ರೈತ ಸಂಘ ಖಂಡನೆ
ಕುಣಿಗಲ್: ಪಶುಸಂಗೋಪನೆ ಸಂಚಿವರೂ ಅಗಿರುವ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ, ಗೋಮಾಳ ಪ್ರದೇಶವನ್ನು ಕೈಗಾರಿಕೆ ಸ್ಥಾಪನೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಭೂಕಾಯಿದೆಗೆ ತಿದ್ದುಪಡಿ ತರುವುದಾಗಿ ಹೇಳಿರುವುದು ಖಂಡನೀಯ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಅನಂದ್ ಪಟೇಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪಶುಗಳಿಗೆ ಈಗಾಗಲೆ ಮೇವಿನ ಕೊರತೆ ಎದುರಾಗಿದ್ದು, ಗೋಮಾಳ ಪ್ರದೇಶದಲ್ಲಿ ಬೆಳೆಯುವ ಮೇವನ್ನು ಆಶ್ರಯಿಸಿ ಪಶು ಸಂಕುಲ ಇದೆ. ಇಂತಹ ಸಮಯದಲ್ಲಿ ಕೇವಲ ಉದ್ದಿಮೆದಾರರನ್ನು ಓಲೈಸಲು ಪಶುಗಳಿಗೆ ಮಾರಕವಾದ ಕ್ರಮಕ್ಕೆ ಮುಂದಾಗಿರುವುದು ಸಚಿವರ ಬೆಜವಾಬ್ದಾರಿತನ ಎಂದರು.
ದೇಶೀಯ ಹಸುಗಳ ತಳಿ ಸಂಶೋಧನೆಗೆ ಗೋಮಾಳ ಪ್ರದೇಶವನ್ನು ಪೂರಕವಾಗಿ ಬಳಸಿಕೊಂಡು, ದೇಸೀಯ ತಳಿಗಳ ವೃದ್ಧಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾದ ಪಶುಸಂಗೋಪನ ಸಚಿವರೆ ತಮ್ಮ ಸ್ಥಾನದ ಘನತೆ ಮರೆತು ಮನಬಂದಂತೆ ಹೇಳಿಕೆ ನೀಡಿದ್ದಾರೆ. ಇನ್ನಾದರೂ ಸಚಿವರುಗೋಮಾಳ ಪ್ರದೇಶಗಳಲ್ಲಿ ಪಶು ಸಂಪತ್ತಿಗೆ ಪೂರಕವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಸಚಿವರು ಗೋಮಾಳ ಪ್ರದೇಶವನ್ನು ಕೈಗಾರಿಕೆ ಉದ್ದೇಶಕ್ಕೆ ಬಳಸಲು ಮುಂದಾದರೆ ರೈತ ಸಂಘದ ವತಿಯಿಂದ ಉಗ್ರ ಪ್ರತಿರೋಧ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

