ತುಮಕೂರು

ಖಾತ್ರಿ ಹಣ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Published On :

ಚಿಕ್ಕನಾಯಕನಹಳಿ : ಯೋಜನೆಗಳ ಬಗ್ಗೆ ಅರಿವಿಲ್ಲದೆ ಶಾಸಕರು, ಉದ್ಯೋಗ ಖಾತ್ರಿ ಹಣ ಬಿಡುಗಡೆ ಬಗ್ಗೆ ತಾಲೂಕು ಪಂಚಾಯ್ತಿಯನ್ನು ಹೊಣೆಗಾರಿಕೆ ಮಾಡುವ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ಶಾಸಕರಿಗೆ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಕಿವಿಮಾತು ಹೇಳಿದರು.  
ಇಲ್ಲಿನ ತಾಲೂಕು ಕಚೇರಿ ಎದುರು ಉದ್ಯೋಗ ಖಾತ್ರಿ ಹಣ ಬಿಡುಗಡೆ ಮಾಡುವ ಬಗ್ಗೆ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.  ಶಾಸಕರು ಈ ಹೋರಾಟದಲ್ಲಿ ಭಾಗವಹಿಸಬೇಕಿತ್ತು. ಅವರೇನು ಆಡಳಿತ ಪಕ್ಷದ ಶಾಸಕರಲ್ಲ, ಕೂಲಿ ವಿಚಾರದಲ್ಲಿ ರಾಜಕೀಯ ಮಾಡುವ ಇರಾದೆ ನನಗಿಲ್ಲ.  ಕಾನೂನು ಬದ್ಧವಾಗಿ ಎನ್ಆರ್ಇಜಿ ಯೋಜನೆಯಲ್ಲಿ ಪ್ರತಿನಿತ್ಯ ಕಾರ್ಮಿಕರಿಗೆ  ಕೂಲಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಆದರೆ, ವಾರಕ್ಕೊಮ್ಮೆ ಜಮಾಮಾಡುತ್ತಿದ್ದಾರೆ. ಅಧಿಕಾರಿಗಳ ಈ ನಿಧಾನ ಕಾರ್ಯದಿಂದ ರು.18 ರಿಂದ 20 ಕೋಟಿ ಕಾಮಗಾರಿ ಎನ್ಎಂಆರ್ ಇಲ್ಲದ ಕಾಮಗಾರಿಯಾಗಿದೆ.
ಹಣ ಬಿಡುಗಡೆಯಾಗಿಲ್ಲದಿರುವ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ತಿಳಿಸುವಲ್ಲಿ ಎಡವಿದ್ದಾರೆ. ಈ ಯೋಜನೆಗೆ ಹಣದ ಕೊರತೆ ಇಲ್ಲದಿರುವ ಬಗ್ಗೆ ಅರಿವಿಲ್ಲದ ಶಾಸಕರು, ಹಣ ಬಿಡುಗಡೆಯಲ್ಲಿ ಆಗಿರುವ ವಿಳಂಬದ ಹೊಣೆಗಾರಿಕೆಯನ್ನು ತಾಲೂಕು ಪಂಚಾಯ್ತಿಯ ಮೇಲೆ ಹಾಕಲು ಹೋಗಿ ಶಾಸಕರು ತಮ್ಮ ತಾಂತ್ರಿಕ ಜ್ಞಾನದ ಕೊರತೆ ಒಪ್ಪಿಕೊಂಡಂತಾಗಿದೆ. ಹಣ ಬಿಡುಗಡೆ ವಿಳಂಬಕ್ಕೆ ನೀತಿ ಸಂಹಿತೆ ಸಕಾರಣವಲ್ಲ, ನೀತಿ ಸಂಹಿತೆಗೂ ಕೂಲಿ ಹಣಬಿಡುಗಡೆ ವಿಳಂಬಕ್ಕೂ ಸಂಬಂಧವೇ ಇಲ್ಲ ಎಂದು ವ್ಯಂಗ್ಯವಾಡಿದರು.
ಶಾಸಕರು ವಿಫಲ: ತಾಲೂಕಿನಲ್ಲಿ ಗುರಿ ಮೀರಿ 1ಲಕ್ಷದ 25ಸಾವಿರ ಕಾರ್ಮಿಕರ ನೋಂದಣಿಯಾಗಿದೆ. ಇದರ ಸಾಚಾತನದ ಬಗ್ಗೆ ಸಂಶಯವಿದೆ. ಇದನ್ನು ಪತ್ತೆ ಹಚ್ಚುವಲ್ಲಿ ಶಾಸಕರು ವಿಫಲವಾಗಿದ್ದಾರೆ.  ಇಂದಿನ ಪ್ರತಿಭಟನೆ ಸಾಂಕೇತಿಕವಾಗಿದ್ದು, ಮುಂಬರುವ ದಿನಗಳಲ್ಲಿ ಇದನ್ನು ಜಿಲ್ಲಾ ಮಟ್ಟಕ್ಕೆ ಕೊಂಡೊಯ್ಯಲು ನಾವು ಶಕ್ತರಿದ್ದೇವೆ ಎಂದು ಎಚ್ಚರಿಸಿದರು.
ಎಪಿಎಂಸಿ ಅಧ್ಯಕ್ಷರಾದ ಎನ್.ಎಂ.ಶಿವರಾಜ್, ಜಿಲ್ಲಾ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾಪಂ ಉಪಾಧ್ಯಕ್ಷ ಜಯಣ್ಣ, ಸದಸ್ಯರಾದ ನಿರಂಜನಮೂರ್ತಿ, ಲತಾ, ಶಶಿಧರ್, ಜಿಪಂ ಸದಸ್ಯೆ ಲೋಹಿತಾಬಾಯಿ,ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಟಿ.ಬಿ.ಶಂಕರಲಿಂಗಯ್ಯ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.