರಿ ಸಹಕಾರ ಸಂಘದ ಸಹಯೋಗದಲ್ಲಿ ಶ್ರೀಕನ್ನಿಕಾಪರಮೇಶ್ವರಿಯ 23ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಾಸವಿ ಜಯಂತಿ ಶುಕ್ರವಾರ ಪಟ್ಟಣದ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ನಡೆಯಲಿದೆ. ಕನ್ನಿಕಾಪರಮೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ಸುಮಂಗಲಿಯರಿಂದ ಆರತಿ ಸೇವೆ ಹಾಗೂ ಕನ್ಯಕಾ ಬಾಲನಗರು ಪೂಜೆ ನಡೆಯಲಿದೆ. ತಂಬಿಟ್ಟಿನ ಸ್ಪರ್ಧೆ, ಹೆಣ್ಣುಮಕ್ಕಳಿಗೆ ವಿವಿಧ ಆಟದ ಸ್ಪರ್ರ್ಧೆಗಳು ನಡೆಯಲಿವೆ. ನಾಸಿಕ್ ಡೋಲು ವಾದ್ಯದೊಂದಿಗೆ ದೇವಿಯ ರಾಜಬೀದಿ ಉತ್ಸವ ಜರುಗಲಿದೆ.
ಶಿಕ್ಷಣ ಅದಾಲತ್
ಮಧುಗಿರಿ: ತುಮಕೂರು ಉತ್ತರ ಮಧುಗಿರಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕರ ಕಚೇರಿಯಲ್ಲಿ ಮೇ 15ರಂದು ಶಿಕ್ಷಣ ಅದಾಲತ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 9 ರಿಂದ 4ಗಂಟೆ ವರೆಗೆ ಬಾಕಿ ಕಡತಗಳ ವಿಲೇವಾರಿ ಸಮಯ ನಿಗಧಿಪಡಿಸಲಾಗಿದೆ. ಆದ ಕಾರಣ ಈ ಬಗ್ಗೆ ತಮ್ಮ ಅಹವಾಲುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಉಪನಿರ್ದೇಶಕರಿಗೆ ಸಲ್ಲಿಸಿ ಇತ್ಯರ್ಥ ಪಡಿಸಿಕೊಳ್ಳುವಂತೆ ಉಪನಿರ್ದೇಶಕ ಟಿ.ಎಸ್. ಆಂಜನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

