ತುಮಕೂರು

ದಾರ್ಶನಿಕರ ತತ್ವಾದರ್ಶ ಸಮಾಜಕ್ಕೆ ಅಗತ್ಯ

Published On :

ತಿಪಟೂರು: ಅಂಬೇಡ್ಕರ್ ಮತ್ತು ಬಸವಣ್ಣನವರು ಎಲ್ಲಾ ಕಾಲಕ್ಕೂ ಸಲ್ಲುವಂತಹ ವಿಚಾರಧಾರೆಗಳನ್ನು ಸಮಾಜದ ಶ್ರೇಯೋಭಿವೃದ್ಧಿಗಾಗಿ ನೀಡಿದ್ದು, ಇಂತಹ ದಾರ್ಶನಿಕರ ತತ್ವಾದರ್ಶಗಳು ಆಧುನಿಕ ಸಮಾಜಕ್ಕೆ ಪ್ರಸ್ತುತ ಎಂದು ಉಪನ್ಯಾಸಕ ಡಾ.ಎಲ್.ಎಂ. ವೆಂಕಟೇಶ್ ತಿಳಿಸಿದರು.
ಪಟ್ಟಣದ ನಿವೃತ್ತ ನೌಕರರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಸವೇಶ್ವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು
ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮನೋಭಾವನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವರ್ಗ, ವರ್ಣ,ಲಿಂಗ ಭೇದದ ವಿರುದ್ಧ ಹೋರಾಡಿ ಜೀವನವನ್ನೇ ಮುಡಿಪಾಗಿಟ್ಟರು. ಇಡೀ ಜಗತ್ತೇ
ಬೆರಗಾಗುವಂತೆ ಸಾಮಾಜಿಕ ಕ್ರಾಂತಿಯನ್ನು 800 ವರ್ಷಗಳ ಹಿಂದೆಯೇ ಬಸವಣ್ಣನವರು ರೂಪಿಸಿದರೆ, ಅಂಬೇಡ್ಕರ್ ಅವರು ಆಧುನಿಕ ಯುಗದ ಕ್ರಾಂತಿಕಾರನಾಗಿ, ಹಿಂದುಳಿದ ವರ್ಗಗಳ ಏಳ್ಗೆಗಾಗಿ ಶ್ರಮಸಿದರು. ಇಂತಹ ಮಹಾನ್ ಪುರುಷರ ಜಯಂತಿಗಳು ಜಾಗತೀಕರಣದ ಸಂದರ್ಭದಲ್ಲಿ ತಮ್ಮ ಸಂಸ್ಕೃತಿಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯಶಸ್ವಿಯಾಗುತ್ತಿವೆ ಎಂದರು.
ನಿವೃತ್ತಿ ಸಹಕಾರಿ ಸಂಘದ ಅಧ್ಯಕ್ಷರಾದ ಮಹದೇವಯ್ಯ ಮಾತನಾಡಿ ಇಂತಹ ಸಂಘ-ಸಂಸ್ಥೆಗಳಿಗೆ ಬಸವ ಮತ್ತು ಅಂಬೇಡ್ಕರ್ ಸೇರಿದಂತೆ ದಾರ್ಶನಿಕರ ಚಿಂತನೆಗಳು ಪ್ರೇರಕ ಶಕ್ತಿಯಾಗಬೇಕೆಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಟಿ.ಜಿ.ಶಂಕರೇಗೌಡ ಮಾತನಾಡಿ ಸಂಘವು ನಿವೃತ್ತ ನೌಕರರ ಏಳ್ಗೆಗಾಗಿ ಸದಾ ಕಾಲ ಶ್ರಮಿಸುತ್ತಿದ್ದು,ನಿವೃತ್ತ ನೌಕರರಿಗೆ ವೈದ್ಯಕೀಯ ಸೌಲಭ್ಯ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಲೂಕು ನೌಕರರ ಸಂಘದ ಬ್ರಹ್ಮಚಾರ್ ಅವರವನ್ನು ಸನ್ಮಾನಿಸಲಾಯಿತು. ದೀನದಯಾಳು ಶಾಲೆಯ ಕಾರ್ಯದರ್ಶಿ ಗಂಗಣ್ಣ, ಸಂಘದ ಪ್ರ.ಕಾರ್ಯದರ್ಶಿ ಬಾಲಕೃಷ್ಣ, ಸದಸ್ಯರಾದ ಗಂಗಾಧರ್, ಪರಶುರಾಮನಾಯಕ್, ಖಜಾಂಚಿ ಚೆನ್ನಬಸವಯ್ಯ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.